ಸಿಬ್ಬಂದಿಗೆ ಕೊರೊನಾ ಸೊಂಕು : ಪುರಸಭೆ ಕಚೇರಿಗೆ ಸ್ಯಾನಿಟೈಸ

ಲಿಂಗಸುಗೂರು,ಮೇ.೨೦- ಪಟ್ಟಣದ ಪುರಸಭೆ ಕಚೇರಿ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೊಂಕು ತಗುಲಿದ್ದರಿಂದ ಬುಧವಾರ ಪುರಸಭೆ ಕಚೇರಿಗೆ ಸ್ಯಾನಿಟೈಸರ್ ಮಾಡಿಸಲಾಯಿತು.
ಸಿಬ್ಬಂದಿಗೆ ಬುಧವಾರ ಸೊಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಪುರಸಭೆ ಕಚೇರಿಯ ಕಟ್ಟಡದ ಒಳಗೆ ಮತ್ತು ಹೊರಗೆ ಪೌರಕಾರ್ಮಿಕರು ಸ್ಯಾನಿಟೈಸರ್ ಮಾಡಿದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮೀ, ರಾಜಶೇಖರ್ ಪಾಟೀಲ್, ರಾಘವೇಂದ್ರ ಹಾಗೂ ಇನ್ನಿತರಿದ್ದರು.