ಸಿಬಿಎಸ್ ಇ ಪರೀಕ್ಷೆ :ಕೇಂದ್ರೀಯ ವಿದ್ಯಾಲಯ ಶಾಲೆಗೆ ಉತ್ತಮ ಫಲಿತಾಂಶ

ರಾಯಚೂರು,ಜು.23- ಆಶಾಪುರ ರಸ್ತೆಯಲ್ಲಿ ಇರುವ ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳು 2021-22 ಶೈಕ್ಷಣಿಕ ವರ್ಷದ 10 ನೇ ತರಗತಿಯ ಬೋರ್ಡ್ ಪರೀಕ್ಷೆಯ ಸಿಬಿಎಸ್ ಇ  ಬೋರ್ಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದಿದ್ದಾರೆ ಎಂದು ಕೇಂದ್ರೀಯ ವಿದ್ಯಾಲಯ ಪ್ರಾಂಶುಪಾಲ ಪಿ.ಶೇಖರ್ ಬಾಬು ತಿಳಿಸಿದ್ದಾರೆ.

ತರಗತಿಯಲ್ಲಿ ಒಟ್ಟು 42 ವಿದ್ಯಾರ್ಥಿಗಳು ಹಾಜರಾಗಿದ್ದರು.ಭಾಗ್ಯಶ್ರೀ ರಂಜನ್  500 ಅಂಕಗಳಲ್ಲಿ 483 ಅಂಕಗಳೊಂದಿಗೆ (96.60%) ಅಗ್ರಸ್ಥಾನದಲ್ಲಿದ್ದಾರೆ ಮತ್ತು ಸಂಸ್ಕೃತದಲ್ಲಿ 100 ರಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ, ಶುಭಾನು ಓಜಾ 500 ರಲ್ಲಿ 465 ಅಂಕಗಳನ್ನು (93%), ಕೆ.ಇಂಧು ಪ್ರಿಯಾ 500 ರಾಲಿ 464  ಅಂಕಗಳನ್ನು ಗಳಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಸಿದ್ದಾರೆ.