ಸಿಬಿಐ ತನಿಖೆ ರದ್ದು: ಸುಪ್ರೀಂಗೆ ಅನಿಲ್ ದೇಶ್ ಮುಖ್

ಮುಂಬೈ,ಏ.5- ಭ್ರಷ್ಟಾಚಾರದ ಆರೋಪ‌ ಕುರಿತಂತೆ ತಮ್ಮ ವಿರುದ್ದ ಸಿಬಿಐ ತನಿಖೆಗೆ ಆದೇಶ ಹೊರಡಿಸಿರುವ ಕ್ರಮವನ್ನು ರದ್ದು ಪಡಿಸುವಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾಗಿದ್ದಾರೆ.

ಸಿಬಿಐ ತನಿಖೆಗೆ ಅನುಮತಿ ನೀಡಿದ ಬಳಿಕ ನೈತಿಕ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ‌ ನೀಡಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತಾನಾಡಿದ ಅನಿಲ್ ದೇಶ್ ಮುಖ್ ಅವರು ,ಬಾಂಬೆ ಸೈಕೋ ಆದೇಶ ರದ್ದು ಮಾಡುವಂತೆ ಸುಪ್ರೀಂ ಕೋರ್ಟ್ ಮನವಿ‌ ಮಾಡಿದ್ದಾರೆ .

ದಿಲೀಪ್ ವೆಸ್ಲಿಗೆ ಗೃಹ ಖಾತೆ:

ಅನಿಲ್ ದೇಶ್ ಮುಖ್ ರಾಜೀನಾಮೆಯನ್ನು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅಂಗೀಕರಿಸಿದ್ದಾರೆ

ಅನಿಲ್ ದೇಶ್ ಮುಖ್ ಅವರಿಂದ ತೆರವಾಗಿದ್ದ ಗೃಹ ಖಾತೆಯ ಜವಬ್ದಾರಿಯನ್ನು ಎನ್ ಸಿ‌ಪಿ ಮುಖ್ಯಸ್ಥ ಶರದ್ ಪವಾರ್ ಆಪ್ತ, ದಿಲೀಪ್ ವೆಸ್ಲೆ ಅವರಿಗೆ ಹೆಚ್ಚುವರಿಯಾಗಿ ಖಾತೆ ಹಂಚಿಕೆ ಮಾಡಿದ್ದಾರೆ.

ಅಂಬೆಗಾನ್ ವಿಧಾನಸಭಾ ಕ್ಷೇತ್ರದ ಶಾಸಕ ಹಾಗು ಅಬಕಾರಿ ಮತ್ತು ಕಾರ್ಮಿಕ ಖಾತೆ ಸಚಿವರಾಗಿರುವ ದಿಲೀಪ್ ವೆಸ್ಲೆ ಅವರಿಗೆ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಗೃಹ ಖಾತೆಯನ್ನು ಹಂಚಿಕೆ ಮಾಡಿ‌‌ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದಾರೆ.