ಸಿಯುಕೆಯಲ್ಲಿ ವಚನ ಶಾಸ್ತ್ರ ಸಾರ ಕೃತಿಯ ಶತಮಾನೋತ್ಸವ ಆಚರಣೆ

ಕಲಬುರಗಿ:ಫೆ.06:“ವಚನ ಸಾಹಿತ್ಯಕ್ಕೆ ಜೀವಕೊಟ್ಟ ಕೃತಿಯಂದರೆ ಫ ಗು ಹಳಕಟ್ಟಿಯವರ ವಚನ ಶಾಸ್ತ್ರ ಸಾರ” ಎಂದು ಕಲಬುರಗಿಯ ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪೆÇ್ರ.ವೀರಣ್ಣ ದಂಡೆ ಹೇಳಿದರು.
ಸಿಯುಕೆಯಲ್ಲಿ ಬಸವ ಪೀಠ ಆಯೋಜಿಸಿದ್ದ ವಚನ ಶಾಸ್ತ್ರ ಸಾರ ಕೃತಿಯ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಪುಸ್ತಕದ ಕುರಿತು ಮತ್ತಷ್ಟು ಮಾತನಾಡಿದ ಅವರು, “ಈ ಕೃತಿಯು ಕನ್ನಡ ಸಾಹಿತ್ಯ ಮತ್ತು ಸಾಹಿತ್ತಿಗಳ ಮೇಲೆ ಗಾಢವಾದ ಪರಿಣಾಮ ಬೀರಿದೆ. ಇದರಿಂದಾಗಿ ಆರ್ ಆರ್ ದಿವಾಕರರವರು, ಸಿ ಸಿ ಬಸವನಾಳರವರು, ಅ ನ ಕೃ ಅವರು, ಎಂ ಆರ್ ಶ್ರೀ, ಬಿ ಎಂ ಶ್ರೀ ಹೀಗೆ ಕನ್ನಡದ ಮಹಾನ ಸಾಹಿತಿಗಳು ಈ ಕೃತಿಯಿಂದ ಬಹಳ ಪ್ರಭಾವಿತರಾಗಿದ್ದರು. ಅದನ್ನು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಇದರ ಯಶಸ್ಸಿನಿಂದ ಪ್ರಭಾವಿತರಾದ ಸ್ವತಃ ಹಳಕಟ್ಟಿಯವರು ಆಳವಾಗಿ ವಚನ ಸಾಹಿತ್ಯದಲ್ಲಿ ತೋಡಗಿಸಿಕೊಂಡರು. 1925 ರಲ್ಲಿ ಮನೆ ಮಾರಿ ಹಿತಚಿಂತಕ ಮುದ್ರಣಾಲಯ ಪ್ರಾರಂಭಿಸಿದರು. ಸುಮಾರು 15-16 ವರ್ಷಗಳ ಹಳ್ಳಿ ಹಳ್ಳಿ ತಿರುಗಾಡಿ ಕ್ಷೇತ್ರಕಾರ್ಯ ಮಾಡಿ ಸಂಗ್ರಹಿಸಿದ ವಚನ ಸಾಹಿತ್ಯದ ತಾಳೆಗರಿಗಳ ಮತ್ತು ಅವರ ಪರಿಶ್ರಮದ ಫಲವಾಗಿ ಈ ಕೃತಿ ಬಂದಿದೆ. ಎಲ್ಲರೂ ಸಾಹಿತ್ಯ ಮಾಡಿ ಶ್ರೀಮಂತರಾದರೆ ಇವರು ಆರ್ಥಿಕವಾಗಿ ಬಡವರಾದರು. ಇದು ಅವರು ವಚನ ಸಾಹಿತ್ಯದ ಸಂಗ್ರಹ, ಬರವಣಿಗೆ, ಮುದ್ರಣ ಮತ್ತು ಪ್ರಸಾರಕ್ಕೆ ಎಷ್ಟು ಮಹತ್ವ ಕೊಟ್ಟಿದ್ದರು ಎಂಬುದನ್ನು ತೋರಿಸುತ್ತದೆ.”
ಹಳಕಟ್ಟಿಯವರ ಷಟ್ಸ್ಥಲದ ವಿಶ್ಲೇಷಣೆಯ ಬಗ್ಗೆ ಮಾತನಾಡುತ್ತಾ “ಹಳಕಟ್ಟಿಯವರು ಷಟ್ಸ್ಥಲದ ರಚನೆಗೆ ಆಧುನಿಕತೆಯನ್ನು ತಂದಿದ್ದಾರೆ, 36 ಹಂತಗಳ ಸಾಂಪ್ರದಾಯಿಕ ವಚನಗಳ ಹೊಂದಿಸುವಿಕೆಯ ಕ್ರಮವನ್ನು ಮುರಿದು ಬದಲಿಗೆ ವಚನಗಳನ್ನು ಸರಳವಾಗಿ ಆರು ಹಂತಗಳಾಗಿ ವರ್ಗೀಕರಿಸಿದ್ದಾರೆ. ಅದು ಓದುಗರಿಗೆ ತುಂಬಾ ಸುಲಭವಾಗಿದೆ. ಅಲ್ಲದೆ ತಪ್ಪಾಗಿದ್ದ ವಚನಗಳನ್ನೂ ತಿದ್ದಿ ಸರಿಪಡಿಸಿದ್ದಾರೆ. ಅವರ ಪ್ರಕಾರ ಭಕ್ತ ಎಂದರೆ ಕಳಬೇಡ ಕೊಲಬೇಡ ಎಂಬ ವಚನದಲ್ಲಿ ಬಸವಣ್ಣನವರ ಹೇಳುವಂತೆ ಏಳು ಸದ್ಗುಣಗಳನ್ನು ಅಳವಡಿಸಿಕೊಂಡವನು ಎಂದರ್ಥ. ಮಹೇಶ ಎಂದರೆ ಉತ್ತಮ ಗುಣಗಳನ್ನು ಅನುಸರಿಸುವ ಧೈರ್ಯವನ್ನು ಹೊಂದಿರುವವರು. ಬಸವಣ್ಣನವರು ತಮ್ಮ ಛಲಬೇಕು ಶರಣಂಗೆ ಪರ ಧನವನೊಲ್ಲೆನೆಂಬ ವಚನ ಉಲ್ಲೇಖಿಸಿದಂತೆ ಇತರ ಸಂಪತ್ತು, ಹೆಂಡತಿ ಮತ್ತು ದೇವರು ಬೇಡವೆಂಬ ದೃಢಸಂಕಲ್ಪವುಳ್ಳವನು. ಪ್ರಸಾದಿಯೆಂದರೆ ಬಸವಣ್ಣನವರು ಹೇಳುವಂತೆ ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದಲ್ಲಿ ತಾನಿಲ್ಲದಂತಿರಬೇಕು ಎಂಬಂತೆ ತನ್ನ ಕೆಲಸವನ್ನು ಮಾಡುವವನು ಆದರೆ ನಾನು ಅದನ್ನು ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಅಹಂಕಾರವನ್ನು ಇಲ್ಲದವನು. ಕಾಯಕವನ್ನು ತನ್ನ ಸಹಜ ಜವಾಬ್ದಾರಿಯಾಗಿ ತೆಗೆದುಕೊಳ್ಳುವವನು. ಪ್ರಾಣಲಿಂಗಿ ಎಂದರೆ ಲಿಂಗಾಂಗ ಸಾಮರಸ್ಯವುಳ್ಳವನು. ಆ‍ಧ್ಯಾತ್ಮಿಕತೆಯು‍ಳ್ಳ ಮತ್ತು ಉಳ್ಳವರು ಶಿವಾಲಯ ಮಾಡುವವರು ನಾನೇನು ಮಾಡಲಯ್ಯ ಎನ್ನುವಂತೆ ದೇವರ ನಿಜವಾದ ಕಲ್ಪನೆಯುಳ್ಳವನು. ಅವರು ಪ್ರಕಾರ ಶರಣ ಎಂದರೆ ಜ್ಞಾನಿ ಎಂದರ್ಥ. ಅದಕ್ಕೆ ಅವರು ಜ್ಞಾನಿಯ ಲಕ್ಷಣಗಳನ್ನು ನೀಡುತ್ತಾರೆ. ಐಕ್ಯ ಎಂದರೆ ಯಾವುದು ನನ್ನದಲ್ಲ ಎಂಬ ಸ್ಥಿತಿ ಮುಟ್ಟುವುದಾಗಿದೆ. ಹೀಗೆ ಹಳಕಟ್ಟಿಯವರು ಷಟ್ಸ್ಥಲದ ಕಲ್ಪನೆಯನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಅರ್ಥೈಸಿದ್ದಾರೆ ಮತ್ತು ಸರಿಯಾದ ವಚನಗಳನ್ನು ಅಲ್ಲಿ ಜೋಡಿಸಿದ್ದಾರೆ.” ಎಂದು ಪೆÇ್ರ. ವೀರ‍ಣ್ಣ ದಂಡೆ ಹೆಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಪೆÇ್ರ. ಬಸವರಾಜ ಡೋಣೂರ ಅವರು “ಸಮಗ್ರ ವಚನ ಸಾಹಿತ್ಯ ಎಲ್ಲರಿಗೂ ಮುಟ್ಟಬೇಕೆಂಬುದೆ ಅವರ ಪ್ರಮುಖ ಆಶಯವಾಗಿತ್ತು” ಎಂದು ಹೇಳಿದರು.
ಸಿಯುಕೆಯ ಕುಲಸಚಿವ ಪೆÇ್ರ. ಆರ್ ಆರ್ ಬಿರಾದಾರ ಅವರು ಮಾತನಾಡಿ “ಹಳಕಟ್ಟಿಯವರ ಸಾಹಿತ್ಯ ಕಾರ್ಯಕ್ಕೆ ಅವರಿಗೆ ಜ್ಞಾನಪೀಠ ನೀಡಬೇಕಾಗಿತ್ತು” ಎಂದು ಹೇಳಿದರು.
ಬಸವ ಸಮಿತಿಯ ಅ್ಯವಕ್ಷರಾದ ಅರವಿಂದ ಜತ್ತಿಯವರು ಮಾತನಾಡಿ “ಇಂದಿನ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ವಚನ ಸಾಹಿತ್ಯ ಆಧಾರಿತ ಮಾನವೀಯ ವಿಶ್ವವಿದ್ಯಾಲಯ ಪ್ರಾರಂಭಿಸಿ ಆ ನಿಟ್ಟಿನಲ್ಲಿ ಕಾರ್ಯ ಮಾಡುವ ಅವಶ್ಯಕತೆಯಿದೆ” ಎಂದು ಹೇಳಿದರು.
ಸಮಾರಂಬದಲ್ಲಿ ಪೆÇ್ರ. ವಿಕ್ರಮ ವಿಸಾಜಿ, ಬಸವ ಪೀಠದ ಸಂಯೋಜಕ ಡಾ. ಗಣಪತಿ ಬಿ ಸಿನ್ನೂರ, ಪೆÇ್ರ. ಎಮ್ ಎಸ್ ಪಾಸೋಡಿ, ಲಿಂಗಾಯತ ಮಹಾ ಸಭಾದ ಅಧ್ಯಯಕ್ಷ ಪ್ರಭುಲಿಂಗ ಮಹಾಗಾಂವಕರ್, ನಳಿನಿ ಮಹಾಗಾಂವಕರ್, ಆವ್ಹಾನಿತರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.