ಸಿಬಿಐ ಮೇಲೆ ನಿಯಂತ್ರಣ ಹೊಂದಿಲ್ಲ: , ಸುಪ್ರೀಂಗೆ ಕೇಂದ್ರದ ಪ್ರಮಾಣಪತ್ರ

ನವದೆಹಲಿ,ಮೇ೩- ಸ್ವಾಯತ್ತ ತನಿಖಾ ಸಂಸ್ಥೆಯಾಗಿರುವ ಸಿಬಿಐ ಮೇಲೆ ಯಾವುದೇ ಆಡಳಿತಾತ್ಮಕ ಮತ್ತು ಮೇಲ್ವಿಚಾರಣಾ ನಿಯಂತ್ರಣ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್‌ಗೆ ನೀಡಿರುವ ಅಫಿಡವಿಟ್‌ನಲ್ಲಿ ಈ ವಿಷಯ ತಿಳಿಸಿದೆ.

ರಾಜ್ಯಗಳಲ್ಲಿ ಸಿಬಿಐ ತನಿಖೆಗೆ ಅವಕಾಶ ನೀಡದಿರುವ ವಿರುದ್ಧ ಸಂವಿಧಾನದ ೧೩೧ ನೇ ವಿಧಿಯ ಅಡಿಯಲ್ಲಿ ಪಶ್ಚಿಮ ಬಂಗಾಳದ ಮೂಲ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಈ ವಿಷಯ ತಿಳಿಸಿದೆ.

ಪಶ್ಚಿಮ ಬಂಗಾಳದ ಅರ್ಜಿಯ ನಿರ್ವಹಣೆಯ ಕುರಿತು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಷಯ ತಿಳಿಸಿದ್ದಾರೆ

ರಾಜ್ಯದಲ್ಲಿನ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಕೇಂದ್ರ ರಾಜ್ಯ ವಿವಾದದ ಬಣ್ಣ ನೀಡಲು ಪಶ್ಚಿಮ ಬಂಗಾಳ ಸರ್ಕಾರ ಪ್ರಯತ್ನಿಸುತ್ತಿದೆ, ಅವುಗಳಲ್ಲಿ ಹಲವು ಆದೇಶಗಳನ್ನು ನೀಡಿವೆ ಎಂದು ಕಲ್ಕತ್ತಾ ಉಚ್ಚ ನ್ಯಾಯಾಲಯದ ವಿಷಯವನ್ನು ಉಲ್ಲೇಖಿಸಿದ್ದಾರೆ

ಸಿಬಿಐನಿಂದ ಪ್ರಕರಣಗಳ ನೋಂದಣಿ, ತನಿಖೆ ಮತ್ತು ಪ್ರಕರಣದ ವಿಚಾರಣೆಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸಿಬಿಐ ಮೇಲೆ ನಮಗೆ ಆಡಳಿತಾತ್ಮಕ ಮತ್ತು ಮೇಲ್ವಿಚಾರಣಾ ಅಧಿಕಾರವಿಲ್ಲ. ಪ್ರಕರಣಗಳ ನೋಂದಣಿ ಅಥವಾ ಹೇಗೆ ತನಿಖೆ ನಡೆಸಬೇಕು ಅಥವಾ ಮುಕ್ತಾಯದ ವರದಿಗಳು ಅಥವಾ ಚಾರ್ಜ್‌ಶೀಟ್ ಅನ್ನು ಸಲ್ಲಿಸಬೇಕೆ ಎನ್ನುವುದರ ಕುರಿತು ಅವರು ಈ ವಿಷಯ ತಿಳಿಸಿದ್ಧಾರೆ

ಸಿಬಿಐ ಪ್ರತ್ಯೇಕ ಶಾಸನಬದ್ಧ ಘಟಕವಾಗಿದ್ದು, ಮತ್ತೊಂದು ಶಾಸನಬದ್ಧ ಸಂಸ್ಥೆ ಸಿವಿಸಿ ಯಿಂದ ಮೇಲ್ವಿಚಾರಣೆ ನಡೆಸಲ್ಪಡುತ್ತದೆ. ಹೀಗಾಗಿ ಸಿಬಿಐ ಸರ್ಕಾರದ ಅಂಗವಲ್ಲ ಎಂದು ತಿಳಿಸಿದ್ದಾರೆ

ವಿವಿಧ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ನಿರ್ದೇಶಿಸುವ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ಸುಪ್ರೀಂಕೋರ್ಟ್ ಸಂಪರ್ಕಿಸಿದೆ ಮತ್ತು ಅದೇ ಕುಂದುಕೊರತೆಗಳ ಪರಿಹಾರಕ್ಕಾಗಿ ಮೊಕದ್ದಮೆ ಹೂಡಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ

ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ ನಂತರ ರಾಜ್ಯ ಸರ್ಕಾರ ಹೇಗೆ ಮೊಕದ್ದಮೆ ಹೂಡಬಹುದು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಪಶ್ಚಿಮ ಬಂಗಾಳದ ಪರ ವಾದ ಮಂಡಿಸಿ, ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆ ಅವರು ಹೇಳಿದಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ವಿಚಾರಣೆ ಮುಂದಿನ ವಾರಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ