ಸಿಪಿಐ ಮುಖಂಡ ಸೆಲ್ವರಾಜ್ ನಿಧನ

ಚೆನ್ನೈ, ಮೇ ೧೩- ತಮಿಳುನಾಡಿನ ನಾಗಪಟ್ಟಣಂ ಸಂಸದ ಮತ್ತು ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಎಂ. ಸೆಲ್ವ್ ರಾಜ್ ಇಂದು ನಿಧನರಾಗಿದ್ದಾರೆ.
ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೆಲ್ವರಾಜ್ ಅವರಿಗೆ ೬೫ ವಯಸ್ಸಾಗಿತ್ತು, ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸೆಲ್ವ ರಾಜ್ ಅವರು ೧೯೫೭ ರಲ್ಲಿ ತಿರುವರೂರು ಜಿಲ್ಲೆಯಲ್ಲಿ ಜನಿಸಿದ್ದರು.
೪ ಬಾರಿ ಸಂಸದರಾಗಿದ್ದ ಸೆಲ್ವ ರಾಜ್ ೧೯೮೯ರ ಲೋಕಸಭಾ ಚುನಾವಣೆಯಲ್ಲಿ ನಾಗಪಟ್ಟಣಂ ಕ್ಷೇತ್ರದಿಂದ ಜಯಗಳಿಸಿದ್ದರು.
ಸೆಲ್ವರಾಜ್ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸಾಲ್ಟಿನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದ ಅವರ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ಬಣ್ಣಿಸಿದ್ದಾರೆ.
ಸೆಲ್ವರಾಜ್ ನಿಧನಕ್ಕೆ ಸಿಪಿಐ ರಾಜ್ಯಕಾರ್ಯದರ್ಶಿ ಆರ್. ಮುತರಸನ್ ಸಂತಾಪ ವ್ಯಕ್ತಪಡಿಸಿದ್ದಾರೆ.