ಸಿಯುಕೆ:ನಾಳೆಯಿಂದ ಕಾರ್ಯಾಗಾರ

ಕಲಬುರಗಿ ಜು 24: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗವು ನಾಳೆ (ಜುಲೈ 25) ಯಿಂದ ಎರಡು ದಿನಗಳ ಓಗಿIಆIಂ ಡೀಪ್ ಲರ್ನಿಂಗ್ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಹಮ್ಮಿಕೊಂಡಿದೆ.ಮುಖ್ಯ ಅತಿಥಿಯಾಗಿ ಮತ್ತು ಮುಖ್ಯ ಭಾಷಣಕಾರರಾಗಿ ವಿಜ್ಞಾನ ಫೌಂಡೇಶನ್ ಕುಲಪತಿ, ಐಐಐಟಿ ಅಲಹಾಬಾದ್‍ನ ಮಾಜಿ ನಿರ್ದೇಶಕ ಪೆÇ್ರ. ಪಿ.ನಾಗಭೂಷಣ್ ಅವರು ಆಗಮಿಸುವರು.ಸಿಯುಕೆ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು ಅಧ್ಯಕ್ಷತೆ ವಹಿಸುವರು.ಕಾರ್ಯಕ್ರಮದ ಎರಡು ದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುವವರಿಗೆ ತರಬೇತಿ ನೀಡಲಿದ್ದಾರೆ
ಭಾಗವಹಿಸಲು ಬಯಸುವ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಶಿಕ್ಷಕರು
ಕಂಪ್ಯೂಟರ್ ವಿಜ್ಞಾನ ವಿಭಾಗದ ಡೀನ್ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ.ಆರ್.ಎಸ್.ಹೆಗಡಿ (96040 85138) ಅವರನ್ನು ಸಂಪರ್ಕಿಸಲು ಕೋರಲಾಗಿದೆ.