ಸಿಯುಕೆಯಲ್ಲಿ ಆರ್ಥಿಕೋತ್ಸವ 2.0 ಉದ್ಘಾಟನೆ

ಕಲಬುರಗಿ:ಮಾ.15:ವಿಕಸಿತ ಭಾರತವನ್ನು ಸಾಧಿಸಲು ಸರ್ಕಾರದ ಉಪಕ್ರಮಗಳು ಮತ್ತು ಕಾರ್ಯಕ್ರಮಗಳ ಯಶಸ್ವಿ ಅನುμÁ್ಠನವು ಅತ್ಯಂತ ಅವಶ್ಯಕವಾಗಿದೆ” ಎಂದು ಸಾಗರ್‍ಏμÁ್ಯ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್‍ನ ಸಂಸ್ಥಾಪಕ ಅಧ್ಯಕ್ಷ ಶ್ರೀ. ವಿದ್ಯಾಸಾಗರ್ ಹೇಳಿದರು. ಅವರು ಇಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗವು ಆಯೋಜಿಸಿದ್ದ “ಆರ್ಥಿಕೋತ್ಸವ-2.0” ದ ಉದ್ಘಾಟನಾ ಸಂದರ್ಭದಲ್ಲಿ ಅವರು ವಿಕಸಿತ ಭಾರತ @ 2047 ಕುರಿತು ಮುಖ್ಯ ಭಾಷಣ ಮಾಡಿದರು. ಅವರು ಮುಂದುವರೆದು ಮಾತನಾಡಿ “ಇಂದಿನ ವಿದ್ಯಾರ್ಥಿಗಳು 2047 ರ ವೇಳೆಗೆ ನಮ್ಮ ದೇಶವನ್ನು ಅಭಿವೃದ್ಧಿಪಡಿಸುವ ನಾಳಿನ ಉದ್ಯೋಗಿಗಳಾಗಿದ್ದಾರೆ. ಸರ್ಕಾರದ ಉಪಕ್ರಮಗಳು ಮತ್ತು ಗುಣಮಟ್ಟದ ಉದ್ಯೋಗಿಗಳ ಜೊತೆಗೆ ಕೈಗಾರಿಕೆಗಳು, ತಂತ್ರಜ್ಞಾನ ಮತ್ತು ನಾವೀನ್ಯತೆಗಳು ಭಾರತದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ನಾವು ಚೀನಾದಂ ತಹ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸದೆ ಜಪಾನ ಜರ್ಮನಿಯಂತಹ ಗುಣಾತ್ಮಕ ವಸ್ತುಗಳನ್ನು ಉತ್ಪಾದಿಸಬೇಕಾಗಿದೆ. ನಮ್ಮ ಯುವಕರು ಅಭಿವೃದ್ಧಿ ಹೊಂದಿದ ಭಾರತದ ಫಲವನ್ನು ಅನುಭವಿಸಲಿದ್ದಾರೆ, ಆದ್ದರಿಂದ ವಿಕಸಿತ ಭಾರತದ ಕಡೆಗೆ ಗುರಿ ಇಡುವುದು ಯುವ ಜನರ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.

ಸಿಯುಕೆಯ ಗೌರವಾನ್ವಿತ ಕುಲಪತಿ, ಪೆÇ್ರ.ಬಟ್ಟು ಸತ್ಯನಾರಾಯಣ, ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿ, “ಭಾರತ ಸರ್ಕಾರದ ವಿಕಸಿತ ಭಾರತ ಸಾಧಿಸುವ ಪ್ರಯತ್ನ ಅಪಾರವಾಗಿದೆ. ನಮ್ಮ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರು ತನ್ನಕುಟುಂಬಕ್ಕಾಗಿ ದುಡಿಯುತ್ತಿಲ್ಲ, ಇಡೀ ದೇಶಕ್ಕಾಗಿ ದುಡಿಯುತ್ತಿದ್ದಾರೆ. ದೇಶದಲ್ಲಿ ಕಳೆದ ಒಂದು ದಶಕದಿಂದ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಕಾರಾತ್ಮಕ ಚಿಂತನೆ ಅಗತ್ಯ. ದೇಶದ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸುವಂತೆ ಇಡೀ ದೇಶಕ್ಕೆ ಪ್ರಧಾನಿ ಕರೆ ನೀಡಿದ್ದಾರೆ. ಆದ್ದರಿಂದ ನಾವೆಲ್ಲರೂ ವಿಕಸಿತ ಭಾರತಕ್ಕಾಗಿ ಕೆಲಸ ಮಾಡೋಣ” ಎಂದು ಹೇಳಿದರು.
ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಮುಖ್ಯಸ್ಥರಾದ ಡಾ. ಸುಮಾ ಸ್ಕೆರಿಯಾ ಪ್ರಾಸ್ತಾವಿಕವಾಗಿ ಮಾತನಾಡಿ, “ಈ ಸಮಾರಂಭದ ಅಂಗವಾಗಿ ಅನೇಕ ಶೈಕ್ಷಣಿಕ ಸ್ಪರ್ದೇಗಳು, ಆಹಾರ ಮಳಿಗೆಗಳು ಮತ್ತು ಸಂಜೆ ಚಲನಚಿತ್ರರಾತ್ರಿ ವಿಕ್ಷಣೆ ಏರ್ಪಡಿಸಿದೆ.ಆರ್ಥಿಕೋತ್ಸವ 2.0 ನ ಉದ್ಘಾಟನೆಯು ಎಲ್ಲಾ ಭಾಗವಹಿಸುವವರ ಜೀವನವನ್ನು ಉತ್ಕøಷ್ಟಗೊಳಿಸುವ ಭರವಸೆ ನೀಡುವ ಸಂತೋಷದಾಯಕ ಮತ್ತು ಸ್ಮರಣೀಯ ಆಚರಣೆಯ ಆರಂಭವನ್ನು ಸೂಚಿಸುತ್ತದೆ. ಈ ಕಾರ್ಯಕ್ರಮವು 16ನೇ ಮಾರ್ಚ್ 2024 ರವರೆಗೆ ಮುಂದುವರಿಯುತ್ತದೆ”.
ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕ ಡಾ.ಎಸ್.ಲಿಂಗಮೂರ್ತಿ, ಪೆÇ್ರ.ಪುμÁ್ಪ ಎಂ. ಸವದತ್ತಿ, ಡಾ.ಪಾಂಡುರಂಗ ವಿ. ಪತ್ತ್ಟಿ, ಡಾ.ಮಹಮ್ಮದ್ ಜೋಹೈರ್, ಡಾ. ಗೌತಮ್, ಡಾ. ಬಸವರಾಜ ಎಂ.ಎಸ್., ಡಾ.ಶಿವಕುಮಾರ್ ಎಂ.ಬೆಳ್ಳಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.