ಸಿಮೆಂಟ್ ವಾಹನ ಪಲ್ಟಿ: ಇಬ್ಬರು ಕಾರ್ಮಿಕರ ಸಾವು

ವಿಜಯಪುರ,ಏ.8- ಸಿಮೆಂಟ್ ತುಂಬಿದ್ದ ವಾಹನ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿರುವ ದುರ್ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೆಬಗೇರಿ ಬಳಿ ಸಂಭವಿಸಿದೆ.
ಈ ಅಪಘಾತದಲ್ಲಿ ಗೆದ್ದಲಮರಿ ತಾಂಡಾದ ನಿವಾಸಿ ವೆಂಕಟೇಶ ಪವಾರ ಹಾಗೂ ಢವಳಗಿ ನಿವಾಸಿ ನಾಗಪ್ಪ ದಂಡೆ ಎಂಬುವರು ಸಾವನ್ನಪ್ಪಿರುವ ಕಾರ್ಮಿಕರಾಗಿದ್ದಾರೆ.
ಮುದ್ದೇಬಿಹಾಳದಿಂದ ನೆಬಗೇರಿಗೆ ಹೊಗುವಾಗ ಈ ದುಘಾಟನೆ ಸಂಭವಿಸಿದೆ. ಗಾಯಗೊಂಡಿರುವ ಇಬ್ಬರು ಕಾರ್ಮಿಕರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೆÇಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ.