ಸಿಮೆಂಟ್ ರಸ್ತೆ ಕಾಮಗಾರಿಗೆ ಪಾಲಿಕೆ ಮಾಜಿ ಮೇಯರ್ ಉಮಾಪ್ರಕಾಶ್ ಚಾಲನೆ

ದಾವಣಗೆರೆ, ; ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಲ್ಲಿ ಇಲ್ಲಿನ ೩೨ನೇ ವಾರ್ಡ್‌ನ ಜಯನಗರ ಸಿ ಬ್ಲಾಕ್‌ನ ಕದಂಬ ಉದ್ಯಾನವನದಿಂದ ರಾಜಕಾಲುವೆವರೆಗೆ ಹಾಗೂ ಪಾರ್ಕ್ ಮುಂಭಾಗದ ರಸ್ತೆ ಸಿಮೆಂಟ್ ರಸ್ತೆಯಾಗಿಸುವ ಕಾಮಗಾರಿಯನ್ನು  ಪಾಲಿಕೆ ಸದಸ್ಯೆ, ಮಾಜಿ ಮೇಯರ್ ಡಿ.ಎಸ್.ಉಮಾ ಪ್ರಕಾಶ್ ಪರಿಶೀಲಿಸಿದರು.ಇಲ್ಲಿನ ಜಯನಗರ ಸಿ ಬ್ಲಾಕ್‌ನಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಪಾಲಿಕೆ ಇಂಜಿನಿಯರ್‌ಗಳ ಸಮೇತ ಭೇಟಿ ನೀಡಿ ಪರಿಶೀಲಿಸಿದ ಪಾಲಿಕೆ ಸದಸ್ಯೆ ಉಮಾ ಪ್ರಕಾಶ್  ಕದಂಬ ಪಾರ್ಕ್ ಮುಂಭಾಗದ ರಸ್ತೆ ಹಾಗೂ ಪಾರ್ಕ್‌ನಿಂದ ರಾಜಕಾಲುವೆವರೆಗೆಪಾಲಿಕೆಯ ಸಾಮಾನ್ಯ ನಿಧಿಯಡಿ ೫೨ ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಂಡಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.ನಂತರ ಭೂಮಿಕಾ ನಗರಕ್ಕೆ ಭೇಟಿ ನೀಡಿದ್ದ ವೇಳೆ ಸ್ಥಳೀಯರ ಮನವಿ ಆಲಿಸಿದ ಉಮಾ ಪ್ರಕಾಶ, ಟಿವಿ ಸ್ಟೇಷನ್ ಕೆರೆಯ ಮಣ್ಣನ್ನು ಬಳಸಿಕೊಂಡು, ರಸ್ತೆ ಸರಿಪಡಿಸುವಂತೆ ಶಾಸಕರು, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್ ಸೂಚಿಸಿದ್ದರು. ಅದರಂತೆ ನಮ್ಮ ಭಾಗದ ಭೂಮಿಕಾ ನಗರ ೨ನೇ ಹಂತದ ಜನರಿಗೆ ಅನುಕೂಲವಾಗುವಂತೆ ಮುಖ್ಯರಸ್ತೆಗೆ ಸಂಪರ್ಕ ರಸ್ತೆ ಇಲ್ಲದೇ ದೊಡ್ಡ ಸಮಸ್ಯೆಯಾಗಿತ್ತು. ಶಾಸಕ ರವೀಂದ್ರನಾಥರನ್ನು  ಭೇಟಿಯಾಗಿ, ಈ ಬಗ್ಗೆ ಮನವಿ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.ಶಾಸಕರ ಸಲಹೆಯಂತೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಕೆರೆಯನ್ನು ವಿಸ್ತರಿಸಲು ಮಣ್ಣು ತೆಗೆಯಲಾಗುತ್ತಿದೆ. ಅದೇ ಮಣ್ಣನ್ನು ಬಳಸಿಕೊಂಡು, ನಮ್ಮ ವಾರ್ಡ್‌ನ ಅಂಬಿಕಾ ಬಡಾವಣೆ, ಭೂಮಿಕಾ ನಗರ ಲಿಂಕ್ ರಸ್ತೆಗಳಿಗೆ ಹಾಕಿಸಿ, ತಾತ್ಕಾಲಿಕವಾಗಿ ರಸ್ತೆ ದುರಸ್ಥಿ ಮಾಡಿ, ಜನರಿಗೆ ಅನುಕೂಲ ಮಾಡುವಂತೆ ಸೂಚಿಸಿದ್ದರು. ಅದರಂತೆ ಆಯುಕ್ತ ವಿಶ್ವನಾಥ ಮುದಜ್ಜಿಯವರಿಗೆ ಸಂಪರ್ಕಿಸಿ, ಕೆರೆಯ ಮಣ್ಣನ್ನು ಪಾಲಿಕೆ ಟಿಪ್ಪರ್ ಹಾಗೂ ಜೆಸಿಬಿ ಬಳಸಿಕೊಂಡು, ಅಲ್ಲಿಂದ ಮಣ್ಣನ್ನು ತರಿಸಿ, ನಮ್ಮ ವಾರ್ಡ್‌ನ ಜನರಿಗೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡುತ್ತಿದ್ದೇವೆ ಎಂದು ಅವರು ವಿವರಿಸಿದರು. ಸ್ಥಳೀಯ ಮಹಿಳೆಯರು, ನಿವಾಸಿಗಳು ಸಹ ರಸ್ತೆ ದುರಸ್ಥಿ ಮಾಡಿಸಿದ್ದಕ್ಕೆ ಶಾಸಕ ರವೀಂದ್ರನಾಥ, ಪಾಲಿಕೆ ಸದಸ್ಯೆ ಉಮಾ ಪ್ರಕಾಶ, ಆಯುಕ್ತ ವಿಶ್ವನಾಥ್‌ರಿಗೆ ಕೃತಜ್ಞತೆ ಸಲ್ಲಿಸಿ, ಆದಷ್ಟು ಬೇಗನೆ ಸಿಸಿ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.ಬಿಜೆಪಿ ಹಿರಿಯ ಮುಖಂಡ, ವಕೀಲ ಎ.ವೈ.ಪ್ರಕಾಶ, ಸ್ಥಳೀಯ ನಿವಾಸಿಗಳಾದ ಶಂಕರರಾವ್, ಶಂಕರ ನಾಯ್ಕ, ಪಂಚಾಕ್ಷರಯ್ಯ, ಕರಿಬಸಪ್ಪ, ನಿವೃತ್ತ ಅಂಚೆ ಮಾಸ್ಟರ್ ಪ್ರಕಾಶ, ಪೊಲೀಸ್ ಇಲಾಖೆಯ ರವಿ, ಪಾಲಿಕೆ ಇಇ ಮನೋಹರ, ಎಇಇಗಳಾದ ಪ್ರವೀಣ, ಜಗದೀಶ, ಎಇ ಸುಮ, ಗುತ್ತಿಗೆದಾರ ಸಂತೋಷ ಇತರರು ಇದ್ದರು.