
ಕಲಬುರಗಿ,ಏ.23:“ಒಳ್ಳೆಯ ವ್ಯಕ್ತಿಯಾಗಬೇಕಾದರೆ ನಮ್ಮಲ್ಲಿ ವಿನಯ, ಆದರ ಮನೋಭಾವವಿರಬೇಕು. ಬಸವಣ್ಣನವರಲ್ಲಿ ಈ ಗುಣಗಳಿರುವುದರಿಂದಲೆ ಮಹಾಮೆನೆ ಮತ್ತು ಅನುಭವ ಮಂಟಪ ಸ್ಥಾಪಿಸಲು ಸಾಧ್ಯವಾಯಿತು. ನಮ್ಮ ಯುವಕರು ಈ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅವರ ವ್ಯಕ್ತಿತ್ವ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ” ಎಂದು ಪ್ರೊ. ವಿರಣ್ಣದ ದಂಡೆ ಹೇಳಿದರು.
ಅವರು ಇಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಹಾತ್ಮಾ ಬಸವೇಶ್ವರರ 890ನೇ ಜಯಂತಿ ಆಚರಣೆಯ ಅಂಗವಾಗಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ವಚನಗಳು ಅನುಭವ ಮಂಟಪದಲ್ಲಿ ಚರ್ಚಿಸಿಸಿ ಬರೆದವುಗಳಾಗಿದ್ದು ಅವು ಸಂವಿಧಾನದಂತಿವೆ. ಈ ಮಾತನ್ನು ಅನೇಕ ಕಾನೂನು ತಜ್ಞರು ಖಾತ್ರಿ ಪಡಿಸಿದ್ದಾರೆ. ಬಸವಣ್ಣನವರ ವಚನ ಚಳುವಳಿ ಕೇವಲ ಸಾಮಾಜೋಧಾರ್ಮಿಕಕ್ಕೆ ಸೀಮಿತವಾಗಿರದೆ ವ್ಯಕ್ತಿಯ ವೈಯಕ್ತಿಕ ಅಭಿವೃದ್ಧಿ, ಕೌಟುಂಬಿಕ ಅಭಿವೃದ್ಧಿ, ಸಮಾಜಿಕ ಸಮಾನತೆ, ಧಾರ್ಮಿಕ ಸಮಾನತೆ ಮತ್ತು ಆಧ್ಯಾತ್ಮಿಕ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಕೆಲಸಮಾಡಿದೆ.”
ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ವಚನ ಸಾಹಿತ್ಯದ ಮಹತ್ವವನ್ನು ಕುರಿತು ಮಾತನಾಡುತ್ತಾ “ಶರಣರು ಮನುಷ್ಯನ ಗುಣಗಳಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಭವಿಯನ್ನು
ಭಕ್ತನನ್ನಾಗಿ ಮಾಡುವುದೇ ಶರಣರ ಪರಮ ಗುರಿಯಾಗಿತ್ತು. ಇಲ್ಲಿ ಭವಿ ಅವಗುಣಗಳ ಸಂಕೇತವಾದರೆ, ಭಕ್ತ ಸದ್ಗುಣಗಳ ಸಂಕೇತ. ಬಸವಣ್ಣನವರು ಒಳ್ಳೆಯ ವ್ಯಕ್ತಿಯಾಗಬೇಕಾದರೆ ನಾವು ಸಜ್ಜನರ ಸಂಗವನ್ನು ಮಾಡಬೇಕು. ಅದಕ್ಕಾಗಿ ಅವರು ʼಅರೆಭಕ್ತರ ದಾರಿಸಂಗಡ ಬೇಡʼವೆಂದಿದ್ದಾರೆ. ಜಿದ್ದು, ಅಹಂಕಾರಗಳು ವ್ಯಕ್ತಿಯ ಪತನಕ್ಕೆ ಕಾರಣವಾಗುತ್ತವೆ. ಜಿದ್ದಿನಿಂದ ಎನನ್ನು ಗೆಲ್ಲುವುದು ಬೇಡ. ವ್ಯಕ್ತಿ ಜೀವನದಲ್ಲಿ ಸೋಲುವುದನ್ನು ಕಲಿಯಬೇಕು ಆ ಮುಲಕ ಜೀವನದಲ್ಲಿ ನಿಜವಾದ ಗೆಲುವನ್ನು ಸಾಧಿಸಬಹುದು. ಬಸವಣ್ಣನವರು ಸರಳತೆ, ಕಿಂಕರರಲ್ಲಿ ಕಿಂಕರರಾಗಿರಲು ಬಯಸುತ್ತಿದ್ದರು. ಅವರು ಅತಿ ಕೆಳಮಟ್ಟದ ಸೇವಕನಾಗಿ ಕಾರ್ಯಮಾಡುವುದರಿಂದ ಅತೀ ಹೆಚ್ಚಿನ ಆನಂದ ದೊರೆಯುತ್ತದೆಂದು ನಮಗೆ ತೋರಿಸಿ ಕೊಟ್ಟಿದ್ದಾರೆ. ವ್ಯಕ್ತಿ ತನ್ನ ಜೀವನದಲ್ಲಿ ಕಳು ಮಾಡುವುದು, ಕೊಲ್ಲುವುದು, ಸುಳ್ಳು ಹೇಳುವುದು, ಇತರರನ್ನು ನಿಂದಿಸುವುದು, ಪರಸ್ತರಿಯರನ್ನು ಕೆಟ್ಟದೃಷ್ಟಿಯಿಂದ ನೋಡುವುದು, ತನ್ನನ್ನು ತಾನು ಹೋಗಳುವು ಹೀಗೆ ಅನೇಕ ಅವಗುಣಗಳನ್ನು ಬಿಡಬೇಕು. ಪರ ಧನ ಪರ ಸತಿ ಪರ ದೈವ ಗಳನ್ನು ಇಲ್ಲೆಯೆಂಬ ಛಲ ವ್ಯಕ್ತಿಯಲ್ಲಿರಬೇಕು ಅಂದಾಗ ಮಾತ್ರ ಆತ ಇಳ್ಳೆಯ ವ್ಯಕ್ತಿ ಅಥವಾ ಭಕ್ತ ನಾಗಲು ಸಾಧ್ಯ. ಒಟ್ಟಾರೆ ವಚನ ಸಾಹಿತ್ಯವು ವ್ಯಕ್ತಿಯ ವ್ಯಕ್ತಿತ್ವ ವಿಕಸನದ ಜ್ಞಾನದ ಚಿನ್ನದ ಗಣಿಯಾಗಿದೆ” ಎಂದು ಅವರು ಹೇಳಿದರು.
ಇನ್ನೊಬ್ಬ ಅತಿಥಿ ಹೈದರಬಾದನ ಇಂಗ್ಲೀಷ ಮತ್ತು ವಿದೇಶಿ ಭಾμÉಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ತಾರಕೇಶ್ವರ ವಿ. ಬಿ ಮಾತನಾಡಿ “ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯೆಲ್ಲ ಅವರು 12ನೇ ಶತಮಾನದಲ್ಲಿ ನಡೆದ ವಚನ ಚಳುವಳಿಯ ನೇತಾರ. ಬಸವಣ್ಣನವರ ಭಕ್ತಿ ಚಳುವಳಿ ಸಾಮಾಜಿಕ ಆಯಾಮವನ್ನು ಹೊಂದಿರುವುದರಿಂದ ಕೇವಲ ಅಲೌಕಿಕತೆ ಆಧಾರಿತ ಇತರ ಭಕ್ತಿ ಚಳುವಳಿಗಿಂತ ಭಿನ್ನವಾಗಿದೆ. ಅನುಭವ ಮಂಟಪದಲ್ಲಿ ಚರ್ಚೆಯ ಮೂಲಕ ಒಬ್ಬರ ವಿಚಾರಗಳನ್ನು ತಾತ್ವಿಕತೆಯ ಆಧಾರದ ಮೇಲೆ ಒಪ್ಪುವ ಅಥವಾ ಅದನ್ನು ಪ್ರಶ್ನಿಸುವ ಮೂಲಕ ರಚನೆಯಾದ ವಚನ ಸಾಹಿತ್ಯದ ಮೂಲ ಮುದ್ರೆಯಾಗಿದೆ. ಇದು ಇಬ್ಬರಿಂದ ಇನ್ನೊಬ್ಬರ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾದ ತತ್ವಜ್ಞಾನವಲ್ಲ, ಬದಲಿಗೆ ಚರ್ಚೆ, ವಿಮರ್ಶೆ, ಸಮಾಲೋಚನೆಯ ಮಾದರಿಯನ್ನು ಜಗತ್ತಿಗೆ ನೀಡಲಾದ ಸಾಹಿತ್ಯ ಇದಾಗಿದೆ. ನಾವೆಲ್ಲರೂ ಅಳವಡಿಸಿಕೊಳ್ಳಬಹುದಾದ ಮಾದರಿ ಇದಾಗಿದೆ” ಎಂದು ಅವರು ಹೇಳಿದರು.
ಸಿಯುಕೆಯ ಕುಲಸಚಿವರಾದ ಪ್ರೊ. ಬಸವರಾಜ ಪಿ ಡೋಣೂರ ಅವರು ಮಾತನಾಡಿ ಮಾನ್ಯ ಕುಲಪತಿಗಳ ಶುಭ ಹಾರೈಕೆಯನ್ನು ತಿಳಸಿದರು ಮತ್ತು ಅವರ ಸಂದೇಶವನ್ನು ತಿಳಿಸಿದರು. ಅವರು ಮುಂದು ವರೆದು ಮಾತನಾಡಿ “ವ್ಯಕ್ತಿಗೆ ಗನತೆ ಗೌರವಗಳು ಬಹಳ ಮುಖ್ಯ ನಾವು ಹೇಗೆ ನಡೆದುಕೊಳ್ಳಬೇಕೆಂಬುದನ್ನು ಶರಣರನ್ನು ನೋಡಿ ಕಲಿಯಬೇಕು. ವ್ಯಕ್ತಿ ಸುಚಿಯಾದ ವ್ಯಕ್ತಿತ್ವ ಹೊಂದಿದರೆ ಮಾತ್ರ ದೇವರು ಅವನಲ್ಲಿ ನೇಲೆಗೊಳ್ಳುತ್ತಾನೆ. ಮನುಷ್ಯನ ಎಲ್ಲಾ ದೈಹಿಕ ಮತ್ತು ಮಾನಸಿಕ ರೋಗಗಳನ್ನು ಗುಣ ಪಡಿಸುವ ಶಕ್ತಿ ವಚನಗಳಿಗಿದೆ” ಎಂದು ಅವರು ಹೇಳಿದರು.
ಇದಕ್ಕೂ ಮುಂಚೆ ಸಿಯುಕೆಯ ಬಸವ ಪೀಠದ ಸಂಯೋಜಕರಾದ ಡಾ. ಗಣಪತಿ ಬಿ ಸಿನ್ನೂರ ಅವರು ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ರೋಹಿತ ನಿರುಪಿಸಿ ವಂದಿಸಿದರು. ಡಾ. ಸ್ವಪ್ನಿಲ್ ಚಾಪೆಕರ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದರು. ಈ ಸಂದರ್ಭದಲ್ಲಿ ಆಹ್ವಾನಿತರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.