ಸಿಬಿಎಸ್‌ಇ ಶಾಲೆಯಲ್ಲಿ ನೂತನವಾದ ಕ್ರೀಡಾವಲಯದ ಉದ್ಘಾಟನೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.23: ಪಟ್ಟಣದ ಇಂದು ಸಿಬಿಎಸ್‌ಇ ಶಾಲೆಯಲ್ಲಿ ಮೊಟ್ಟಮೊದಲ ಬಾರಿಗೆ ವಿಭಿನ್ನ ಮತ್ತು ವಿನೂತನವಾದ ಕ್ರೀಡಾವಲಯವನ್ನು ಇಂದು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ ಎಂ ವಾಗೀಶಯ್ಯ  ಶಾಲಾ ಮಕ್ಕಳೊಂದಿಗೆ ಉಧ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದಿನ ಮಕ್ಕಳೆ ನಾಳೆಯ ಭವ್ಯಭಾರತದ ಪ್ರಜೆಗಳು ಇಂತಹ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ಪ್ರಯೋಗಿಕ ಮತ್ತು ದೈಹಿಕ ಚಟುವಟಿಕೆ ಕ್ರೀಡಾ ಶಿಕ್ಷಣವನ್ನು ನೀಡಬೇಕೆಂದು ಮಕ್ಕಳು ಪಠ್ಯಶಿಕ್ಷಣವನ್ನು ಪಡೆಯುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮಕ್ಕಳಿಗೆ ಬಹು ಮುಖ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂದು ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲರಾದ ಚೇತನ್ ಕುಮಾರ್, ಇಂದು ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯರಾದ ಮಹಾಂತೇಶ್ ಜಿ ಎನ್, ವಿದ್ಯಾರ್ಥಿ ಪೋಷಕರ ಮತ್ತು ಸರ್ವ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.