ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆ ರದ್ದತಿ ತೀರ್ಮಾನವಾಗಿಲ್ಲ: ಮಂಡಳಿ ಸ್ಪಷ್ಟನೆ

ನವದೆಹಲಿ, ಮೇ14- ಸಿಬಿಎಸ್ ಇ 12ನೇ ತರಗತಿ ರದ್ದುಪಡಿಸುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ‌‌ ಹಿನ್ನಲೆಯಲ್ಲಿ ಪರೀಕ್ಷೆ ರದ್ದುಪಡಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದರು.
ಪರೀಕ್ಷೆ ರದ್ದುಪಡಿಸುವಂತಹ ನಿರ್ಧಾರಕ್ಕೆ ಬರಲಾಗಿಲ್ಲ. ಈ ಕುರಿತು ತೀರ್ಮಾನ ಕೈಗೊಂಡರೆ ಈ ವಿಷಯವನ್ನು ಸಾರ್ವಜನಿಕವಾಗಿ ತಿಳಿಸಲಾಗುತ್ತದೆ. ಆದ್ದರಿಂದ ವದಂತಿಗಳಿಗೆ‌ ಕಿವಿಗೊಡಬೇಡಿ‌ ಎಂದು ಅವರು ಮನವಿ‌ ಮಾಡಿದ್ದಾರೆ.
ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಏ.14ರಂದು ಸಿಬಿಎಸ್ ಇ 10ನೇ ತರಗತಿಯ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಸಿಬಿಎಸ್ ಇ12ನೇ ತರಗತಿಗಳ ಪರೀಕ್ಷೆಯನ್ನು ಮುಂದೂಡಲಾಗಿತ್ತು.
ಜೂ.1 ರ ಬಳಿಕ ಪರಿಸ್ಥಿತಿ ಪರಾಮರ್ಶೆ ನಡೆಸಿ ಪರೀಕ್ಷೆ ನಡೆಯುವ 15 ದಿನ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಅಂದು ತಿಳಿಸಲಾಗಿತ್ತು.
ಆದರೆ ಸಿ ಬಿಎಸ್ ಇ 12ನೇ ತರಗತಿಗಳ ಪರೀಕ್ಷೆ ರದ್ದುಪಡಿಸುವ ಸಾಧ್ಯತೆಯಿದೆ ಎಂದು ವರದಿಗಳು ಪ್ರಕಟವಾಗಿದ್ದರಿಂದ ಮಂಡಳಿ‌ ಈ ಸ್ಪಷ್ಟೀಕರಣ ನೀಡಿದೆ.