ಸಿಯುಕೆಯಲ್ಲಿ ಕೊಳಲುವಾದನ ನಾಳೆ

ಕಲಬುರಗಿ,ನ.29: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗ, ಮತ್ತು ಸ್ಪಿಕ್ಮ್ಯಾಕೆ (ಯುವಜನರಲ್ಲಿ ವಿವಿಧ ಭಾರತೀಯ ಕಲಾ ಪ್ರಕಾರಗಳನ್ನು ಉತ್ತೇಜಿಸುವ ಪ್ರಸಿದ್ಧ ಸಂಸ್ಥೆ) ಸಹಯೋಗದೊಂದಿಗೆ ನಾಳೆ ( ನ.30 ) ಮಧ್ಯಾಹ್ನ 3 ಗಂಟೆಗೆ ಪಂಡಿತ್ ರೂಪಕ್ ಕುಲಕರ್ಣಿ ಅವರಿಂದ ಹಿಂದೂಸ್ತಾನಿ ಕೊಳಲು ವಾದನ ಕಾರ್ಯಕ್ರಮವನ್ನು ಸಿಯುಕೆ ಕ್ಯಾಂಪಸ್‍ನ ಆಡಿಟೋರಿಯಂ ಸಂಖ್ಯೆ 2 ರಲ್ಲಿ ಆಯೋಜಿಸುತ್ತಿದೆ. ಕಾರ್ಯಕ್ರಮದ ಕಲಾವಿದರ ಕುರಿತು ಮಾತನಾಡಿದ ಕಾರ್ಯಕ್ರಮದ ಸಂಯೋಜಕ ಡಾ.ಸ್ವಪ್ನಿಲ್ ಚಾಪೇಕರ್ ಪಂಡಿತ್ ರೂಪಕ್ ಕುಲಕರ್ಣಿ ಅವರು ಕೊಳಲು ವಾದಕ ಪದ್ಮವಿಭೂಷಣ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಹಿರಿಯ ಶಿಷ್ಯರು. ಅವರು ಆಕಾಶವಾಣಿಯ ಉನ್ನತ ದರ್ಜೆಯ ಕಲಾವಿದರಾಗಿದ್ದಾರೆ. ಪಂಡಿತ್ ಹಿಂದೋಳೆ ಮಜುಂದಾರ್ ತಬಲಾ ಸಾಥ ನೀಡಲಿದ್ದಾರೆ. ಫಾರೂಕಾಬಾದ್ ಘರಾನಾದ ಉಸ್ತಾದ್ ಕರಮತುಲ್ಲಾ ಖಾನ್ ಅವರ ಶಿಷ್ಯರಾದ ಶಿವಶಂಕರ ಕರ್ಮಾಕರ್ ಅವರಿಂದ ತಬಲಾವನ್ನು ಕಲಿತ ಇವರು ಪಂಡಿತ್ ಶಂಕ ಚಟರ್ಜಿಯವರಿಂದ ತರಬೇತಿ ಪಡೆಯುತ್ತಿದ್ದಾರೆ. ಎಲ್ಲರಿಗೂ ಮುಕ್ತ ಅವಕಾಶವಿದೆ ಯಾವುದೇ ಪ್ರವೇಶ ಶುಲ್ಕವಿಲ್ಲ ಎಂದು ಹೇಳಿದರು.