ಸಿಮೆಂಟ್ ಘಟಕಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವನೆ/ಸಮಸ್ಯೆ ಪರಿಹರಿಸಲಾಗುವುದು: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ:ಅ.20: ಎಲ್ಲಾ ಸಿಮೆಂಟ್ ಘಟಕಗಳು ಯಾವುದೇ ಪ್ರಸ್ತಾವನೆ/ ಸಮಸ್ಯೆಗಳು ಇದ್ದರೆ ಸರ್ಕಾರದ ಮಟ್ಟದಲ್ಲಿ ಹಾಗೂ ಜಿಲ್ಲಾಡಳಿತ ಗಮನಕ್ಕೆ ತಂದಲ್ಲಿ ಪರಿಹಾರಿಸಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ & ಮಾಹಿತಿ ತಂತ್ರಜ್ಞಾನ & ಜೈವಿಕ ತಂತ್ರಜ್ಞಾನ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಮೆಂಟ್ ಘಟಕಗಳ ಮುಖ್ಯಸ್ಥರರೊಂದಿಗೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಮಟ್ಟದ ಜಿಲ್ಲಾಡಳಿತ ಮಟ್ಟದ ಮತ್ತು ಇಲಾಖೆ ಮಟ್ಟದಿಂದ ಘಟಕಗಳಿಗೆ ಸಹಾಯ ಹಸ್ತ ನೀಡಲಾಗುವುದೆಂದು ತಿಳಿಸಿದರು.
ಎಲ್ಲಾ ಸಿಮೆಂಟ್ ಘಟಕಗಳು ಸಿಎಸ್‍ಆರ್ ಅನುದಾನದಡಿ ಕೈಗೊಳ್ಳುತ್ತಿರುವ ಕೆಲಸಗಳ ಬಗ್ಗೆ ಮಾತನಾಡಿದರು. ಜಿಲ್ಲೆಯ ಎಲ್ಲಾ ಸಿಮೆಂಟ್ ಘಟಕಗಳು ಕಲಬುರಗಿ ಜಿಲ್ಲೆಯ ಸರ್ವಾಂಗಿಣ ಅಭಿವೃದಿಯಲ್ಲಿ ತಾವು ಶ್ರಮಿಸುವುದಾಗಿ ತಿಳಿಸಿದರು.
ಸಿಮೆಂಟ್ ಘಟಕಗಳ ಮುಖ್ಯಸ್ಥರು ತಮ್ಮ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ತಿಳಿಸಲು ಸಾಧ್ಯವಾಗದೇ ಇದ್ದರೆ ನೇರವಾಗಿ ತಮ್ಮ ಕಛೇರಿಗೆ ಪತ್ರದ ಮುಖಾಂತರ ಅಥವಾ ದೂರವಾಣಿ ಮೂಲಕ ಮನವಿ ಸಲ್ಲಿಸಲು ತಿಳಿಸಿದರು. ಸಭೆಯಲ್ಲಿ ಸಿಮೆಂಟ್ ಘಟಕಗಳಿಗೆ ಯಾವುದೇ ಸಮಸ್ಯೆ/ಕುಂದುಕೊರತೆ ಇದ್ದರೆ ಅದರ ಬಗ್ಗೆ ತಮ್ಮ ಕಛೇರಿಯ ಗಮನಕ್ಕೆ ತರಲು ತಿಳಿಸಿದರು.
ಸಭೆಯಲ್ಲಿ ದಕ್ಷಿಣ ಮತ್ತ ಕ್ಷೇತ್ರ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಅಫಜಲಪೂರ, ಶಾಸಕರಾದ ಎಂ.ವೈ.ಪಾಟೀಲ, ಜಿಲ್ಲಾಧಿಕಾರಿ ಫೌಜಿಯ್ ತರನ್ನುಮ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ ಅಡ್ಡೂರ ನಗರ ಪೋಲಿಸ್ ಆಯುಕ್ತರಾದ ಚೇತನ್ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿಗಳು, ಮಹಾನಗರ ಪಾಲಿಕೆಯ ಆಯುಕ್ತ ಪಾಟೀಲ ಭುವನೇಶ್ವರ ದೇವಿದಾಸ, ಕೈಗಾರಿಕಾ ಜಂಟಿ ನಿರ್ದೇಶಕರಾದ ಸತೀಶ ಕುಮಾರ ಎಸಿಸಿ ಸಿಮೆಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್ಸ್, ವಾಸವದತ್ತಾ ಸಿಮೆಂಟ್ಸ್, ಕಲಬುರಗಿ ಸಿಮೆಂಟ್ಸ್, ಶ್ರೀ ಸಿಮೆಂಟ್ಸ್, ಚೆಟ್ಟಿನಾಡ ಸಿಮೆಂಟ್ಸ್, ಓರಿಯಂಟ್ ಸಿಮೆಂಟ್ಸ್ ಘಟಕಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.