ಸಿಬಿಎಸ್‍ಇಯಲ್ಲಿ ಗುರು ನಾನಕ ದೇವ್ ಪಬ್ಲಿಕ್ ಶಾಲೆ : ವರ್ಷಾ ಜಿಲ್ಲೆಗೆ ಟಾಪರ್

ಬೀದರ:ಮೇ.17:2023-24 ಪ್ರಸಕ್ತ ಸಾಲಿನ ಸಿಬಿಎಸ್‍ಇ ಹತ್ತನೆ ತರಗತಿಯ ಪರೀಕ್ಷೆಯಲ್ಲಿ ಗುರು ನಾನಕ ದೇವ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನೀಯರಾದ ವರ್ಷಾ ಎಸ್. ಶೇಕಡಾ 98 ರಷ್ಟು ಅಂಕಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ವಿದ್ಯಾರ್ಥಿನಿ ವರ್ಷಾ ಎಸ್. ಸಮಾಜ ವಿಜ್ಞಾನದಲ್ಲಿ 100, ಕನ್ನಡ 99, ಗಣಿತ ಶಾಸ್ತ್ರದಲ್ಲಿ 97, ವಿಜ್ಞಾನ 98 ಮತ್ತು ಇಂಗ್ಲೀಷ್‍ನಲ್ಲಿ 94 ಅಂಕ ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಶೈಕ್ಷಣಿಕ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆ ಬರೆದು ಒಟ್ಟು 80 ವಿದ್ಯಾರ್ಥಿಗಳು, 10 ವಿದ್ಯಾರ್ಥಿಗಳು 90% ಅಧಿಕ ಫಲಿತಾಂಶ ಪಡೆದಿದ್ದಾರೆ. 38 ಅಗ್ರಶ್ರೇಣಿ, 30 ಪ್ರಥಮ ಶ್ರೇಣಿ ಮತ್ತು 12 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ನೂರಕ್ಕೆ ನೂರು ಪ್ರತಿಶತ ಫಲಿತಾಂಶ ಬಂದಿದೆ.

ವಿದ್ಯಾರ್ಥಿಗಳಾದ ಸಾಹಿತ್ಯ ಎಸ್. 95.80%, ಅರ್ಪಿತಾ 95%, ಸೈಯದಾ ಸುಬಿಯಾ ಫಾಲಿಮಾ 94%, ಭೂಮಿಕಾ ಎಂ. 93%, ಎಸ್.ವಿಜಯ ಲಕ್ಷ್ಮೀ 93%, ಭಕ್ತಿ ಶಿವಪುತ್ರ 91%, ಗೌರಿ ಬಸವರಾಜ 91%, ಅಮುಲ್ಯ 90.2%, ಸುಯಶ್ 90% ರಷ್ಟು ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಜೊತೆಗೆ ಶಿಕ್ಷಕರ ಸತತ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದಾಗಿದೆ ಎಂದು ಗುರು ನಾನಕ ದೇವ್ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಡಾ|| ರೇಷ್ಮಾ ಕೌರ್ ಅವರು ತಿಳಿಸುತ್ತ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಪ್ರಚಾರ್ಯರಾದ ಶ್ರೀಮತಿ ಶರ್ಲಿ ಶೀಬಾ ಮತ್ತು ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.