
ಕಲಬುರಗಿ,ಸೆ.17:”ನಿಜಾಮ ಅತ್ಯಂತ ಶ್ರೀಮಂತ ರಾಜನಾಗಿದ್ದ, ಆದರೆ ಅವನ ಪ್ರಜೆಗಳು ಅತ್ಯಂತ ಬಡವರಾಗಿದ್ದರು” ಎಂದು ಸಿಯುಕೆ ಪ್ರಭಾರಿ ಕುಲಸಚಿವ ಪೆÇ್ರ. ಆರ್ ಎಸ್ ಹೆಗಡಿ ಹೇಳಿದರು.
ಸಿಯುಕೆಯಲ್ಲಿ ಇಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ನಿಜಾಮರ ಕಾಲದಲ್ಲಿ ಯಾವುದೇ ಕೈಗಾರಿಕಾ ಅಭಿವೃದ್ಧಿ ಇರಲಿಲ್ಲ ಮತ್ತು ಕೃಷಿ ಬೆಳವಣಿಗೆಯೂ ಉತ್ತಮ ಸ್ಥಿತಿಯಲ್ಲಿರಲಿಲ್ಲ. ಶಿಕ್ಷಣ ಉರ್ದು ಮಾಧ್ಯಮದಲ್ಲಿತ್ತು, ಆದ್ದರಿಂದ ಕಲ್ಯಾಣ ಕರ್ನಾಟಕದ ಜನರು ಆಧುನೀಕರಣದ ಅನುಕೂಲಗಳಿಂದ ವಂಚಿತರಾದರು ಮತ್ತು ಈ ಪ್ರದೇಶವು ಹಿಂದುಳಿಯಿತು. ಡಿ ಎಂ ನಂಜುಂಡಪ್ಪ ಸಮಿತಿಯ ವರದಿಯ ನಂತರ ಸರ್ಕಾರವು ಈ ಪ್ರದೇಶದತ್ತ ನೋಡಲಾರಂಭಿಸಿತು ಮತ್ತು 2013 ರಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಅನುಚ್ಛೆದ 317 ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ನೀಡಲಾಯಿತು. ಇದರ ನಂತರ ನಾವು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕೆಲವು ಸುಧಾರಣೆಗಳನ್ನು ನೋಡುತ್ತಿದ್ದೇವೆ ಆದರೆ ಆರೋಗ್ಯ, ಗ್ರಾಮೀಣ ಶಿಕ್ಷಣ, ಕೈಗಾರಿಕಾ ಬೆಳವಣಿಗೆ ಇನ್ನೂ ಗಗನ ಕುಸುಮವಾಗಿದೆ” ಎಂದು ಅವರು ಹೇಳಿದರು.
ಸಿಯುಕೆ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅರ್ಜುನ್ ಆರ್ ಅವರು ಕಲ್ಯಾಣ ಕರ್ನಾಟಕ ವಿಮೋಚನಾ ಚಳವಳಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅವರು ಮಾತನಾಡಿ “ಬ್ರಿಟಿμï ಈಸ್ಟ್ ಇಂಡಿಯಾ ಕಂಪನಿಯೊಂದಿಗಿನ ಉತ್ತಮ ಸಂಬಂಧದಿಂದ ನಿಜಾಮರು ತಮ್ಮ ರಾಜ್ಯವನ್ನು ವಿಸ್ತರಿಸಿದರು ಮತ್ತು ಅವರು ಮೈಸೂರು ಮತ್ತು ಮರಾಠರಿಂದ ರಾಯಚೂರು ದೋವಾಬ್ ಮತ್ತು ಮರಾಠವಾಡವನ್ನು ಪಡೆದರು. ಕಲ್ಯಾಣ ಕರ್ನಾಟಕ ಪ್ರದೇಶವು ಕಬ್ಬಿಣ, ತಾಮ್ರ ಮತ್ತು ಚಿನ್ನದಂತಹ ಖನಿಜಗಳಿಂದ ಬಹಳ ಶ್ರೀಮಂತವಾಗಿದೆ. ಆದ್ದರಿಂದ ಇದು ನಿಜಾಮನಿಗೆ ಬಹಳ ಮುಖ್ಯವಾಗಿತ್ತು. ಭಾರತದ ಸ್ವಾತಂತ್ರ್ಯದ ನಂತರ, ನಿಜಾಮ್ ಮೀರ್ ಉಸ್ಮಾನ್ ಅಲಿಖಾನ್ ಅವರು ಹೈದರಾಬಾದ್ ರಾಜ್ಯವನ್ನು ಭಾರತೀಯ ಒಕ್ಕೂಟಕ್ಕೆ ಸೇರುವುದಿಲ್ಲ ಎಂದು ಘೋಷಿಸಿದರು ಮತ್ತು ರಾಷ್ಟ್ರೀಯ ಧ್ವಜವನ್ನು ಹಾರಿಸುವುದು ಮತ್ತು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದನ್ನು ನಿμÉೀಧಿಸಲಾಯಿತು. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಈ ಪ್ರದೇಶದ ಜನರು ತುಂಬಾ ಅಸಮಾಧಾನಗೊಂಡರು ಮತ್ತು ದಂಗೆಯನ್ನು ತೀವ್ರಗೊಳಿಸಿದರು. ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ನಿಜಾಮ್ ಮತ್ತು ಅವನ ಮಿಲಿಟರಿ ಕಮಾಂಡರ್ ಕಾಶಿಮ್ ರಿಜ್ವಿ ಅವರು ರಜಾಕರ ಎಂಬ ಸರ್ಕಾರದಿಂದ ಬೆಂಬಲಿತವಾದ ಖಾಸಗಿ ಸೈನ್ಯವನ್ನು ಹುಟ್ಟುಹಾಕಿದರು. ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ನಿಜಾಮ್ ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 200ಕ್ಕೂ ಹೆಚ್ಚು ರಜಾಕರ್ ಗುಂಪುಗಳು ಇದ್ದವು. ಈ ರಜಾಕಾರರು ಸಾಮಾನ್ಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಸಾಕಷ್ಟು ದೌರ್ಜನ್ಯಗಳನ್ನು ಏಸಗಿದರು. ನಿಜಾಮ್ ರಾಜ್ಯದಾದ್ಯಂತ ಇರುವ ಸ್ವಾತಂತ್ರ್ಯ ಹೋರಾಟಗಾರರ ಶಿಬಿರಗಳು ಅವರ ಮುಖ್ಯ ಗುರಿಯಾಗಿದ್ದವು. ದೇಶದ ಇತರ ಭಾಗಗಳೊಂದಿಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ವಾತಂತ್ರ್ಯ ಚಳುವಳಿ ಸಕ್ರಿಯವಾಗಿತ್ತು. ನಿಜಾಮ್ ರಾಜ್ಯದ ಗಡಿಪ್ರದೇಶದ ಹಳ್ಳಿಗಳಲ್ಲಿ ಸುಮಾರು 200 ಸ್ವಾತಂತ್ರ್ಯ ಹೋರಾಟಗಾರರ ಶಿಬಿರಗಳಿದ್ದವು. ರಜಾಕಾರರು ಈ ಶಿಬಿರಗಳನ್ನು ಗುರಿಯಾಗಿಸಿಕೊಂಡು ಹಳ್ಳಿಗಳನ್ನು ಸುಡುತ್ತಿದ್ದರು. ಬೀದರ್ ಜಿಲ್ಲೆಯ ಗೋರ್ಟಾ (ಬಿ) ಗ್ರಾಮದಲ್ಲಿ ಅತ್ಯಂತ ಭಯಾನಕ ಘಟನೆ ನಡೆಯಿತು. ಅಲ್ಲಿ ಸುಮಾರು 200 ಜನರನ್ನು ರಜಾಕಾರರು ಕೊಂದರು. ರಜಾಕರ ದುಷ್ಕøತ್ಯಗಳನ್ನು ತಡೆಯಲು ಮತ್ತು ನಿಜಾಮ ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ಸೆರಿಸಲು, ಭಾರತದ ಆಗಿನ ಗೃಹ ಮಂತ್ರಿ ಸರದಾರ ವಲ್ಲಭಾಯಿ ಪಟೆಲರು ನಿಜಾಮ ರಾಜ್ಯದ ಮೇಲೆ ಆಪರೇಷನ್ ಪೆÇೀಲೋ ಎಂಬ ಪೆÇಲೀಸ್ ಕ್ರಮಕ್ಕೆ ಆದೇಶಿಸಿದರು. ಭಾರತೀಯ ಸೇನೆಯೊಂದಿಗೆ ಹೋರಾಡಲು ಅಸಮರ್ಥನಾದ ನಿಜಾಮನು ಸೆಪ್ಟೆಂಬರ್ 17, 1948 ರಂದು ಶರಣಾದನು ಮತ್ತು ಹೈದರ್‍ಬಾಬ್ ನಿಜಾಮ್ ರಾಜ್ಯವು ಅಧಿಕೃತವಾಗಿ ಭಾರತ ಒಕ್ಕೂಟದೊಂದಿಗೆ ವಿಲೀನಗೊಂಡಿತು. ಆದ್ದರಿಂದ ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಈ ಪ್ರದೇಶದ ಜನರು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ” ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಡಾ.ಪಿ.ರಾಘವಯ್ಯ ಸ್ವಾಗತಿಸಿದರು; ಡಾ.ಎನ್.ಬಾಬು ವಂದಿಸಿದರು. ಡಾ.ಪಿ ಕುಮಾರ್ ಮಂಗಳಂ ಕಾರ್ಯಕ್ರಮ ನಿರೂಪಿಸಿದರು. ಡಾ.ಜಯದೇವಿ ಜಂಗಮಶೆಟ್ಟಿ ಮತ್ತು ಕುಮಾರಿ ವಿಜಯಲಕ್ಷ್ಮಿ ಅವರು ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡಿದರು.