ಸಿಮೆಂಟ್ ಚೀಲದ ರಾಶಿಗೆ ದುಷ್ಕರ್ಮಿಗಳಿಂದ ಬೆಂಕಿ

ಪಾಂಡವಪುರ: ಮೇ.20:- ರಾಜಕೀಯ ದುರುದ್ದೇಶದಿಂದ ರಸ್ತೆ, ಚರಂಡಿ ಕಾಮಗಾರಿಗಾಗಿ ಇಲಾಖೆಯಿಂದ ಪಡೆದಿದ್ದ ಸಿಮೆಂಟ್ ಚೀಲದ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಾಕಿ ಸುಟ್ಟುಹಾಕಿರುವ ಘಟನೆ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಮಾಣಿಕ್ಯನಹಳ್ಳಿ ಗ್ರಾಮದ ಪರಿಶಿಷ್ಟ ಕಾಲೋನಿಯಲ್ಲಿನ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷ ಕರೀಗೌಡ ಎಂಬುವರು ಗುತ್ತಿಗೆಪಡೆದು ರಸ್ತೆ ಹಾಗೂ ಚರಂಡಿ ಕಾಮಗಾರಿಗಾಗಿ ಲ್ಯಾಂಡ್ ಆರ್ಮಿಯಿಂದ 1300 ಹಾಗೂ ನಿರ್ಮಿತಿ ಕೇಂದ್ರದಿಂದ 400 ಚೀಲ ಸಿಮೆಂಟ್ ಪಡೆದು ಗ್ರಾಮದ ಪರಿಶಿಷ್ಠ ಕಾಲೂನಿಯಲ್ಲಿ ಒಂದೆಡೆ ಸಂಗ್ರಹಿಸಿಡಲಾಗಿತ್ತು.ಸಿಮೆಂಟ್ ಚೀಲಗಳನ್ನು ಸಂಗ್ರಹಿಸಿ ಟಾರ್ಲಪ್ ನಿಂದ ಸಂಗ್ರಹಿಸಿಟಲಾಗುತ್ತು. ಗುರುವಾರ ರಾತ್ರಿ ಯಾರೋ ರಾಜಕೀಯ ದುರದ್ದೇಶದಿಂದ ಸಿಮೆಂಟ್ ಸಂಗ್ರಹದ ಗುಡ್ಡೆ ಬೆಂಕಿ ಹಾಕಿದ್ದಾರೆ.ಗುರುವಾರ ರಾತ್ರಿ ಬೆಂಕಿ ಹಚ್ಚಿಕೊಂಡು ಉರಿಯುವುದನ್ನು ಕಂಡು ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳಕ್ಕೆ ಸಾರ್ವಜನಿಕರು ಸೇರುವಷ್ಟರಲ್ಲಿ ಸುಮಾರು ಬಹುತೇಕ ಸಿಮೆಂಟ್ ಚೀಲಗಳು ಸುಟ್ಟಿಭಸ್ಮವಾಗಿವೆ. ಘಟನೆಯಲ್ಲಿ ಸುಮಾರು 600 ಕ್ಕೂ ಅಧಿಕ ಸಿಮೆಂಟ್ ಚೀಲಗಳು ಸುಟ್ಟಿಭಸ್ಮವಾಗಿದ್ದು 3.50ಲಕ್ಷಕ್ಕೂ ಅಧಿಕ ನಷ್ಟವಾಗಿದೆ.
ವಿಷಯ ತಿಳಿದ ಮೇಲುಕೋಟೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಗುತ್ತಿಗೆದಾರ ಕರೀಗೌಡ ಅವರು ಕಿಡಿಗೇಡಿಗಳು ರಾಜಕೀಯ ದುರುದ್ದೇಶದಿಂದಲೇ ಸಿಮೆಂಟ್ ಚೀಲಗಳಿಗೆ ಬೆಂಕಿ ಹಚ್ಚಿದ್ದಾರೆ.ಹಾಗಾಗಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವಂತೆ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.