ಸಿಯುಕೆನ 75 ವಿದ್ಯಾರ್ಥಿಗಳ ಕ್ಯಾಂಪಸ್ ಪ್ಲೆಸಮೆಂಟ್

ಕಲಬುರಗಿ: ಜೂ.23:“ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಹೊರಹೊಗುವಾಗ ಪ್ರಮಾಣ ಪತ್ರದೊಂದಿಗೆ ಉದ್ಯೋಗ ಪಡೆದುಕೊಂಡು ಹೋಗಬೇಕು ಇಲ್ಲವೆ ಎನ್ ಇ ಟಿ/ಜೆ ಆರ್ ಎಫ್ ಮಾಡಿ ದೇಶದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಸಂಶೋಧನೆ ಮಾಡಬೇಕು” ಎಂದು ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.
ಅವರು ಇಂದು ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಪಡೆದ ಸಿಯುಕೆಯ 75 ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡುತಿದ್ದರು. ಅವರು ಮುಂದುವರೆದು ಮಾತನಾಡಿ “ವಿದ್ಯಾರ್ಥಿಗಳು ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಸೇರಿ ದೇಶದ ಸೇವೆಮಾಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಸಂಸ್ಥೆಗಳು ತುದಿಗಾಲಮೇಲೆ ನಿಂತಿವೆ ಅದ್ದರಿಂದ ತಾವು ಕಠಿಣ ಪರಿಶ್ರಮದಿಂದ ಕೆಲಸಮಾಡಿ ವಿಶ್ವವಿದ್ಯಾಲಯಕ್ಕೆ ಹೆಸರು ತರಬೇಕು. ವಿಶ್ವವಿದ್ಯಾಲಯ ವಿದ್ಯಾರ್ಥಿಗಳಲ್ಲಿ ಸಾಮಥ್ರ್ಯ ಹೆಚ್ಚಿಸಲು ಕಟಿಬದ್ಧವಾಗಿದೆ” ಎಂದು ಹೇಳಿದರು.
ಕುಲಸಚಿವರಾದ ಪ್ರೊ. ಬಸವರಾಜ ಡೋಣೂರ ಮಾತನಾಡಿ “ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಬೇಕಾಗ ಅಗತ್ಯ ತರಬೇತಿ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲು ಸಿಯುಕೆ ಕಟಿಬದ್ಧವಾಗಿದೆ. ವಿಶ್ವವಿದ್ಯಾಲಯ ಪ್ರಾರಂಭವಾಗಿ 14 ವರ್ಷಗಳಾಗಿದ್ದು ನಮ್ಮ ಅನೇಕ ವಿದ್ಯಾರ್ಥಿಗಳು ದೇಶದಾದ್ಯಂತ ಅನೇಕ ಸಂಸ್ಥೆಗಳಲ್ಲಿ ಕಾರ್ಯ ಮಾಡುತ್ತಿದ್ದು ಇದು ವಿಶ್ವವಿದ್ಯಾಲಯದ ಹೆಮ್ಮೆಯಾಗಿದೆ. ನಮ್ಮ ಹಳೆಯ ವಿದ್ಯಾರ್ಥಿಗಳ ಸಂಘ ಮಾಡುವ ಮೂಲಕ ಅವರನ್ನು ವಿಶ್ವವಿದ್ಯಲಯದೊಂದಿಗೆ ಜೋಡಿಸುವ ತನ್ಮೂಲಕ ಪ್ರಸ್ತುತ ವಿದ್ಯಾರ್ಥಿಗಳಿಗೆ ಉದ್ಯೋಗ ಹಾಗು ಸಂಶೋಧನೆಯಲ್ಲಿ ಸಹಾಯಮಾಡಲಾಗುತ್ತಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಡಾ. ಪರಮೇಶ ಅವರು ಮಾತನಾಡಿ “ಅವಂಟಿಸ ಫೆಲೋಸ್ನಲ್ಲಿ 9, ಅಜೀಮ ಪ್ರೇಮಜಿ ಪೌಂಡೆಶನಲ್ಲಿ 17, ಆಕಾಶ ಬೈಜುಸ್ ನಲ್ಲಿ 13 ಉಳಿದವರೆಲ್ಲ ಕ್ಯೂಸ್ಪೈಡರ್ಸ ಮತ್ತು ಕೊಡನೆಸ್ಟ ಟೆಕ್ನೋಲೊಜಿಸ್ ನಲ್ಲಿ ಉದ್ಯೋಗ ಪಡೆದಿದ್ದಾರೆ. ಇದು ಎರಡನೆ ಹಂತದ ಉದ್ಯೋಗ ಮೇಳವಾಗಿದ್ದು ಅಗಷ್ಟವರೆಗೆ ಮುಂದುವರೆಯಲಿದ್ದು ಇನ್ನು ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗ ಪಡೆಯಲಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ವೆಂಕಟರಮಣ ದೊಡ್ಡಿ ಮತ್ತು ಉದ್ಯೋಗ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.