ಸಿಬ್ಬಂದಿಗಳ ಸಹಕಾರ ವಿದ್ಯಾರ್ಥಿಗಳ ಪ್ರಯತ್ನ ಪ್ರಶಸ್ತಿಗೆ ಕಾರಣವಾಗಿದೆ:ರಾಠೋಡ

ಸೈದಾಪುರ:ಎ.5:ನನ್ನ ಈ ವಿದಧ ಸಾಧನೆಗೆ ಸಿಬ್ಬಂದಿಗಳ ಸಹಕಾರ ವಿದ್ಯಾರ್ಥಿಗಳ ಸೇವಾ ಮನೋಭಾವನೆಯ ಪ್ರಯತ್ನವೇ ಕಾರಣವಾಗಿದೆ ಎಂದು ಬಾಲಾಜಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರ ಕಿಶೋನ.ಬಿ.ರಾಠೋಡ ಹೇಳಿದರು.

ಪಟ್ಟಣದ ಬಾಲಾಜಿ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಇತ್ತಿಚಿಗೆ ಗುರಗಾವ ಹೆಲ್ತ್ ಫೌಂಡೇಶನ್ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ಟ್ರೀಟ್ ಫ್ರೀ ಇಂಡಿಯಾ ಮೂಮೆಂಟ ಚಳವಳಿಯಲ್ಲಿ ಭಾಗವಹಿಸಿ ಲೀಡರ್ ಶಿಪ್ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ಕಂಚಿನ ಪದಕ ಪಡೆದುದ್ದಕ್ಕಾಗಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದರು. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾರ್ವಜನಿಕರು ಎಲ್ಲಂದರಲ್ಲಿ ಉಗುಳುವುದರಿಂದ ವೈರಸ್ ಸುಲಭವಾಗಿ ಮತ್ತು ಬೇಗ ಹರಡುತ್ತದೆ ಎಂದು ತಜ್ಞರು ನಿರ್ಧರಿಸಿದರು. ಇದರ ಬಗಗೆ ಜನಸಾಮಾನ್ಯರಿಗೆ ತಿಳಿಸಲು ಈ ಚಳುವಳಿಯನ್ನು ಪ್ರಧಾನಿ ಮೋದಿಯವರು ಹಮ್ಮಿಕೊಂಡು ಚಾಲನೆ ನೀಡಿದರು. ಇದಕ್ಕೆ ಬಾಲಾಜಿ ಪದವಿ ಮಹಾವಿದ್ಯಾಲಯ ಸಂಕಷ್ಟ ಸಮಯದಲ್ಲಿ ಸೇವಾ ಮನೋಭಾವನೆಯೊಂದಿಗೆ ಕಾರ್ಯ ನಿರ್ವಹಿಸಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಗಡಿ ಗ್ರಾಮೀಣ ಭಾಗದ ಮಹತ್ವ ಹೆಚ್ಚಾದಂತಾಗಿದೆ ಎಂದು ಪ್ರಶಸ್ತಿಯ ಸಂತಸದ ಕ್ಷಣಗಳನ್ನು ಹಂಚಿಕೊಂಡರು. ಉಪನ್ಯಾಸಕರಾದ ಶ್ವೇತಾ ರಾಘವೇಂದ್ರ ಪೂರಿ, ಮೀನಾಕ್ಷಿ, ಭೀಮಶಪ್ಪ, ಭೀಮರೆಡ್ಡಿ, ಮಂಜುನಾಥ, ಸಿಬ್ಬಂದಿ ಮಾರುತಿ ಸೇರಿದಂತೆ ಇತರರಿದ್ದರು.