ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ತ್ವರಿತ ಪ್ರಕಟಕ್ಕೆ ಕ್ರಮ

ನವದೆಹಲಿ, ಜೂ. ಸಿಬಿಎಸ್ 12ನೇ ತರಗತಿಯ ಫಲಿತಾಂಶವನ್ನು ತ್ವರಿತವಾಗಿ ನೀಡಲಾಗುವುದು ಎಂದು ಸಿಬಿಎಸ್ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಹೇಳಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಫಲಿತಾಂಶ ದಿನಾಂಕವನ್ನು ಈಗಲೇ ತೀರ್ಮಾನಿಸಲು ಸಾಧ್ಯವಿಲ್ಲ. ಶೀಘ್ರದಲ್ಲೇ ಪ್ರಕ್ರಿಯೆ ಮುಕ್ತಾಯ ಅಂತ್ಯಗೊಳಿಸಲಾಗುವುದು ಎಂದರು.
ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಅಥವಾ ವಿದೇಶಿ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಅರ್ಜಿ ಸಲ್ಲಿಸುವ ಗಡುವಿಗೂ ಮುನ್ನ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದರು.
ಇನ್ನು 15 ದಿನಗಳಲ್ಲಿ ಸಿಬಿಎಸ್ಇ 12 ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಲಿದೆ. 14 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಬೇಕಿರುವುದರಿಂದ ಈ ಮೌಲ್ಯಮಾಪನ ಪ್ರಕ್ರಿಯೆ, ಫಲಿತಾಂಶಗಳ ಮಾನದಂಡಗಳನ್ನು ನಿರ್ಧರಿಸುವುದಕ್ಕೆ ಕಾಲಾವಕಾಶ ಬೇಕು, ಈ ಬಗ್ಗೆ ಚರ್ಚೆಯೂ ಆಗಬೇಕಿದೆ ಎಂದು ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜೂ.1 ರಂದು ಮಹತ್ವದ ಘೋಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಬಿಎಸ್ಇಯ 12 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದರು