ಸಿಪಿಐ ಪಕ್ಷದ ಸಾಮೂಹಿಕ ಸಂಘಟನೆಗಳ ಬಲಿಷ್ಠತೆಗೆ ಸುಂದರೇಶ ಕರೆ

ಆಳಂದ:ನ.24: ಸಿಪಿಐ ಪಕ್ಷದ ಆಂತರಿಕ ಸಂಘಟನೆ ಅಖಿಲ ಭಾರತ ಕಿಸಾನಸಭಾ, ಮಹಿಳಾ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಕಟ್ಟಡ ಕಾರ್ಮಿಕ ಸಂಘಟನೆಗಳು ಗ್ರಾಮ ಮಟ್ಟದಲ್ಲಿ ಬಲಿಗೋಷ್ಠಗೊಳಿಸಿ ಹೆಚ್ಚು ಅಧ್ಯಯನ ಶಿಬಿರಗಳನ್ನು ನಡೆಸಿ ಜನಪರ ಹೋರಾಟಗಳಿಗೆ ಸಜ್ಜುಗೊಳಿಸಬೇಕು ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಸಾತಿ ಸುಂದರೇಶ್ ಅವರು ಕರೆ ನೀಡಿದರು.

ಪಟ್ಟಣದ ಗುರುಭವನ ಹತ್ತಿರದಲ್ಲಿನ ಸಿಪಿಐ ಪಕ್ಷದ ತಾಲೂಕು ಕಚೇರಿಯಲ್ಲಿ ಕರೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸುಮಾರು 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಮೌಲ್ಯಾಧಾರಿತ ರಾಜಕಾರಣ ಮುಂದುವರೆಸುವ ಸಲುವಾಗಿ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಜಿಲ್ಲೆಯಲ್ಲಿ 2ರಿಂದ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಾಗುತದೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ನೀಡದೇ ಇರುವುದರಿಂದ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಆ ಹಿನ್ನೆಲೆಯಲ್ಲಿ ರಚನೆಯಾಗಿದ್ದ ಚುನಾವಣೋತರ ಜೆಡಿಎಸ್

ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿಯು ಸರ್ಕಾರದ ಭಾಗವಾಗಿದ್ದ ಶಾಸಕರನ್ನು ಖರೀದಿ ಮಾಡಿದಂತಹ ಕುತಂತ್ರ ನೀತಿಯಿಂದಾಗಿ ವಿರೋಧ ಪಕ್ಷಗಳ ಶಾಸಕರ ರಾಜೀನಾಮೆ, ಉಪ ಚುನಾವಣೆಗಳು, ಶಾಸಕರ ರೆಸಾರ್ಟ್ ರಾಜಕೀಯದಂತಹ ಬೆಳವಣಿಗೆಗೆ ರಾಜ್ಯದ ರಾಜಕಾರಣ ಸಾಕ್ಷಿಯಾಗಿತ್ತು. ಇಂತಹ ಸಂವಿಧಾನ ವಿರೋಧಿ ನಡೆಗಳನ್ನು ಖಂಡಿಸಿ ಮೌಲ್ಯಾಧಾರಿತ

ರಾಜಕಾರಣವನ್ನು ಮುಂದುವರೆಸುವ ಉದ್ದೇಶದಿಂದ ಪಕ್ಷವು ಕಣಕ್ಕಿಳಿಯಲಿದೆ ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರವು ತಪ್ಪು ಆರ್ಥಿಕ ನೀತಿಯನ್ನು ಹೊಂದಿದೆ. ಇದರಿಂದ ದೇಶದ ನೆಲ, ಜಲ, ಸಾರಿಗೆ, ಸಾರ್ವಜನಿಕ ಉದ್ಯಮಗಳು ಅದಾನಿ, ಅಂಬಾನಿಯಂತಹ 150ಕ್ಕೂ ಹೆಚ್ಚು ಜನರ ಪಾಲಾಗುತ್ತಿದೆ. ದೇಶದ 50 ಕೋಟಿಗೂ ಹೆಚ್ಚು ಜನರ ಆಸ್ತಿಕೇವಲ ಕೆಲವೇ ಬಂಡವಾಳಶಾಹಿಗಳ ಪಾಲಾಗುತ್ತಿದೆ. ಇಂತಹ ಜನವಿರೋಧಿ ಆರ್ಥಿಕ ನೀತಿಯನ್ನು ತಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಬಲಪಂಥೀಯ, ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸದೇ ಇದ್ದರೆ ದೇಶಕ್ಕೆ ಭವಿಷ್ಯವಿಲ್ಲ. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಾತ್ಯಾತೀತ, ಪ್ರಜಾಪ್ರಭುತ್ವವಾದಿ ಮತ್ತು ಎಡ ಪಕ್ಷಗಳು ಸೇರಿ ರಾಜಕೀಯ ರಂಗ ನಿರ್ಮಿಸಿ ಬಿಜೆಪಿಯನ್ನು ಸೋಲಿಸಬೇಕು ಎಂದು ಅವರು ಕರೆ ನೀಡಿದರು.

ರಾಜ್ಯದಲ್ಲಿ ಸುಮಾರು 50 ಲಕ್ಷ ಕುಟುಂಬಗಳು ವಸತಿ ಹೀನವಾಗಿವೆ. ವಸತಿ ಇಲ್ಲದವರಿಗೆ ವಸತಿ ನಿರ್ಮಿಸಲು ಅಗತ್ಯವಾದ ಭೂಮಿ ಲಭ್ಯತೆಯ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ಹೊಂದಿದೆ. ರಾಜ್ಯ ಸರ್ಕಾರ ವಸತಿಗಾಗಿ ಭೂಮಿ ಕಾಯ್ದಿರಿಸುವ ಬದಲಾಗಿ ಸುಮಾರು 17 ಲಕ್ಷ ಎಕರೆ ಸರ್ಕಾರಿ ಜಮೀನು ತನಗೆ ಬೇಕಾದ ಟ್ರಸ್ಟ್ ಹಾಗೂ ಇನ್ನಿತರ ಸಂಘ, ಸಂಸ್ಥೆಗಳಿಗೆ ಪರಭಾರೆ ಮಾಡಲು ಹೊರಟಿದೆ. ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಬಂಡವಾಳಶಾಹಿ, ಕಾಪೆರ್Çೀರೇಟ್ ಕೈಗಾರಿಕೋದ್ಯಮಿಗಳಿಗೆ ನೀಡಲು ಮುಂದಾಗಿದೆ ಎಂದು ಅವರು ಖಂಡಿಸಿದರು.

ವಸತಿಗಾಗಿ ಅಗತ್ಯ ಭೂಮಿಯನ್ನು ಕಾಯ್ದಿರಿಸಿ ನಿವೇಶನ ರಹಿತರಿಗೆ ಹಂಚಬೇಕು ಎಂದು ಒತ್ತಾಯಿಸಿ ಪಕ್ಷವು ರಾಜ್ಯಾದ್ಯಂತ ಹಂತ, ಹಂತದ ಹೋರಾಟಗಳನ್ನು ರೂಪಿಸಿ ರಾಜ್ಯ ಮಟ್ಟದ ಹೋರಾಟದ ಭಾಗವಾಗಿ 2023ರ ಫೆಬ್ರವರಿ 22ರಂದು ವಿಧಾನಸೌಧ ಚಲೋ ಚಳುವಳಿ ಹಮ್ಮಿಕೊಳ್ಳಲಾಗುತದೆ ಎಂದರು.

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಅಪೌಷ್ಠಿಕತೆ, ವಸತಿ ಶಿಕ್ಷಣ, ಆರೋಗ್ಯ ಮತ್ತು ರಸ್ತೆಯಂತಹ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಇದರೊಂದಿಗೆ ಈ ಭಾಗದ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿದ ಅವರು, 371(ಜೆ)ಅಡಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ, ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿ ಮುಂದಿನ ದಿನಗಳಳ್ಲಿ ಹೋರಾಟಗಳನ್ನು ರೂಪಿಸಬೇಕು ಎಂದರು.

ಮುಖಂಡ ಮಹೇಶಕುಮಾರ್ ರಾಠೋಡ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ್ ಮಾಡಿಯಾಳ್, ಮೌಲಾ ಮುಲ್ಲಾ, ಪ್ರಭುದೇವ ಯಳಸಂಗಿ, ವಿಜಯಲಕ್ಷ್ಮೀ ಯಳಸಂಗಿ, ತಡೋಳಾ ಗ್ರಾಪಂ ಅಧ್ಯಕ್ಷ ಮೈಲಾರಿ ಜೋಗೆ, ಚಂದ್ರಕಾಂತ ಖೋಬ್ರೆ, ಎಚ್. ಎಸ್ ಪತಕೆ, ಕಲ್ಯಾಣಿ ಅವುಟೆ ಸಮುಂತಾದವರು ಉಪಸ್ಥಿತರಿದ್ದರು.