
ಕಲಬುರಗಿ,ಸೆ.11:“ಪರೀಕ್ಷೆಯು ವಿದ್ಯಾರ್ಥಿಗಳ ನೈಜ ಜ್ಞಾನವನ್ನು ಪರೀಕ್ಷಿಸುವಂತಿರಬೇಕು ವಿನಃ ಅದು ಶಿಕ್ಷಕರು ಕಲಿಸಿದನ್ನು ವಿದ್ಯಾರ್ಥಿಗಳು ಪುನರುಚ್ಚಾರ ಮಾಡುವುದಲ್ಲ” ಎಂದು ಸಿಯುಕೆಯ ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು. ಮೈಸೂರಿನ ಭಾರತೀಯ ಭಾμÁ ಸಂಸ್ಥೆ (ಸಿಐಐಎಲ್) ಸಹಯೋಗದಲ್ಲಿ ಸಿಯುಕೆಯ ಭಾμÁಶಾಸ್ತ್ರ ವಿಭಾಗವು ಆಯೋಜಿಸಿದ್ದ “ಪರೀಕ್ಷೆ ಮತ್ತು ಮೌಲ್ಯಮಾಪನ: ಪ್ರಶ್ನೆಗಳನ್ನು ರಚಿಸುವ ಕುರಿತ ಆರು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಹಲವು ಬಾರಿ ಶಿಕ್ಷಕರು ಎರಡು ಮೂರು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೊಸ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುತ್ತಾರೆ. ಇದು ವೈಜ್ಞಾನಿಕ ಪದ್ಧತಿಯಲ್ಲ. ನಾವು ವೈಜ್ಞಾನಿಕ ರೀತಿಯಲ್ಲಿ ಪ್ರಶ್ನೆಗಳನ್ನು ರಚಿಸದಿರುವುದು ಮತ್ತು ಅದನ್ನು ಅನುಸರಿಸದಿರುವುದು ತುಂಬಾ ದುರದೃಷ್ಟಕರ. ಶಿಕ್ಷಕರು ಪುನರಾವರ್ತನೆಯಾಗದಂತೆ, ಸೃಜನಶೀಲ ರೀತಿಯಲ್ಲಿ ಪ್ರಶ್ನೆಗಳನ್ನು ರಚಿಸಬೇಕು ಅವು ಸ್ವಂತಿಕೆಯನ್ನು ಹೊಂದಿರಬೇಕು. ಇಂದು ಶಿಕ್ಷಕರು ಭಾμÉಯನ್ನು ಅಭಿವೃದ್ಧಿಪಡಿಸುವುದಕ್ಕಿಂತ ಹೆಚ್ಚಾಗಿ ರಾಜಕೀಯದ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ” ಎಂದು ಅವರು ಹೇಳಿದರು
ಸಿಯುಕೆಯಲ್ಲಿ ಕನ್ನಡ ಅಧ್ಯಯನದ ಅವಕಾಶಗಳ ಕುರಿತು ಮಾತನಾಡಿದ ಅವರು, “ಅನೇಕ ವಿದ್ಯಾರ್ಥಿಗಳು ಇಂಗ್ಲಿμï ಭಾμÉಯಲ್ಲಿ ಐಚ್ಛಿಕ ವಿಷಯಗಳನ್ನು ಅಧ್ಯಯನ ಮಾಡಬೇಕಾಗಿರುವುದರಿಂದ ಕನ್ನಡವನ್ನು ಕಲಿಯಲು ಸಿಯುಕೆಗೆ ಪ್ರವೇಶ ಪಡೆಯುವುದಿಲ್ಲ ಎಂದು ನನಗೆ ಹೇಳಲಾಗಿದೆ. ಒಂದು ಭಾμÉಯನ್ನು ಸಂಪೂರ್ಣವಾಗಿ ತಿಳಿದಿದ್ದರೆ ಬೇರೆ ಯಾವುದೇ ಭಾμÉಯನ್ನು ಕಲಿಯಬಹುದು ಎಂಬುದನ್ನು ವಿದ್ಯಾರ್ಥಿಗಳು ತಿಳಿದಿರಬೇಕು. ಕನ್ನಡ ವಿದ್ಯಾರ್ಥಿಗಳು ಇಂಗ್ಲಿμï ಅಥವಾ ಹಿಂದಿ ಅಥವಾ ಇನ್ನಾವುದೇ ಹೆಚ್ಚುವರಿ ಭಾμÉಯನ್ನು ಕಲಿತರೆ, ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಾಹಿತಿಯಾಗಲು ಅನುಕೂಲವಾಗುತ್ತದೆ. ಅವರಿಗೆ ಬೇರೆ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಈ ಅವಕಾಶ ಸಿಗುವುದಿಲ್ಲ. ಆದ್ದರಿಂದ ನಮ್ಮ ಶಿಕ್ಷಕರು ಈ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು” ಎಂದು ಅವರು ಹೇಳಿದರು.
ಮುಖ್ಯ ಅತಿಥಿ ಮತ್ತು ಭಾರತೀಯ ಭಾμÁ ಸಂಸ್ಥೆ (ಸಿಐಐಎಲ್), ಮೈಸೂರಿನ ಪ್ರತಿನಿಧಿ, ಡಾ. ಬೀರೇಶ್ ಕುಮಾರ್ ಮಾತನಾಡಿ, “ಎಲ್ಲಾ ಭಾರತೀಯ ಭಾμÉಗಳನ್ನು ರಕ್ಷಿಸುವ ಉದ್ದೇಶದಿಂದ 1967 ರಲ್ಲಿ ಭಾರತೀಯ ಭಾμÁ ಸಂಸ್ಥೆಯನ್ನು ಸ್ಥಾಪಿಸಲಾಯಿತು. 2006 ರಲ್ಲಿ ರಾಷ್ಟ್ರೀಯ ಪರೀಕ್ಷಾ ಸೇವಾ ಸಂಸ್ಥೆಯನ್ನು ಭಾರತೀಯ ಭಾμÁ ಸಂಸ್ಥೆಯ ಅಂಗ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಇದರ ಮೂಲ ಉದ್ದೇಶ ಮೌಲ್ಯಮಾಪನ ಮತ್ತು ಪರೀಕ್ಷೆಯ ವ್ಯವಸ್ಥೆಯಲ್ಲಿ ರಾಷ್ಟ್ರವ್ಯಾಪಿ ಒಮ್ಮತ ಮೂಡಿಸುವುದು, ಮೌಲ್ಯಮಾಪನ ಮತ್ತು ಪರೀಕ್ಷೆಗಾಗಿ ಮೂಲಭೂತ ಕಲಿಕಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಮೌಲ್ಯಮಾಪನ ಮತ್ತು ಪರೀಕ್ಷೆಯಲ್ಲಿ ಮಾನವ ಸಂಪನ್ಮೂಲಗಳ ತರಬೇತಿ ನೀಡುವುದು. ಯಾವುದೇ ಸಂಸ್ಥೆಯು ಶಿಕ್ಷಕರಿಗೆ ಭಾರತೀಯ ಭಾμÉಗಳಲ್ಲಿ ಮೌಲ್ಯಮಾಪನ ಮತ್ತು ಪರೀಕ್ಷೆಯ ಕೂರಿತು ತರಬೇತಿ ನೀಡಲು ಮುಂದೆ ಬಂದರೆ ನಾವು ಹಣವನ್ನು ಒದಗಿಸುತ್ತೇವೆ. ನಾವು ಡಾಕ್ಟರೇಟ್ ಮತ್ತು ಪೆÇೀಸ್ಟ್ ಡಾಕ್ಟರಲ್ ಸಂಶೋಧನೆಗೆ ಫೆಲೋಶಿಪ್ ನೀಡುತ್ತಿದ್ದೇವೆ” ಎಂದು ಹೇಳಿದರು.
ಸಿಯುಕೆಯ ಶೈಕ್ಷಣಿಕ ನಿರ್ದೇಶಕ, ಪೆÇ್ರ.ಬಸವರಾಜ ಡೋಣೂರ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಯುವ ಶಿಕ್ಷಕರು ಮತ್ತು ವಿದ್ವಾಂಸರಿಗೆ ಮೌಲ್ಯಮಾಪನ ಮತ್ತು ಪರೀಕ್ಷೆಯ ಬಗ್ಗೆ ತರಬೇತಿ ನೀಡುವುದು ಬಹಳ ಮುಖ್ಯ. ಪ್ರಶ್ನೆ ಪತ್ರಿಕೆ ರಚಿಸುವುದು ಒಂದು ಕಲೆ ಹಾಗೂ ವಿಜ್ಞಾನ ಕೂಡ. ಶಿಕ್ಷಕರಿಗೆ ಕಲಿಸುವುದು ಹೇಗೆ ಎಂದು ಮಾತ್ರವಲ್ಲದೆ ವಿದ್ಯಾರ್ಥಿಗಳನ್ನು ತಾವು ಕಲಿಸಿದ ವಿಷಯವನ್ನು ಹೇಗೆ ಕಲಿತಿದ್ದಾರೆಂದು ಪರೀಕ್ಷಿಸುವುದನ್ನೂ ಕೂಡ ತಿಳಿದಿರಬೇಕು. ಪ್ರಶ್ನೆಪತ್ರಿಕೆಗಳನ್ನು ರಚಿಸುವಲ್ಲಿ ಶಿಕ್ಷಕರು ಸೃಜನಶೀಲ, ಕಾಲ್ಪನಿಕ ಮತ್ತು ಬೌದ್ಧಿಕವಾಗಿರಬೇಕು” ಎಂದು ಅವರು ಹೇಳಿದರು.
ಮಾನವಿಕ ಮತ್ತು ಭಾμÁ ನಿಕಾಯದ ಡೀನ್ ರಾದ ಪೆÇ್ರ.ವಿಕ್ರಮ ವಿಸಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಪ್ರಶ್ನೆಗಳು ಸೂಕ್ಷ್ಮ ವಿಚಾರಗಳನ್ನೂ ಕೂಡ ಪರಿಗಣಿಸಬೇಕು ಮತ್ತು ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚಬೇಕು. ಕಾಟಾಚಾರಕ್ಕಾಗಿ ನಾವು ಪ್ರಶ್ನೆಗಳನ್ನು ರಚಿಸಬಾರದು. ಆರು ದಿನಗಳ ಈ ಕಾರ್ಯಕ್ರಮವು ವೈಜ್ಞಾನಿಕ ಮತ್ತು ತಾರ್ಕಿಕ ರೀತಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಹೊಂದಿಸುವ ಕಲೆ ಮತ್ತು ವಿಜ್ಞಾನವನ್ನು ತಿಳಿಯಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ” ಎಂದು ಅವರು ಹೇಳಿದರು.
ಡಾ.ಆಂಜನೇಯಲು ಸ್ವಾಗತಿಸಿದರೆ, ಕಾರ್ಯಕ್ರಮದ ಸಂಯೋಜಕಿ ಡಾ.ಮಂಜುಳಾಕ್ಷಿ ವಂದಿಸಿದರು. ಡಾ.ಜಯದೇವಿ ಜಂಗಮಶೆಟ್ಟಿ, ಡಾ.ರವಿಕಿರಣ್ ನಾಕೋಡ್ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಶಿಕ್ಷಕರು ಭಾಗವಹಿಸಿದ್ದರು.