ಸಿಯುಕೆಯಲ್ಲಿ ಆನ್‍ಲೈನ್ ಲೈಂಗಿಕ ಕಿರುಕುಳದ ಕುರಿತು ಜಾಗೃತಿ

ಕಲಬುರಗಿ:ಜ.31:”ಯಾವುದೇ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳ ಮೂಲಕ ಆನ್‍ಲೈನ್ ಲೈಂಗಿಕ ಕಿರುಕುಳ ಸಂಭವಿಸಬಹುದು” ಎಂದು ಕರ್ನಾಟಕ ಕಲಬುರಗಿಯ ಮಾಜಿ ಸಿವಿಲ್ ನ್ಯಾಯಾಧೀಶ ಮತ್ತು ವಕೀಲರಾದ ಡಾ. ಸುಭಾಶ್ಚಂದ್ರ ರಾಠೋಡ್ ಹೇಳಿದರು.
ಇಂದು ಸಿಯುಕೆ ಆಂತರಿಕ ದೂರು ಸಮಿತಿ (ಐಸಿಸಿ) ಆಯೋಜಿಸಿದ್ದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ವಾಟ್ಸಾಪ್, ಇಮೇಲ್, ಇನ್‍ಸ್ಟಾಗ್ರಾಮ್, ಟ್ವಿಟರ್ ಮತ್ತು ಇತರ ಯಾವುದೇ ಸಾಮಾಜಿಕ ಮಾಧ್ಯಮಗಳ ಮೂಲಕ ಲೈಂಗಿಕ ಕಿರುಕುಳ ಸಂಬವಿಸಬಹುದು. ಡಿಜಿಟಲ್ ಮಾಧ್ಯಮಗಳನ್ನು ಬಳಸುವಾಗ ಜನರು ಅತಿ ಜಾಗರೂಕರಾಗಿರಬೇಕು. ಜನರು ಪ್ರಪಂಚದ ಯಾವುದೇ ಭಾಗದಿಂದ ಯಾರಿಗಾದರೂ ಸಂದೇಶಗಳನ್ನು ಕಳುಹಿಸಬಹುದಾದ್ದರಿಂದ ಅಪರಾಧಿಯನ್ನು ಹಿಡಿಯುವುದು ತುಂಬಾ ಕಷ್ಟ. ಆದ್ದರಿಂದ ಅಂತರಜಾಲ ಸ್ನೇಹಿತರ ವಿನಂತಿಯನ್ನು ಸ್ವೀಕರಿಸುವಾಗ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಅಪರಿಚಿತ ಜನರ ಸ್ನೇಹಿತರ ವಿನಂತಿಯನ್ನು ಸ್ವೀಕರಿಸಬೇಡಿ ಮತ್ತು ಅಂತಹ ಜನರ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ನೀವು ಯಾವುದೇ ಅನಗತ್ಯ ಸಂದೇಶಗಳನ್ನು ಸ್ವೀಕರಿಸಿದರೆ ತಕ್ಷಣವೇ ಪುರಾವೆಗಾಗಿ ಸ್ಕ್ರೀನ್‍ಶಾಟ್ ತೆಗೆದುಕೊಳ್ಳಿ. ಅಪರಿಚಿತರಿಗೆ ಮೊಬೈಲ್ ಕೊಡಬೇಡಿ. ನಿಮ್ಮ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗೆ ಬಲವಾದ ಪಾಸ್‍ವರ್ಡ್ ಅನ್ನು ಇರಿಸಿಕೊಳ್ಳಿ ಇದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು” ಎಂದು ಅವರು ಹೇಳಿದರು.
ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಲೈಂಗಿಕ ಕಿರುಕುಳದಿಂದ ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕ ನಷ್ಟವಾಗುತ್ತದೆ. ಉದ್ಯೋಗಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಕಾರಣದಿಂದ ಕಂಪನಿಯನ್ನು ತೊರೆದರೆ ಅವಳು ತನ್ನ ಆದಾಯವನ್ನು ಕಳೆದುಕೊಳ್ಳುತ್ತಾಳೆ, ಕಂಪನಿಯು ತರಬೇತಿ ಪಡೆದ ಉದ್ಯೋಗಿಯನ್ನು ಕಳೆದುಕೊಳ್ಳುತ್ತದೆ ಮತ್ತು ಸೂಕ್ತವಾದ ಹೊಸ ಉದ್ಯೋಗಿಯನ್ನು ಹುಡುಕುವುದು ತುಂಬಾ ದುಬಾರಿ. ಲೈಂಗಿಕ ಕಿರುಕುಳಕ್ಕೆ ಒಳಗಾದ ನಂತರ ಉದ್ಯೋಗಿ ಉತ್ಪಾದಕತೆ ಮತ್ತು ದಕ್ಷತೆಯು ಶೇ. 35 ರಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದಿಂದಾಗಿ ವಿಶ್ವದಾದ್ಯಂತ ಕಂಪನಿಗಳು ಮತ್ತು ವ್ಯಕ್ತಿಗಳು ಸೆರಿ ಸುಮಾರು 6 ರಿಂದ 10 ಬಿಲಿಯನ್ ಡಾಲರ್ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನಾವೆಲ್ಲರೂ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ಮತ್ತು ಅದನ್ನು ಹೆಚ್ಚು ಮಹಿಳಾ ಸ್ನೇಹಿಯನ್ನಾಗಿ ಮಾಡಲು ಪಣತೊಡಬೇಕಾಗಿದೆ” ಎಂದು ಹೇಳಿದರು.
ಸಿಯುಕೆ ಐಸಿಸಿ ಅಧ್ಯಕ್ಷೆ ಪೆÇ್ರ.ಸುನೀತಾ ಮಂಜನಬೈಲ್, ಐಸಿಸಿ ಸದಸ್ಯರಾದ ಡಾ.ಬಸವರಾಜ ಎಂ.ಕುಬಕಡ್ಡಿ, ಡಾ.ರೇಣುಕಾ ಗುಬ್ಬೇವಾಡ, ಡಾ.ರೇμÁ್ಮ ನದಾಫ್, ಸಮರ್ಥಿನಿ ಸೇರಿಕಾರ, ಮಹಿಳಾ ಎನ್‍ಜಿಒ ಪ್ರತಿನಿಧಿ ಡಾ.ಪಲ್ಲವಿ ಪಾಟೀಲ್, ಅದ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.