ಸಿಪಿಐ ಹಳೆಯ ನಿವೇಶನ ಜಾಗೆ ರಕ್ಷಣೆ ಯಾವಾಗ..?

ಲಿಂಗಸಗೂರು.ನ.೯-ಪಟ್ಟಣದ ಚಿಕ್ಕ ಹನುಮನ ಚೌಕ್‌ನಲ್ಲಿರುವ ಸಿಪಿಐ ಹಳೆಯ ನಿವೇಶನ ಜಾಗೆಯು ಯಾರು ರಕ್ಷಣೆ ಮಾಡದಿರುವುದರಿಂದ ಮೆಲ್ಲನೆ ಒತ್ತುವರಿಯಾಗುತ್ತಿದ್ದು ರಕ್ಷಣೆಯಾವಾಗ ಎನ್ನುವ ಪ್ರಶ್ನೆಗಳು ಪ್ರಾರಂಭವಾಗಿದೆ.
ಪಟ್ಟಣದ ಹೃದಯಭಾಗದ ಚಿಕ್ಕಹನುಮನ ಚೌಕ್ ಬೃಂದಾವನ ಹೋಟೆಲ್ ಹತ್ತಿರದ ಜಾಗೆಯಲ್ಲಿ ಬ್ರಟಿಷರ್ ಆಡಳಿತದಲ್ಲಿ ಅಧಿಕಾರಿಗಳ ನಿವಾಸಕ್ಕಾಗಿ ನಿರ್ಮಿಸಿದ ಮನೆಯಿದ್ದು ಕಾಲಾ ನಂತರದಲ್ಲಿ ಪೊಲೀಸ್ ಇಲಾಖೆಯ ಸಿಪಿಐ ಅಧಿಕಾರಿಯ ನಿವಾಸದ ಮನೆಯಾಗಿ ಪರಿವರ್ತನೆಗೊಂಡತ್ತಿದ್ದು, ಅದರಲ್ಲಿ ಇತ್ತೀಚಿನವರೆಗೂ ಲಿಂಗಸಗೂರು ಠಾಣೆಗೆ ಬಂದ ಸಿಪಿಐ ಅಧಿಕಾರಿಗಳು ವಾಸಮಾಡುತ್ತಿದ್ದರು. ಆದರೆ ಇತ್ತೀಚೆಗೆ ಆ ಐತಿಹಾಸಿಕ ಕಟ್ಟಡವು ಶಿಥಿಲಗೊಂಡಿರುವ ಪ್ರಯುಕ್ತ ಅದನ್ನು ತೆರವುಗೊಳಿಸಲಾಗಿದ್ದು ಸದರಿ ಜಾಗೆಯು ಖಾಲಿಯಾಗಿದ್ದು ಅದನ್ನು ಅತ್ತಲಿತ್ತ ಒತ್ತುವರಿ ಹಾಗೂ ಅದರಲ್ಲಿಯೆ ಸಣ್ಣಡಬ್ಬಾ ಅಂಗಡಿ ನಿಲ್ಲಿಸಲಾಗಿದೆ. ಯಾರು ಗಮನಿಸದಿದ್ದರೆ ಮೆಲ್ಲನೆ ಡಬ್ಬಾ ಅಂಗಡಿ ಪ್ರಾರಂಭವಾಗುತ್ತದೆ. ನಂತರದಲ್ಲಿ ಒತ್ತುವರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಪಟ್ಟಣದಲ್ಲಿ ಇಂತಹ ಒತ್ತುವರಿ ಉದಾಹರಣೆಗಳು ಸಾಕಷ್ಟಿವೆ ಬೆಲೆಬಾಳುವ ಸದರಿ ಜಾಗೆಯನ್ನು ಭೂಗಳ್ಳರು ಒತ್ತುವರಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗಾಗುವ ಮುನ್ನ ಸಂಬಂಧಿಸಿದವರು ಜಾಗೆಯ ಹದ್ದು ಬಸ್ತು ಮಾಡಿ ರಕ್ಷಣೆ ಮಾಡಿದರೆ ಪೊಲೀಸ್ ಇಲಾಖೆಗೂ ಅನುಕೂಲವಾದೀತು ಸರಕಾರಿ ಜಾಗೆಯನ್ನು ಉಳಿಸಿದ ಕೀರ್ತಿಯು ಬಂದೀತು ಕೂಡಲೇ ಸಂಬಂಧಿಸಿದವರು ಜಾಗೆಯ ರಕ್ಷಣೆ ಮಾಡಬಹುದೆ ಎಂಬುದು ನಾಗರೀಕರ ಒತ್ತಾಯವಾಗಿದೆ.
ಹೇಳಿಕೆ: ಸದರಿ ಜಾಗೆಯ ಬಗೆಗೆ ನನ್ನ ಗಮನಕ್ಕೆ ಬಂದಿದ್ದು ನನಗೂ ಸಾಕಷ್ಟು ಕಾಳಜಿ ಇದೆ ಇನ್ನು ಕೆಲವೆ ದಿನಗಳಲ್ಲಿ ಹದ್ದುಬಸ್ತು ಗುರುತಿಸಿ ತಂತಿಬೇಲಿ ಹಾಕಿ ಜಾಗೆಯನ್ನು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗುವೆ ಸದ್ಯ ಅದರಲ್ಲಿರುವ ಡಬ್ಬಾ ಅಂಗಡಿಯನ್ನು ತೆರವುಗೊಳಿಸಲಾಗುವುದು.
ಮಹಾಂತೇಶ ಸಜ್ಜನ್ ಸಿಪಿಐ ಲಿಂಗಸಗೂರು.