ಸಿಯುಕೆಯಲ್ಲಿ ‘ಅಮೃತ್ ಕಾಲ – ವಿಮರ್ಶೆ, ವಿಕಸಿತ ಭಾರತ@2047’ ಕುರಿತು ವಿಶೇಷ ಉಪನ್ಯಾಸ

ಕಲಬುರಗಿ: ನ. 02:”ಆತ್ಮನಿರ್ಭರ್ ಭಾರತ ನಮಗೆ ಹೊಸದೆನಲ್ಲ, ಏಕೆಂದರೆ ನಾಗರಿಕತೆಯ ಪ್ರಾರಂಭದಿಂದಲೂ ನಾವು ಸ್ವಾವಲಂಬಿ ಭಾರತವಾಗಿದ್ದೇವೆ” ಎಂದು ದೆಹಲಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕ ಪೆÇ್ರ. ಅಶ್ವನಿ ಮಹಾಜನ್ ಹೇಳಿದರು. ಇಂದು ಅವರು ಸಿಯುಕೆ ಆಯೋಜಿಸಿದ್ದ ‘ಅಮೃತ್ ಕಾಲ – ವಿಮರ್ಶೆ, ವಿಕಸಿತ ಭಾರತ @2047’ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ನಾವು ಅತ್ಯುತ್ತಮ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದೇವು ಮತ್ತು ಇಡೀ ಜಗತ್ತಿಗೆ ರಫ್ತು ಮಾಡುತ್ತಿದ್ದೇವು. ಪ್ರತಿಯಾಗಿ ಕೊಡಲು ಅವರ ಬಳಿ ಚಿನ್ನ ಬಿಟ್ಟು ಬೇರೇನೂ ಇರಲಿಲ್ಲ. ಭಾರತವು ಕೇವಲ ಒಂದೇ ಚಿನ್ನದ ಗಣಿಯನ್ನು ಹೊಂದಿದ್ದರೂ ಅದನ್ನು ‘ಬಂಗಾರದ ಹಕ್ಕಿ’ ಎಂದು ಕರೆಯಲಾಗುತ್ತಿತ್ತು. ಭಾರತೀಯgಲ್ಲಿರುವÀ ಒಟ್ಟು ಚಿನ್ನವು ಪ್ರಪಂಚದ ಉಳಿದ ಭಾಗಗಳಿಗಿಂತ ಹೆಚ್ಚಾಗಿದೆ. ಬ್ರಿಟಿಷರು ಬರುವ ಮೊದಲು, ಭಾರತವು ವಿಶ್ವದ ಜಿಡಿಪಿಗೆ ಶೇ. 33 ಕೊಡುಗೆ ನೀಡುತ್ತಿತ್ತು. ಆದರೆ ಇಂದು ನಾವು ಕೇವಲ ಶೇ.2ಕ್ಕಿಂತ ಕಡಿಮೆ ಕೊಡುಗೆ ನೀಡುತ್ತಿದ್ದೇವೆ. ವಿದೇಶಿ ಆಡಳಿತವು ನಮ್ಮ ಕೈಗಾರಿಕೆಗಳನ್ನು ಹಾಳುಮಾಡಿದೆ ಮತ್ತು ರಫ್ತು ಮಾಡುವ ದೇಶವನ್ನು ಆಮದು ಮಾಡಿಕೊಳ್ಳುವ ದೇ±ವನ್ನಾಗಿ ಪರಿವರ್ತಿಸಿದೆ. ಆತ್ಮನಿರ್ಭರ ಭಾರತದ ಕಲ್ಪನೆಯು ‘ಸ್ವದೇಶಿ ಆಂದೋಲನ’ ರೂಪದಲ್ಲಿ ಮತ್ತೆ ವ್ಯಕ್ತವಾಯಿತು. ಭಾರತವನ್ನು ಉತ್ಪಾದನಾ ಮತ್ತು ಕೈಗಾರಿಕಾ ರಾಷ್ಟ್ರವನ್ನಾಗಿ ಮಾಡಲು ಬಾಂಬೆ ಯೋಜನೆಯನ್ನು ಸಿದ್ಧಪಡಿಸಲಾಯಿತು. ಸ್ವಾತಂತ್ರ್ಯದ ನಂತರ ಸರ್ಕಾರದ ಯೋಜಿತ ಮತ್ತು ಸರಕಾರ ಆಧಾರಿತ ಆರ್ಥಿಕತೆಯು ಉದ್ಯಮದ ನಿರೀಕ್ಷೆಗಳಿಗೆ ಹೊಂದಿಕೆಯಾಗಿರÀಲಿಲ್ಲ. ಆದ್ದರಿಂದ ನಮ್ಮ ರಫ್ತು ಮತ್ತು ಜಿಡಿಪಿ ಬೆಳವಣಿಗೆಯ ದರವು ಕಡಿಮೆಯಾಗುತ್ತಲೇ ಬಂತು ಮತ್ತು ಅಂತಿಮವಾಗಿ ನಾವು 1991 ರ ಆರ್ಥಿಕ ಬಿಕ್ಕಟ್ಟನ್ನು ತಲುಪಿದ್ದೇವು” ಎಂದು ಅವರು ಹೇಳಿದರು.

ನೆಹರೂರವರ ಆತ್ಮನಿರ್ಭರ ಭಾರತ ಮತ್ತು ಮೋದಿಯವರ ಆತ್ಮನಿರ್ಭರ ಭಾರತ ಕುರಿತು ಮಾತನಾಡಿದ ಅವರು, “2020 ರಲ್ಲಿ ನಮ್ಮ ಪ್ರಧಾನಿ ಮೋದಿ ಅವರು ಆತ್ಮನಿರ್ಭರ ಭಾರತದಿಂದ ಮಾತ್ರ ನಾವು ಬೆಳೆಯಲು ಸಾಧ್ಯ ಹಾಗು ಇದೊಂದೆ ಮಾರ್ಗ ಎಂದು ಹೇಳಿಕೆ ನೀಡಿದ್ದರು. ಇದರಿಂದ ಭಾರತವು ನೆಹರೂರವರ ಆತ್ಮನಿರ್ಭರ ಭಾರತಕ್ಕೆ ಹಿಂತಿರುಗುತ್ತಿದೆಯೇ ಎಂಬ ಆತಂಕ ಮತ್ತು ಗೊಂದಲಗಳು ಉಂಟಾದವÀÅ. ನೆಹರೂರವರ ಆತ್ಮನಿರ್ಭರ ಭಾರತ ಕಲ್ಪನೆಂಯು ಆರ್ಥಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯೊಜನೆಯಾಗಿದೆ ಅಲ್ಲದೆ ಜಾಗತೀಕರಣ ಅಭಿವೃದ್ಧಿಗೆ ಇರುವ ಏಕೈಕ ಮಾರ್ಗವಾಗಿದೆ ಎಂದು ಅನೇಕ ತಜ್ಞರು ಹೇಳುತ್ತಿದ್ದರು. ಅಮೆರಿಕ, ಚೀನಾ ಮತ್ತು ಇಡೀ ಜಗತ್ತು ಇತರ ದೇಶಗಳ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಲು ಯೋಚಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಾವು ಒಂದು ಕಾಲದಲ್ಲಿ ರಫ್ತು ಮಾಡುತ್ತಿದ್ದ ಬಟ್ಟೆಗಳು, ಆಟಿಕೆಗಳು, ಔಷಧಗಳು, ರಾಸಾಯನಿಕಗಳು ಮುಂತಾದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಜಿಡಿಪಿಯಲ್ಲಿ ಭಾರತದ ಉತ್ಪಾದನಾ ವಲಯದ ಪಾಲು ಹತ್ತು ವರ್ಷಗಳಲ್ಲಿ ಶೇ. 19% ರಿಂದ ಶೇ. 16 ಕ್ಕೆ ಇಳಿದಿದೆ. ನಮ್ಮ ದೇಶೀಯ ಆರ್ಥಿಕತೆ ಮತ್ತು ವಿಶೇಷವಾಗಿ ಉತ್ಪಾದನಾ ವಲಯವನ್ನು ರಕ್ಷಿಸಲು ಸರ್ಕಾರವು ತೆರಿಗೆಯನ್ನು ಹೆಚ್ಚಿಸಿತು ಇದರಿಂದ ಬಿಳಿ ಸರಕುಗಳ ಆಮದು ಗಣನೀಯವಾಗಿ ಕುಸಿಯಿತು. ಇದರಿಂದ ಪ್ರೇರಿತನಾದ ನಾನು ನಮಗೆ ಯಾವ ರೀತಿಯ ಆತ್ಮನಿರ್ಭರ ಭಾರತ ಬೇಕು ಎಂದು ಪ್ರಖ್ಯಾತ ಬುದ್ಧಿಜೀವಿಗಳನ್ನು ಮತ್ತು ಅರ್ಥಶಾಸ್ತ್ರಜ್ಞರನ್ನು ಕೇಳಿದೆನು. ಆತ್ಮನಿರ್ಭರ ಭಾರತ ಎಂದರೆ ತೆರಿಗೆಯನ್ನು ಹೆಚ್ಚಿಸುವುದು ಅಥವಾ ಪ್ರಪಂಚದಿಂದ ಆರ್ಥಿಕ ಕಡಿತಗೊಳಿಸುವುದು ಅಥವಾ ಆಮದುಗಳನ್ನು ನಿಲ್ಲಿಸುವುದು ಎಂದರ್ಥವಲ್ಲ. ಆರ್ಥಿಕ ನೀತಿಗಳಲ್ಲಿ ನಾವು ಪ್ರಾಯೋಗಿಕವಾಗಿರಬೇಕು. ರಾಸಾಯನಿಕಗಳು, ಮೊಬೈಲ್‍ಗಳು, ಆಟಿಕೆಗಳು ಮತ್ತೀತÀರ ವಲಯಗಳಿಗೆÀ ಉತ್ಪಾದನಾ ಸಂಬಂಧಿತ ಪೆÇ್ರೀತ್ಸಾಹಕ ಯೋಜನೆಗಳಿಂದ ಆತ್ಮನಿರ್ಭರತೆಯನ್ನು ತರಬಹುದಾಗಿದೆ. ಮತ್ತು ಈ ಕ್ಷೇತ್ರಗಳಲ್ಲಿ ನಾವು ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಆತ್ಮನಿರ್ಭರರಾದರೆ ನಾವು ಅಗ್ಗದ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಬಹುದು. ಇಂದು ನಾವು ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಿಗೆ ಡ್ರೋನ್ ಮತ್ತು ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡುವ ಪ್ರಮುಖ ಉತ್ಪಾದಕರಾಗಿದ್ದೇವೆ. ಅದಕ್ಕೆ ನಮ್ಮ ಮನಸ್ಥಿತಿಯಲ್ಲಿ ಬದಲಾವಣೆ ಬೇಕು. ಗ್ರಾಹಕರ ಕೊಳ್ಳುವ ಶಕ್ತಿಯ ಸಮಾನತೆಯನ್ನು ತೆಗೆದುಕೊಂಡರೆ ನಾವು 13 ಟ್ರಿಲಿಯನ್ ಆರ್ಥಿಕತಯನ್ನು ಹೊಂದಿದ್ದೇವೆ ಮತ್ತು ನಮ್ಮ ಮಧ್ಯಮ ವರ್ಗದ ಜನರ ಜೀವನ ಮಟ್ಟವು ಅಭಿವೃದ್ಧಿ ಹೊಂದಿದ ದೇಶಗಳ ಮಧ್ಯಮ ವರ್ಗಕ್ಕಿಂತ ಉತ್ತಮವಾಗಿದೆ. ಇಂದು ಭಾರತವು ಒಂದು ಲಕ್ಷಕ್ಕೂ ಹೆಚ್ಚು ನವೋಧ್ಯಮಗಳನ್ನು ಮತ್ತು 100 ಕ್ಕೂ ಹೆಚ್ಚು ಯುನಿಕಾರ್ನ್‍ಗಳನ್ನು ಹೊಂದಿದೆ. 2047 ರ ವೇಳೆಗೆ ನಾವು ಎಲ್ಲಾ ಕ್ಷೇತ್ರಗಳಲ್ಲಿ ಆತ್ಮನಿರ್ಭರರಾದರೆ ಖಂಡಿತವಾಗಿಯೂ ಭಾರತವು ವಿಕಸಿತÀ ಭಾರತವಾಗಲಿದೆ” ಎಂದು ಅವರು ಹೇಳಿದರು.
ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಆತ್ಮನಿರ್ಭರ ಭಾರತವಾಗಲು ನಾವು ಕಚ್ಚಾ ವಸ್ತುಗಳನ್ನು ರಫ್ತು ಮಾಡಬಾರದು ಬದಲಿಗೆ ಸಿದ್ಧಪಡಿಸಿದ ವಸ್ತುಗಳನ್ನು ರಫ್ತು ಮಾಡಬೇಕು. ನಾವು ವಿದೇಶಿ ವಸ್ತುಗಳನ್ನು ಖರೀದಿಸಬಾರದು ಬದಲಿಗೆ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಬೇಕು. ಇದರಿಂದ ನಾವು ನಮ್ಮ ಯುವಕರಿಗೆ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಬಹುದು. ವಿದ್ಯಾರ್ಥಿಗಳೆ ನಿಮ್ಮನ್ನು ಕೇವಲ ತರಗತಿಯ ಬೋಧನೆಗೆ ಸೀಮಿತಗೊಳಿಸುವ ಬದಲು ವಿಶೇಷವಾಗಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನವನ್ನು ಏನಾಗುತ್ತಿದೆ ಎಂಬುದರ ಕಡೆ ಗಮನಹರಿಸಿ. ಭವಿಷ್ಯವು ನಿಮ್ಮದಾಗಿದೆ ಹಾಗು ಅದು ನಿಮ್ಮ ಕೈಯಲ್ಲಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್, ಪೆÇ್ರ. ಪುμÁ್ಪ ಸವದತ್ತಿ, ಡಾ. ಬಸವರಾಜ ಎಂ. ಎಸ್, ಡೀನ್‍ರು, ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.