ಸಿಯುಕೆಯಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಆಚರಣೆ

ಕಲಬುರಗಿ:ಸೆ.12:”ಹದಿಹರೆಯದವರು ಮತ್ತು ಯುವಕರಲ್ಲಿ ಆತ್ಮಹತ್ಯೆಯು ಸಾವಿಗೆ ಎರಡನೇ ಅತಿ ದೊಡ್ಡ ಕಾರಣವಾಗಿದೆ” ಎಂದು ಸಿಕಂದರಾಬಾದ್‍ನ ಸ್ವೀಕರ್ ಅಕಾಡೆಮಿ ಆಫ್ ರಿಹ್ಯಾಬಿಲಿಟೇಶನ್‍ನ ಕ್ಲಿನಿಕಲ್ ಸೈಕಾಲಜಿಯ ಪ್ರಾಧ್ಯಾಪಕ ಡಾ. ಸರೋಜ್ ಆರ್ಯ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯ ಮನೋವಿಜ್ಞಾನ ವಿಭಾಗದ ವತಿಯಿಂದ ನಡೆದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ ಜನರು ಆತ್ಮಹತ್ಯೆಯ ಪ್ರಮಾಣವನ್ನು ಕಡಿಮೆ ಮಾಡಲು ಕೌಗೊಳ್ಳಬಹುದಾದ ಮಾರ್ಗಗಳು ಮತ್ತು ವಿಧಾನಗಳ ಕುರಿತು ಚರ್ಚಿಸುತ್ತಾ ಅವರು ಹೇಳಿದರು,
“ನಾವು ಜಾಗೃತಿ ಮೂಡಿಸುವ ಮೂಲಕ ಮತ್ತು ಆತ್ಮಹತ್ಯಾ ಕಾರ್ಯಗಳಿಗೆ ಪರ್ಯಾಯ ಕ್ರಮಗಳನ್ನು ಉತ್ತೇಜಿಸುವ ಮೂಲಕ ಭರವಸೆಯನ್ನು ಹುಟ್ಟುಹಾಕಬಹುದು. ಆತ್ಮಹತ್ಯಾ ಕ್ರಿಯೆಯ ಅಪಾಯದಲ್ಲಿರುವವರಿಗೆ ಮತ್ತು ಬದುಕುಳಿದವರಿಗೆ ಬೆಂಬಲ ನೀಡಲು ನಾವು ಬೆಳಕಾಗಬಹುದು. ಆತ್ಮಹತ್ಯಾ ಕೃತ್ಯದ ಮೂಲಕ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಕೌನ್ಸೆಲಿಂಗ್ ಮಾಡುವ ಅಗತ್ಯವಿದೆ. ಆನರು ಸ್ವಯಂ ಸ್ಥೈರ್ಯ ಆತ್ಮವಿಸ್ವಾಸ ಮೂಡಿಸಿಕೊಳ್ಳುವ ಮೂಲಕ ಹಾಗು ಇತರರ ಬೆಂಬಲವನ್ನು ಪಡೆಯುವ ಮೂಲಕ ಆತ್ಮಹತ್ಯೆಯನ್ನು ನಿಗ್ರಹಿಸಬಹುದು” ಎಂದು ಹೇಳಿದರು.
ಕುಲಪತಿ, ಪೆÇ್ರ.ಬಟ್ಟು ಸತ್ಯನಾರಾಯಣ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ, ”ಆತ್ಮಹತ್ಯೆಗೆ ಒಳಗಾಗುವ ಯುವ ವಯಸ್ಕರ ಬಗ್ಗೆ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಇಂತಹ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದರಿಂದ ಈ ಸಮಸ್ಯೆಯನ್ನು ಪರಿಹರಿಸುವುದು ಎಲ್ಲಾ ಶಿಕ್ಷಕರು ಮತ್ತು ಮಧ್ಯಸ್ಥಗಾರರ ಕರ್ತವ್ಯವಾಗಿದೆ. ಮಾದಕ ವ್ಯಸನ ಮತ್ತು ಮದ್ಯಪಾನದಂತಹ ಅಂಶಗಳು ಇಂತಹ ಕ್ರಮಗಳನ್ನು ತೆಗೆದುಕೊಳ್ಳಲು ಪ್ರರೆಪಣೆ ನೀಡುತ್ತಿರುವುದರಿಂದ ಅವುಗಳನ್ನು ನಿಯಂತ್ರಿಸುವುದು ಅವಶ್ಯಕವಗಿದೆ” ಎಂದು ಅವರು ಹೇಳಿದರು.
ಸಿಯುಕೆಯ ಶೈಕ್ಷಣಿಕ ನಿರ್ದೇಶಕ, ಪೆÇ್ರ.ಬಸವರಾಜ ಪಿ.ಡೋಣೂರ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಜನರು ತಮ್ಮನ್ನು ತಾವು ನಿಭಾಯಿಸಲು ಅಸಮರ್ಥರಾಗಿರುವುದರಿಂದ ಅವರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಮಾತನಾಡುವವರು ತಪ್ಪಿತಸ್ಥ ಭಾವನೆಯಿಂದ, ಖಿನ್ನತೆಯಿಂದ ಬಳಲುತ್ತಿರುತ್ತಾರೆ ಮತ್ತು ಅವರು ತಮ್ಮನ್ನು ತಾವು ನಿಭಾಯಿಸಲು ಕಷ್ಟಪಡುತ್ತಾರೆ ಹಾಗಾಗಿ ಇತರರ ಸಹಾಯ ಬಹಳ ಮುಖ್ಯ” ಎಂದು ಹೇಳಿದರು.

ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪೆÇ್ರ. ರೊಮೇಟ್ ಜಾನ್ ಮಾತನಾಡಿ, “ಮನೋವಿಜ್ಞಾನದ ಹಿನ್ನೆಲೆಯಿಲ್ಲದ ಜನರು ಆತ್ಮಹತ್ಯೆ ತಡೆಗಟ್ಟುವಲ್ಲಿ ಭಾಗವಹಿಸುವುದು ಮತ್ತು ಅವರಲ್ಲಿ ತಿಳುವಳಿಕೆ ಮೂಡಿಸುವುದು ನಿಜವಾಗಿಯೂ ಪ್ರಶಂಸನೀಯವಾಗಿದೆ. ಅಂತಹ ಕಾರ್ಯಕ್ರಮಗಳ ಭಾಗವಾಗಿ ಅವರು ದ್ವಾರಪಾಲಕರಂತೆ ಕಾರ್ಯನಿರ್ವಹಿಸುತ್ತಾರೆ. ಅವರನ್ನು ಮನಶ್ಶಾಸ್ತ್ರಜ್ಞರು ಅಥವಾ ಆಪ್ತ ಸಲಹೆಗಾರರಲ್ಲಿಗೆ ಕೊಂಡೊಯ್ಯುವ ಮೂಲಕ ಆತ್ಮಹತ್ಯೆ ದರಗಳನ್ನು ಕಡಿಮೆ ಮಾಡಲು ಕೆಲಸ ಮಾಡಬಹುದಾಗಿದೆ” ಎಂದು ಹೇಳಿದರು.
ಇದಕ್ಕೂ ಮುನ್ನ ಕಾರ್ಯಕ್ರಮದ ಸಂಯೋಜಕಿ ಡಾ. ಕೃತಿ ಶ್ರೀವಾಸ್ತವ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ”ಈ ವರ್ಷದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಧ್ಯೇಯವಾಕ್ಯ ‘ಕ್ರಿಯೆಯ ಮೂಲಕ ಭರವಸೆ ಮೂಡಿಸುವುದು’. ಇದು ಸಾರ್ವಜನಿಕರಿಗೆ ಇತರರಿಗೆ ಸಹಾಯ ಮಾಡಲು ಬಲವಾದ ಕರೆಯನ್ನು ನೀಡುತ್ತದೆ, ಇದು ಆತ್ಮಹತ್ಯಾ ಉದ್ದೇಶಿತರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುವ ಪರ್ಯಾಯಗಳ ಲಭ್ಯತೆಯ ಬಗೆಗೆ ಮಾಹಿತಿ ನೀಡುತ್ತದೆ ಮತ್ತು ಅವರಲ್ಲಿ ಆಶಾವಾದವನ್ನು ಬೆಳೆಸುವ ಮೂಲಕ ಆತ್ಮಹತ್ಯೆ ತಡೆಗಟ್ಟುವಿಕೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಆತ್ಮಹತ್ಯೆ ತಡೆಗಟ್ಟುವಿಕೆಯನ್ನು ಬಲಪಡಿಸುವ ಸಾಮೂಹಿಕ ಪ್ರಯತ್ನಗಳ ಪ್ರಾಮುಖ್ಯತೆಗೆ ಒತ್ತು ನೀಡುತ್ತದೆ. ಆತ್ಮಹತ್ಯಾ ಉದ್ದೇಶಗಳನ್ನು ಹೊಂದಿರುವ ಜನರಿಗೆ ಭರವಸೆ ಮತ್ತು ಬೆಂಬಲವನ್ನು ಒದಗಿಸುವುದನ್ನು ಇದು ಒತ್ತಿಹೇಳುತ್ತದೆ, ಆ ಮೂಲಕ ಇದರಿಂದಾಗಿ ಹತಾಶರಿಗೆ ಭರವಸೆ ನೀಡುತ್ತದೆ” ಎಂದು ಅವರು ಹೇಳಿದರು.