
ಕಲಬುರಗಿ,ಆ.08:”ಭಾರತೀಯ ನ್ಯಾಯಶಾಸ್ತ್ರಕ್ಕೆ ಭಾರತೀಯ ಕಾನೂನು ವ್ಯವಸ್ಥೆ ಮತ್ತು ಕಾನೂನು ಪಠ್ಯಕ್ರಮದಲ್ಲಿ ಕಡಿಮೆ ಒತ್ತು ನೀಡಲಾಗಿದೆ” ಎಂದು ಸಿಯುಕೆ ಕಾನೂನು ನಿಕಾಯದ, ಡೀನ್ ಡಾ. ಬಸವರಾಜ ಕುಬಕಡ್ಡಿ ಹೇಳಿದರು.
ಅವರು “ಮಿತಾಕ್ಷರ: ಭಾರತೀಯ ನ್ಯಾಯಶಾಸ್ತ್ರದ ಅನ್ವಯಿಕ ವಿಜ್ಞಾನ” ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಆಯೊಜನೆ ಕುರಿತ ಮಾತನಾಡಿ “ಮಿತಾಕ್ಷರ ಕುರಿತು ಮಾತನಾಡುವಾಗ, ಜನರು ಕೇವಲ ಉತ್ತರಾಧಿಕಾರದ ನಿಯಮವನ್ನು ಚರ್ಚಿಸುತ್ತಾರೆ. ಮಿತಾಕ್ಷರ ಚಿಂತನೆ ಅಷ್ಟಕ್ಕೆ ಸೀಮಿತವಾಗಿಲ್ಲ. ಪ್ರಾಚೀನ ಭಾರತೀಯ ನ್ಯಾಯಶಾಸ್ತ್ರವು ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ವ್ಯವಸ್ಥೆಗಳೆರಡರ ಕುರಿತು ಹೆಚ್ಚಿನ ಜ್ಞಾನವನ್ನು ನೀಡುತ್ತದೆ. ಆದ್ದರಿಂದ ಭಾರತೀಯ ನ್ಯಾಯಶಾಸ್ತ್ರದ ಕಡೆಗೆ ಗಮನ ಹರಿಸಲು ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ಬೌದ್ಧಿಕ ಸ್ಪರ್ಧಾತ್ಮಕತೆಯ ದಿನಗಳಲ್ಲಿ, ನಮ್ಮ ಪ್ರಾಚೀನ ಗ್ರಂಥಗಳನ್ನು ಉಲ್ಲೇಖಿಸಿ ಮತ್ತು ಅವು ಎಷ್ಟು ಸಮಗ್ರವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಕಾನೂನು ಕ್ಷೇತ್ರದ ಮೇಲೆ ನಮ್ಮ ಹಿಡಿತ ಸಾಧಿಸುವುದು ಬಹಳ ಮುಖ್ಯವಾಗಿದೆ. ನಮ್ಮ ಪ್ರಾಚೀನ ಕಾನೂನು ಗ್ರಂಥಗಳ ವಿಮರ್ಶಾತ್ಮಕ ಸ್ವರೂಪವನ್ನು ಈ ಸಮ್ಮೇಳನದ ಮೂಲಕ ಚರ್ಚಿಸಲಾಗುವುದು” ಎಂದು ಹೇಳಿದರು.
ಸಮ್ಮೇಳನದ ಸಂಯೋಜಕ ಡಾ.ಅನಂತ್ ಚಿಂಚುರೆ ಮಾತನಾಡಿ, “ಸಮ್ಮೇಳನವು ಅ.12ರಂದು ನಿಗದಿಯಾಗಿದ್ದು, ಸಿಯುಕೆಯಲ್ಲಿ ನಡೆಯಲಿದೆ. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಹಾಗು ಆಂಧ್ರಪ್ರದೇಶದ ರಾಜ್ಯಪಾಲರಾದ ಶ್ರೀ ಎಸ್. ಅಬ್ದುಲ್ ನಜೀರ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ವಿ.ಶ್ರೀಶಾನಂದ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಅಧ್ಯಕ್ಷರು, ವಿಜ್ಞಾನೇಶ್ವರ ಪ್ರತಿμÁ್ಠನ ಟ್ರಸ್ಟ್ ಮತ್ತು ಮಾಜಿ ರಾಜ್ಯಸಭಾ ಸದಸ್ಯರು ಅತಿಥಿಯಾಗಿ ಭಾಗವಹಿಸುವರು ಮತ್ತು ಸಿಯುಕೆ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆ ವಹಿಸುವರು” ಎಂದು ಅವರು ಹೇಳಿದರು.
ವಿಜ್ಞಾನೇಶ್ವರ ಪ್ರತಿμÁ್ಠನ ಟ್ರಸ್ಟ್ ನ ಶ್ರೀ ಮಹದೇವಯ್ಯ ಕರದಳ್ಳಿ ಅವರು ಮಾತನಾಡಿ “ಸಮ್ಮೇಳನದಲ್ಲಿ ಧರ್ಮದ ಪರಿಕಲ್ಪನೆ ಕಾನೂನು, ನ್ಯಾಯ, ಮತ್ತು ನೈತಿಕತೆ; ಧರ್ಮವು, ವ್ಯವಹಾರ ಧರ್ಮ ಮತ್ತು ರಾಜ ಧರ್ಮವಾಗಿ ಬದಲಾಗುವ ಬಗೆ; ಧರ್ಮದ ಮೂಲಗಳು- ವೇದ, ಸಮೃತಿಗಳು, ಧರ್ಮಶಾಸ್ತ್ರ, ಸದಾಚಾರ ಮತ್ತು ಆಧುನಿಕ ಕಾನೂನು ವ್ಯವಸ್ಥೆಯಲ್ಲಿ ಅವುಗಳ ಪ್ರಸ್ತುತತೆ; ಕಾನೂನು ಸಿದ್ಧಾಂತ: ಭಾರತೀಯ ತತ್ವಶಾಸ್ತ್ರ ಮತ್ತು ಪಾಶ್ಚಾತ್ಯ ತತ್ವಶಾಸ್ತ್ರ; ಭಾರತೀಯ ನ್ಯಾಯಶಾಸ್ತ್ರ ಮತ್ತು ಅದರ ಸುಸ್ಥಿರ ಅಭಿವೃದ್ಧಿ; ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಮೀಮಾಂಸಾ ತತ್ವಗಳ ಅಡಿಯಲ್ಲಿ ಮಾನವೀಯ ಕಾನೂನುಗಳನ್ನು ಚರ್ಚಿಸಲಾಗುವುದು” ಎಂದು ಅವರು ಹೇಳಿದರು.