ಸಿಯುಕೆಯಲ್ಲಿ ಬಾಬು ಜಗಜೀವನರಾಮ ಜಯಂತಿ ಆಚರಣೆ

ಕಲಬುರಗಿ:ಎ.7:“ಬಾಬು ಜಗಜೀವನರಾಮರವರು ಈ ದೇಶಕಂಡಅಪ್ರತೀಮ ಚಿಂತನಶೀಲ ರಾಜಕಾರಣಿ, ಮಾತನಾಡುವಧೃವತಾರೆ” ಎಂದುಕರ್ನಾಟಕಜಾನಪದ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಟಿ ಎಂ. ಭಾಸ್ಕರ ಹೇಳಿದರು. ಅವರುಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಾಬು ಜಗಜೀವನರಾಮರವರ 116 ನೇ ಜಯಂತಿಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಸಂಪ್ರದಾಯಿಕ ಮನಸ್ಸುಗಳ ಹಾಗು ಶಿಕ್ಷಣವಿದ್ದರೂ ಆಧುನಿಕಚಿಂತನೆ ಮಾಡಿದವರು. ವಿಜ್ಞಾನ ಮತ್ತುತಂತ್ರಜ್ಞಾನವನ್ನು ಬುನಾದಿಯಾಗಿಇಟ್ಟುಕೊಂಡು ಈ ದೇಶದಲ್ಲಿಅನ್ನ ಬೇಕು ಬೇಕು ಎಂದುಯಾರು ಸಾಯದಿರಲೆಂದು ಹಸಿರು ಕ್ರಾಂತಿ ಮಾಡಿದ ಹರಿಕಾರ. ಉಳುವುವವನೆ ಭೂಮಿಯಒಡೆಯನೆಂಬ ಕಾನೂನು ತಂದುಅಸಂಖ್ಯಾತ ಭೂಮಿರಹಿತರೈತರನ್ನು ಭೂಮಿಯ ಮಾಲಿಕರನ್ನಾಗಿ ಮಾಡಿದರು. ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಭದ್ರತೆಯಚಿಂತಕ. ಕಡುಬಡತನದಕುಟುಂದಲ್ಲಿ ಜನೆಸಿ ಭಾರತವನ್ನು ಸ್ಪರಧಾತ್ಮಕಜಗತ್ತಿಗೆ ಸಧೃಡಗೋಳಿಸಿದವರು. ತಮ್ಮ ಸಮಾಜದ ಸ್ವಾಭಿಮಾನಕ್ಕಾಗಿತಮ್ಮತಂದೆ ಬಾವಿ ತೋಡಿದ್ದು ಹಾಗು ಡಾ. ಬಿ ಆರ್. ಅಂಬೆಡ್ಕರ್‍ರವರುಚೌಡರಕೆರೆಯ ನೀರುಕುಡಿದದ್ದು ಬಾಬುಜಿಯವರ ಮೇಲೆ ಘಾಡವಾದ ಪರೀಣಾಮ ಬೀರಿದವು. ಗಾಂಧೀಜಿ ನನ್ನಗುರು, ಅಂಬೆಡ್ಕರರವರು ನನ್ನ ಮಾರ್ಗದರ್ಶಕರುಎಂದು ಹೇಳೀದ್ದಾರೆ. ಗಾಂಧೀಜಿ, ಸರಕಾರ ಮತ್ತು ಆಡಳಿತ ಪಕ್ಷದೋಳಗಿದ್ದುಕೊಂಡು ಹಿಂದೂ ಸಂಪ್ರದಾಯವಾದವನ್ನು ಟೀಕಿಸಿದವರು. ಜಾತಿ ವಿನಾಶ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದರಲ್ಲಿಜಾತಿ ವ್ಯವಸ್ಥೆಯ ಉಗಮ ಮತ್ತುಅದರ ಸ್ತಿತ್ಯಂತರಗಳನ್ನು ಕುರಿತು ಚರ್ಚಿಸಿಸಿದ್ದಾರೆ” ಎಂದುಅವರು ಹೇಳೀದರು.
ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಣರವರುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ “ಜಗಜೀವನರಾಮರವರು ಭಾಬುಜಿಯೆಂದೆಖ್ಯಾತರಾಗಿದ್ದರು. ಸುಮಾರು 50 ವರ್ಷಗಳಕಾಲ ಸಂಸತ ಸದಸ್ಯರಾಗಿದ್ದರು ಮತ್ತು ಸುಮಾರು 30 ವರ್ಷಗಳ ಕಾಲ ಕೇಂದ್ರ ಮಂತ್ರಿಗಳಾಗಿದ್ದರು. 1975 ರಲ್ಲಿ ಶ್ರೀಮತಿ ಇಂದೀರಾಗಾಂಧಿಯವರು ಹೇರಿದ್ದತುರ್ತು ಪರಸ್ಥಿತಿಯನ್ನು ವಿರೋಧಿಸಿ ಕಾಂಗ್ರೆಸ್‍ತೊರೆದುಜನತಾ ಪಕ್ಷ ಸೇರಿದರು. ತಮ್ಮಜೀವನದುದ್ದಕ್ಕೂ ಸೋಷಿತರ, ದೀನ ದಲಿತರಉದ್ದಾರಕ್ಕಾಗಿ ಮತ್ತುಅವರ ಹಕ್ಕುಗಳಿಗಾಗಿ ಶ್ರಮಿಸಿದವರು” ಎಂದು ಹೇಳೀದರು.
ಕಾರ್ಯಕ್ರಮದಲ್ಲಿಕರ್ನಾಟಕ ವಿಶ್ವವಿದ್ಯಾಲಯಧಾರವಾಡದ ಪೆÇ್ರ. ನಿಜಲಿಂಗಪ್ಪ ಮಟ್ಟಿಹಾಳ, ಕರ್ನಾಟಕರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪೆÇ್ರ. ಮಹೇಶ ಚಿಂತಾಮಣಿ, ಸಿಯುಕೆಯ ಕುಲಸಚಿವ ಪೆÇ್ರ. ಬಸವರಾಜ ಪಿ ಡೋಣೂರ ಮಾತನಾಡಿದರು. ಸಮಾನ ಅವಕಾಶಗಳ ವಿಭಾಗದ ಸಂಯೋಜಕಡಾ. ಸಂಗಮೇಶ, ಕಾರ್ಯಕ್ರಮದ ಸಂಯೋಜಕಡಾ. ಸಂಜೀವರಾಯಪ್ಪ, ಎಲ್ಲಾ ನಿಕಾಯಗಳ ಡಿನರು, ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು ಮತು ವಿದ್ಯಾರ್ಥಿಗಳು ಹಾಜರಿದ್ದರು.