ಸಿಬಿಎಸ್ ಇ ‌12 ನೇ ತರಗತಿ ವಿದ್ಯಾರ್ಥಿಗಳ ಉತ್ತೀರ್ಣ: ಉನ್ನತ ಮಟ್ಟದ ಸಮಿತಿ‌ ರಚನೆ

ನವದೆಹಲಿ, ಜೂ.4- ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ-ಸಿಬಿಎಸ್ ಇ 12 ನೇ ತರಗತಿಯ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವ ಸಲುವಾಗಿ ಮಾನದಂಡ ರೂಪಿಸಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ.

ಸಿಬಿಎಸ್ ಇ 12 ನೇ ತರಗತಿ ಪರೀಕ್ಷೆ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಎರಡು ವಾರದಲ್ಲಿ ವಿದ್ಯಾರ್ಥಿಗಳ‌ ಪರೀಕ್ಷಾ ಮಾನದಂಡ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಸಮಿತಿ‌ ರಚಿಸಿಲಾಗಿದೆ.

ಹತ್ತು ದಿನಗಳ ಒಳಗಾಗಿ ಸಮಗ್ರವಾದ ವರದಿಯನ್ನು ನೀಡುವಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ಆದೇಶದಲ್ಲಿ ತಿಳಿಸಿದೆ.

ಸಮಿತಿಯಲ್ಲಿ ಯಾರು ಯಾರು?

ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ವಿಪಿನ್ ಕುಮಾರ್ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿ ರಚನೆ ಮಾಡಲಾಗಿದೆ.

ಉಳಿದಂತೆ, ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಉದಿತ್ ಪ್ರಕಾಶ್ ರೈ, ಕೇಂದ್ರೀಯ ವಿದ್ಯಾಲಯ ಸಂಘಟನೆಯ ಆಯುಕ್ತರಾದ ನಿಧಿ ಪಾಂಡೆ, ನವೋದಯ ವಿದ್ಯಾಲಯ ಸಮಿತಿ ಆಯುಕ್ತರಾದ ವಿ ನಾಯಕಿ ಗಾರ್ಗ್, ವಿಶ್ವವಿದ್ಯಾಲಯ ಧನಸಹಾಯ ಆಯೋಗ- ಯುಜಿಸಿ ಅಧ್ಯಕ್ಷರ ಪ್ರತಿನಿಧಿ ಅವರ ಸಮಿತಿ ರಚನೆ ಮಾಡಲಾಗಿದೆ‌

ಇನ್ನುಳಿದಂತೆ ಚಂದಿಗಡ ಶಾಲಾ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ರುಬೀಂದರ್ ಜಿತ್ ಸಿಂಗ್ ಬ್ರಾ, ಶಿಕ್ಷಣ ಸಚಿವಾಲಯದ ಉಪ ಮಹಾನಿರ್ದೇಶಕ ಪಿ.ಕೆ ಬ್ಯಾನರ್ಜಿ, ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಸಂಸ್ಥೆಯ ನಿರ್ದೇಶಕರ ಪ್ರತಿನಿಧಿ, ಶಾಲಾ ಆಡಳಿತ ಮಂಡಳಿಯ ಇಬ್ಬರು ಸದಸ್ಯರು, ಸಿಬಿಎಸ್ ಇ ನಿರ್ದೇಶಕ ಡಾ.ಅಂತರಿಕ್ಷಾ ಜೊಹ್ರಿ, ಸಿಬಿಎಸ್ ಸಿ ಅಕಾಡೆಮಿ ನಿರ್ದೇಶಕ ಡಾ.ಜೋಸೆಫ್ ಇನಾಮುಯಲದ, ಸಿಬಿಎಸ್ ಇ ಪರೀಕ್ಷಾ ನಿಯಂತ್ರಿಕ ಡಾ.ಸನ್ಮಯ್ ಭಾರದ್ವಾಜ್ ಅವರು ಉನ್ನತ ಸಮಿತಿಯಲ್ಲಿದ್ದಾರೆ.

ಉನ್ನತಮಟ್ಟದ ಸಮಿತಿ ಸಭೆ ಸೇರಿ ವಿದ್ಯಾರ್ಥಿಗಳನ್ನು ಯಾವ ಮಾನದಂಡದ ಆಧಾರದ ಮೇಲೆ ಮುಂದಿನ ಹಂತಕ್ಕೆ ಪಾಸು ಮಾಡಬೇಕು ಎನ್ನುವ ಕುರಿತು ಮಾರ್ಗಸೂಚಿಗಳನ್ನು ನೀಡಿದ ಬಳಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ