ಸಿಮೆಂಟ್ ಟ್ಯಾಂಕರ್ ಡಿಕ್ಕಿ: ದ್ವಿಚಕ್ರವಾಹನ ಸವಾರನ ಸಾವು

ಕಲಬುರಗಿ.ಮೇ.31: ಸಿಮೆಂಟ್ ಟ್ಯಾಂಕರ್ ಮುಂದೆ ಹೋಗುತ್ತಿದ್ದ ದ್ವಿಚಕ್ರವಾಹನದ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಅದರ ಸವಾರನು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಹಡಗಿಲ್ ಹಾರುತಿ ಬಳಿ ಸಂಭವಿಸಿದೆ.
ಮೃತನಿಗೆ ಅಫಜಲಪುರ ತಾಲ್ಲೂಕಿನ ಅತನೂರು ಗ್ರಾಮದ ನಿವಾಸಿ ಸಾತಪ್ಪ ತಂದೆ ಗಂಗಣ್ಣ (33) ಎಂದು ಗುರುತಿಸಲಾಗಿದೆ.
ಸಿಮೆಂಟ್ ಟ್ಯಾಂಕರ್ ಡಿಕ್ಕಿಯ ರಭಸಕ್ಕೆ ದ್ವಿಚಕ್ರವಾಹನದೊಂದಿಗೆ ಸವಾರ ತಾತಪ್ಪನು ರಸ್ತೆ ಬದಿಗೆ ಹಾರಿ ಕೆಳಗೆ ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಸಂಚಾರಿ ಪೋಲಿಸ್ ಠಾಣೆ 1ರ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.