ಸಿಯುಕೆಯಲ್ಲಿ ಮ್ಯಾನೇಜ್‍ಮೆಂಟ್ ಫೆಸ್ ್ಟ ಯಮಿಸ್ತಾಉದ್ಘಾಟನೆ

ಕಲಬುರಗಿ,ಮಾ.27: “ಮ್ಯಾನೇಜ್‍ಮೆಂಟ್ ಫೆಸ್ಟ್‍ಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆಯನ್ನುಒದಗಿಸುತ್ತದೆ” ಎಂದುಸಿಯುಕೆಯಕುಲಪತಿ, ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು. ಇಂದುಅವರು ಸಿಯುಕೆಯ ವ್ಯವಹಾರಅಧ್ಯಯನ ವಿಭಾಗ ಆಯೋಜಿಸಿದ್ದ ಎರಡು ದಿನಗಳ ಮ್ಯಾನೇಜ್‍ಮೆಂಟ್ ಫೆಸ್ಟ್‍ಯಮಿಸ್ತಾ-2023 ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ದೇಶ ಮತ್ತುಅದರಆರ್ಥಿಕತೆಯಅಭಿವೃದ್ಧಿಗೆ ನಿರ್ವಹಣೆ ಬಹಳ ಮುಖ್ಯ. ಪ್ರತಿಯೊಂದುದೇಶವೂತನ್ನಆರ್ಥಿಕ ಹಿತಾಸಕ್ತಿಕಾಪಾಡಲುತನ್ನಉತ್ಪನ್ನ ಮತ್ತು ಸೇವೆಗಳನ್ನು ಹೆಚ್ಚು ಹೆಚ್ಚು ಮರ್ಕೆಟಿಂಗ್ ಮಾಡಲು ಶ್ರಮಿಸುತ್ತಿದೆ. ಭಾರತವನ್ನುಇನ್ನೂ ಅಭಿವೃದ್ಧಿಶೀಲ ರಾಷ್ಟ್ರಎಂದುಕರೆಯಲಾಗುತ್ತದೆ, ಏಕೆಂದರೆಅಭಿವೃದ್ಧಿ ಹೊಂದಿದಆರ್ಥಿಕತೆಯಾಗಲು ನಾವು ನಮ್ಮಉತ್ಪನ್ನ ಮತ್ತು ಸೇವೆಗಳನ್ನು ಬಹಳ ಯಶಸ್ವಿಯಾಗಿ ಮಾರಾಟ ಮಾಡಬೇಕು ಮತ್ತುರಪ್ತನ್ನು ಹೆಚ್ಚಿಸಬೇಕು. ನಮ್ಮ ಸರ್ಕಾರವು 18 ದೇಶಗಳೊಂದಿಗೆ ರೂಪಾಯಿಯಲ್ಲಿ ವಹಿವಾಟು ನಡೆಸಲು ಸಾಧ್ಯವಾಗುವಂತೆ ಮಾಡಿರುವುದುಉತ್ತಮಉಪಕ್ರಮವಾಗಿದೆ. ಏಕೆಂದರೆಇದುರಫ್ತು ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ನಮ್ಮರಫ್ತು ಹೆಚ್ಚಿಸಲು ಸಹಾಯವಾಗುತ್ತದೆ” ಎಂದು ಹೇಳಿದರು.
ದೇಶದಮಾನವ ಸಂಪನ್ಮೂಲ ಸಾಮಥ್ರ್ಯಗಳ ನಿರ್ಮಾಣದಕುರಿತು ಮಾತನಾಡಿದಅವರು “ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ, ಆದ್ದರಿಂದ ನಮ್ಮ ನಿರ್ವಹಣಾ ಪಠ್ಯಕ್ರಮವುಅತ್ಯಂತಕ್ರಿಯಾತ್ಮಕ ಮತ್ತು ಪ್ರಸ್ತುತವಾಗಿರಬೇಕು. ವಿದ್ಯಾರ್ಥಿಗಳು ಅಗತ್ಯವಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕಜ್ಞಾನವನ್ನುಕಲಿಯಲು ಸಾಧ್ಯವಾಗುವಂತಿರಬೇಕು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷವನ್ನು ಪೂರ್ಣಗೊಳಿಸುವ ಮೊದಲುಕಂಪನಿಯಲ್ಲಿಉದ್ಯೋಗ ಪಡೆಯುವಂತಗಬೇಕು. ವಿಶ್ವವಿದ್ಯಾಲಯದಿಂದ ಹೋಗುವಾಗ ವಿದ್ಯಾರ್ಥಿಗಳು ಪ್ರಮಾಣಪತ್ರದಜೊತೆಗೆಉದ್ಯೋಗಪತ್ರದೊಂದಿಗೆ ಹೊಗುವಂತಾಗಬೇಕು. ಈಗಾಗಲೇ 11 ಎಂಬಿಎ ವಿದ್ಯಾರ್ಥಿಗಳು ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗ ಪಡೆದಿರುವುದುತುಂಬಾ ಸಂತೋಷದÉ ವಿಷಯವಾಗಿದೆ” ಎಂದುಅವರು ಹೇಳಿದರು.
ಗೌರವಅತಿಥಿ, ಕುಲಸಚಿವರಾದ ಪೆÇ್ರ.ಬಸವರಾಜ ಪಿ ಡೋಣೂರರವರು ಮಾತನಾಡಿ, “ಪ್ರತಿಯೊಬ್ಬ ಮನುಷ್ಯನುತನ್ನಜೀವನದಲ್ಲಿಏನನ್ನಾದರೂ ಸಾಧಿಸುವ ಸಾಮಥ್ರ್ಯ ಹೊಂದಿರುತ್ತಾನೆ. ಆದ್ದರಿಂದ ನಾವು ನಮ್ಮ ಗುರಿಗಳನ್ನು ಸಾಧಿಸಲು ನಮ್ಮಕೈಲಾದಷ್ಟು ಪ್ರಯತ್ನಿಸಬೇಕು. μÉೀಕ್ಸ್‍ಪಿಯರ್‍ನ ಬರವಣಿಗೆಯಿಂದ ನಾವು ನಿರ್ವಹಣಾ ಪಾಠಗಳನ್ನು ಕಲಿಯಬಹುದಾಗಿದೆ” ಎಂದರು. μÉೀಕ್ಸ್‍ಪಿಯರ್‍ನ ಕೆಲವು ಹೇಳಿಕೆಗಳನ್ನು ಉಲ್ಲೇಖಿಸುತ್ತಾ“ಸಂಕ್ಷಿಪ್ತತೆಯು ಬುದ್ಧಿಯಆತ್ಮ’.ಇದರರ್ಥಕಾರ್ಯನಿರ್ವಾಹಕರುತಮ್ಮ ಸಂವಹನದಲ್ಲಿ ಸಂಕ್ಷಿಪ್ತವಾಗಿರಬೇಕು. ‘ಬುದ್ಧಿವಂತಿಕೆಯಿಂದ ಮತ್ತು ನಿಧಾನವಾಗಿ ಚಲಿಸಿ, ವೇಗವಾಗಿ ಓಡುವವರು ಮುಗ್ಗರಿಸುತ್ತಾರೆ.’ಕಂಪನಿಯ ಬೆಳವಣಿಗೆಗೆ ಸ್ಥಿರತೆ ಮತ್ತುನಿರಂತರತೆÀಬಹಳ ಮುಖ್ಯಎಂದರ್ಥ. ವೇಗವಾದಆದರೆಸುಸ್ಥಿರವಲ್ಲದ ಬೆಳವಣಿಗೆಗೆ ಯಾವುದೇಅರ್ಥವಿಲ್ಲ. ‘ಬಲವಾದಯೊಚನೆಗಳು ಬಲವಾದ ಕ್ರಮಗಳನ್ನು ಮಾಡುತ್ತವೆ.’ಆಲೋಚನೆಯುನಮ್ಮಕ್ರಿಯೆಯ ಮೇಲೆ ಪ್ರಭಾವ ಬೀರುವುದರಿಂದ, ನಮ್ಮ ಆಲೋಚನೆಗಳು ಬಲವಾಗಿದ್ದರೆ ನಮ್ಮ ಕಾರ್ಯಗಳು ಬಲವಾಗಿರುತ್ತವೆ ಮತ್ತುಉತ್ಪಾದಕವಾಗಿರುತ್ತವೆ. ‘ನಾವು ಏನೆಂದು ನಮಗೆ ತಿಳಿದಿದೆ, ಆದರೆ ನಾವು ಏನಾಗಬಹುದುಎಂದು ನಮಗೆ ತಿಳಿದಿಲ್ಲ.’ ವ್ಯವಸ್ಥಾಪಕರುಭವಿಷ್ಯದ ಬಗೆಗೆ ಕಲ್ಪನಾಶಕ್ತಿಯನ್ನು ಹೊಂದಿರಬೇಕು ಮತ್ತು ಭವಿಷ್ಯವನ್ನುರೂಪಿಸಬೇಕು. ನಾಳೆ ಎಂದಿಗೂ ಸಾಯುವುದಿಲ್ಲ, ಇಂದು ನಿರ್ವಾಹಕರು ಮಾಡಲು ಸಾಧ್ಯವಾಗದುದನ್ನುನಾಳೆ ಮಾಡುತ್ತಾರೆ. μÉೀಕ್ಸ್ಪಿಯರ್‍ಯಾವಾಗಲೂಇಂದು ಮತ್ತು ನಾಳೆಯ ಬಗ್ಗೆ ಮಾತನಾಡುತ್ತಾರೆ. ಈ ನಿರ್ವಹಣಾ ಪಾಠಗಳು ನಿಮಗೆ ಸಹಾಯ ಮಾಡುತ್ತವೆಎಂದು ನಾನು ಭಾವಿಸುತ್ತೇನೆ” ಎಂದು ಹೇಳೀದರು.
ಇದಕ್ಕೂ ಮುನ್ನ ವ್ಯವಹಾರಅಧ್ಯಯನ ವಿಭಾಗದ ಮುಖ್ಯಸ್ಥಡಾ. ಮೊಹಮ್ಮದ್‍ಜೊಹೈರ್ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, “ವ್ಯವಹಾರಅಧ್ಯಯನ ವಿಭಾಗÀವು2012ರಿಂದನಿರ್ವಹಣಾ ಉತ್ಸವವಗಳನ್ನು ಆಚರಿಸುತ್ತಾ ಬರುತ್ತಿದೆ. ಕೊಲೊಸಿಯಂನ ಎರಡು ಆವೃತ್ತಿಗಳು (ಮ್ಯಾನೇಜ್‍ಮೆಂಟ್ ವಾರ್‍ಫೇರ್) ಮತ್ತುಅಕ್ಯುತದ (ಜ್ಞಾನದ ಪಯಣ)ಐದು ಆವೃತ್ತಿಗಳನುದಿಲ್ಲಿಯವರೆಗೆ ಆಯೋಜಿಸಿದೆ. ಈ ಬಾರಿ ಬೆಸ್ಟ್ ಮ್ಯಾನೇಜರ್, ರೂರಲ್‍ಟುಗ್ಲೋಬಲ್, ಬಿಸಿನೆಸ್ ಕ್ವಿಜ್, ಕೊಲೊಫೆÇೀನ್, ಟ್ರೆಷರ್ ಹಂಟ್, ಆಡ್-ಸೆಲ್ಫಿ, ಬೆಸ್ಟ್‍ಔಟ್‍ಆಫ್ ವೇಸ್ಟ್, ಥಿಂಕ್ ವೈಸ್ಲಿ, ಹೈ-ಫೈ ಮತ್ತು ದಿ ವುಲ್ಫ್‍ಆಫ್‍ದಲಾಲ್ ಸ್ಟ್ರೀಟ್ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಈ ಸ್ಪರ್ಧೆಗಳುನಮ್ಮ ವಿದ್ಯಾರ್ಥಿಗಳಿಗೆ ತಮ್ಮ ವ್ಯವಸ್ಥಾಪಕ ಸಾಮಥ್ರ್ಯಗಳನ್ನು ಪರೀಕ್ಷಿಸಲು ಮತ್ತು ಸಮಸ್ಯೆಯ ಪರಿಹಾರ, ಸಂಪನ್ಮೂಲ ನಿರ್ವಹಣೆ, ಸಂವಹನ ಕೌಶಲ್ಯಗಳು ಮತ್ತು ನಾಯಕತ್ವದ ಪಾಠಗಳನ್ನು ಪ್ರಾಯೋಗಿಕವಾಗಿಕಲಿಯಲುಅವಕಾಶವನ್ನು ನೀಡುತ್ತವೆ” ಎಂದು ಹೇಳಿದರು.
ಅಪೂರ್ವ ಮತ್ತು ಸಗೇನ್ ಸಿಂಗ್ ಕಾರ್ಯಕ್ರಮ ನಿರೂಪಿಸಿದರು, ಶುಭಂ ಶರ್ಮಾ ಸ್ವಾಗತಿಸಿದರು ಮತ್ತು ವಿಶಾಲ್‍ಕುಮಾರ್ ವಂದಿಸಿದರು. ಈ ಸಂದರ್ಭದಲ್ಲಿಡೀನ್, ಎಸ್‍ಬಿಎಸ್, ಪೆÇ್ರ.ಕೆ ಪದ್ಮಶ್ರೀ, ಡಾ.ನವೀನ್‍ಕುಮಾರ್ ಟಿ ಜಿ, ಡಾ.ಗಣಪತಿ ಬಿ ಸಿನ್ನೋರ್, ಡಾ.ಸಫಿಯಾ ಪರ್ವೀನ್, ಡಾ.ಶುμÁ್ಮ ಹೆಚ್, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತುಸ್ಪರ್ಧಾಳುಗಳು ಉಪಸ್ಥಿತರಿದ್ದರು.