ಸಿಬಿಎಸ್‍ಇ ಹತ್ತನೇತರಗತಿಯ ವಿದ್ಯಾರ್ಥಿಗಳ ಸಾಧನೆ ಸಂಭ್ರಮ

ಬೀದರ:ಮೇ.16:ಜ್ಞಾನಸುಧಾ ವಿದ್ಯಾಲಯವು ಪ್ರಸಕ್ತ ಸಾಲಿನ (2022-23) ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‍ಇ)ಯ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ನೂರು ಪ್ರತಿಶತ ಪಡೆದಿದ್ದು, ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗು ಅವರ ಪಾಲಕರಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ನಗರದ ಮಾಮನಕೇರಾದಲ್ಲಿರುವ ಜ್ಞಾನಸುಧಾ ವಿದ್ಯಾಲಯದಜ್ಞಾನರಂಗ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಿಬಿಎಸ್‍ಇ ಹತ್ತನೇಯ ಪರೀಕ್ಷೆಯಲಿ ್ಲಅಗ್ರಶೇಣಿ ಹಾಗೂ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾದ ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಿದ್ಯಾಲಯದ ಅಧ್ಯಕ್ಷರಾದ ಡಾ|| ಪೂರ್ಣಿಮಾ ಜಿ. ಅವರು ‘ನಮ ್ಮಜ್ಞಾನಸುಧಾ ವಿದ್ಯಾಲಯದಲ್ಲಿ 10ನೇ ತರಗತಿ ಅಭ್ಯಾಸಿಸಿರುವ ಮಕ್ಕಳಲ್ಲಿ 57% ಮಕ್ಕಳು ಅಗ್ರಶ್ರೇಣಿ ಪಡೆದಿರುವುದು ಗುಣಾತ್ಮಕ ಶಿಕ್ಷಣದ ದ್ಯೋತಕ. ಬದಲಾದ ಹೊಸ ವಿನ್ಯಾಸದ ಪ್ರಶ್ನೆಪತ್ರಿಕೆ ಮಧ್ಯೆಯೂ ಮಕ್ಕಳು ಉತ್ತಮ ಫಲಿತಾಂಶ ದಾಖಲಿಸಿರುವುದು ಅಭಿಮಾನ ಪಡಬಲ್ಲ ಸಂಗತಿ.ಇದರ ಶ್ರೇಯ ಶಾಲೆ, ಮಕ್ಕಳು ಮಾತ್ರವಲ್ಲದೆ ಪಾಲಕರಿಗೂ ಸಲ್ಲುತ್ತದೆ.

ಈ ಮಕ್ಕಳ ಭವಿಷ್ಯ ಉಜ್ವಲ ಆಗುವ ನಿಟ್ಟಿನಲ್ಲಿ ಮುಂದೆ ಕಾಲೇಜು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲೂ ಅತಿಜಾಗರೂಕತೆ ಮತ್ತು ಜಾಣತನದಿಂದ ಆಯ್ಕೆ ಮಾಡಿಕೊಳ್ಳಬೇಕು. ಬೇರೆಯಾರೋ ಮಾಡಿದ್ದಾರೆ ಅಂತಾದೂರದ ಊರಿನ ಪ್ರತಿಷ್ಠಿತ ಕಾಲೇಜುಗಳಿಗೆ ಪ್ರವೇಶ ಪಡೆದು ಆಮೇಲೆ ಪಶ್ಚಾತಾಪ ಪಟ್ಟವರನ್ನುನಾನು ನೋಡಿದ್ದೇನೆ. ನಮ್ಮ ಜ್ಞಾನಸುಧಾ ಪದವಿ ಪೂರ್ವಕಾಲೇಜಿನಲ್ಲಿಯೂ ಎಲ್ಲಾ ಸೌಲಭ್ಯ ಮಕ್ಕಳಿಗೆ ನೀಡಲಾಗುತ್ತಿದೆ. ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನುಡಿದರು.

ಸಂಸ್ಥೆಯ ನಿರ್ದೇಶಕರಾದಡಾ|| ಮುನೇಶ್ವರ ಲಾಖಾ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ಓದಿಸುವುದಕ್ಕೆ ಸೀಮಿತವಾಗಿರದೆ ಸಂವಹನ ಕೌಶಲ್ಯ, ವ್ಯವಹಾರಿಕ ಜ್ಞಾನ ಕಲಿಸಲಾಗುತ್ತಿದೆ. ಹೀಗಾಗಿಯೇ ನಮ್ಮ ವಿದ್ಯಾಲಯದ ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು 95 ವಿದ್ಯಾರ್ಥಿಗಳು ಅಗ್ರಶ್ರೇಣಿ ಪಡೆದಿದ್ದಾರೆ.ಚಟುವಟಿಕೆಯ ಮೂಲಕ ಕಲಿಕೆ ಮಕ್ಕಳಲ್ಲಿ ಅದಮ್ಯ ವಿಶ್ವಾಸ, ಜೀವಿಸುವ ಕಲೆ ಬೆಳೆಸಿದೆ. ಹಾಗಾಗಿ ಮಕ್ಕಳು ಸಮಾಜದಲ್ಲಿ ಗೌರವಯುತವಾಗಿ ಹೆಮ್ಮೆಯಿಂದ ಬಾಳಲು ಸಾಧ್ಯವಾಗುತ್ತಿದೆ.

ವಿದ್ಯಾರ್ಥಿಗಳು ತಮ್ಮ ಮುಂದಿನ ಪ್ರವೇಶವನ್ನು ಜ್ಞಾನಸುಧಾ ವಿದ್ಯಾಲಯದಲ್ಲಿಯೇ ಪಡೆದು ಇಲ್ಲಿನಗುಣಮಟ್ಟ ಶಿಕ್ಷಣದ ಲಾಭ ಪಡೆಯಬೇಕೆಂದು ನುಡಿದರು.

ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಚೆನ್ನವೀರ ಪಾಟೀಲ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ, ಜ್ಞಾನಸುಧಾ ವಿದ್ಯಾಲಯವು ಎಂದಿನಂತೆ ನೂರು ಪ್ರತಿಶತ ಫಲಿತಾಂಶ ಗಳಿಸಿಕೊಂಡಿದೆ. ಹಾಗೂ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಮತ್ತು ಪದವಿ (ಕಲೆ, ವಾಣಿಜ್ಯ, ವಿಜ್ಞಾನ) ಕಾಲೇಜುಗಳನ್ನು ನಡೆಸುತ್ತಿದೆ. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳು ಮೂಲಭೂತ ಸೌಕರ್ಯಗಳ ಜೊತೆಗೆಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ. ಆದ್ದರಿಂದತಾವುಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ನುಡಿದರು.

ಅಗ್ರಶ್ರೇಣಿಯಲ್ಲಿತೇರ್ಗಡೆಯಾದ ವಿದ್ಯಾರ್ಥಿಗಳಾದ ಶ್ರೇಯಾಉದಯಕುಮಾರ, ಪ್ರಮೋದ ರಾಜಕುಮಾರ ಬಂಡೆ, ಸಂಜನಾ ಚಂದ್ರಕಾಂತ ಹೊಸದೊಡ್ಡೆ, ವೆಂಕಟೇಶ್ ಗೋವಿಂದರಾವ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡು, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಬೇಕೆಂದರೆ, ಒಂದೂ ದಿನ ತಪ್ಪದೇ ಶಾಲೆಗೆ ಹಾಜರಾಗುವುದು,

ಶಿಕ್ಷಕರು ಮಾಡುವ ಪಾಠವನ್ನು ಆನಂದದಿಂದ ಅನುಭವಿಸುತ್ತಾ ಕಲಿಯುವುದು, ಶಾಲೆಯಲ್ಲಿ ನಡೆಸಲಾಗುವ ಪಠ್ಯೇತರ ಚಟುವಟಿಕೆಗಳನ್ನು ಆಸಕ್ತಿಯಿಂದ ಮಾಡುವುದು ಹಾಗು ಬರವಣಿಗೆ ಕೌಶಲ್ಯಕ್ಕೆ ಹೆಚ್ಚು ಒತ್ತುಕೊಡುವುದು ಇದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಸುನೀತಾ ಸ್ವಾಮಿ, ಉಪಪ್ರಾಚಾರ್ಯರಾದ ಕಲ್ಪನಾ ಮೋದಿ, ಮೇಲ್ವಿಚಾರಕರಾದ ರಜನಿ, ಸಾಯಿಗೀತಾ, ವಸಿಮಾ, ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಉಪನ್ಯಾಸಕಿ ಸುಜಾತಾ ಬೊಮ್ಮಾರೆಡ್ಡಿ, ಶ್ರೀಕಾಂತ ರೆಡ್ಡಿ ಅವರು ಹಾಗು ಎಲ್ಲಾ ಶಿಕ್ಷಕವೃಂದದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.