ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿಯಾಗಿ ಆವರಗೆರೆ ಚಂದ್ರು

ದಾವಣಗೆರೆ.ಜೂ.೧೦; ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ನೂತನ ಕಾರ್ಯದರ್ಶಿಯಾಗಿ ಕಾಮ್ರೇಡ್ ಆವರಗೆರೆ ಚಂದ್ರು ಆಯ್ಕೆಯಾಗಿದ್ದಾರೆ ಎಂದು ಸಿಪಿಐ ಹಿರಿಯ ಮುಖಂಡ ಕಾಮ್ರೇಡ್ ಆನಂದ ರಾಜ್ ತಿಳಿಸಿದ್ದಾರೆ.ಇತ್ತೀಚೆಗೆನಡೆದ ಸಿಪಿಐ ಜಿಲ್ಲಾಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ಕಾಮ್ರೇಡ್ ಅವರಗೆರೆ ಚಂದ್ರು ರವರನ್ನು ಆಯ್ಕೆ ಮಾಡಲಾಯಿತು.   ನಗರದ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷದ ನೂತನ ಜಿಲ್ಲಾ ಕಾರ್ಯದರ್ಶಿಯಾದ ಕಾಮ್ರೇಡ್ ಆವರಗೆರೆ ಚಂದ್ರು ಅವರಿಗೆ ಪಕ್ಷದ ಹಿರಿಯ ಮುಖಂಡ ಹಾಗೂ ಜಿಲ್ಲಾ ಸಮಿತಿ ಖಜಾಂಚಿ ಗಳಾದ ಕಾಮ್ರೇಡ್ ಆನಂದರಾಜ್  ಪಕ್ಷದ ಬಾವುಟ ನೀಡುವುದರೊಂದಿಗೆ ಜವಾಬ್ದಾರಿ ವಹಿಸಲಾಯಿತು. ಪಕ್ಷದ ಬಾವುಟ ಸ್ವೀಕರಿಸಿ ಮಾತನಾಡಿದ ನೂತನ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಆವರಗೆರೆ ಚಂದ್ರು ಪಕ್ಷ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಜಾಗರೂಕತೆಯಿಂದ ನಡೆಸುವುದರೊಂದಿಗೆ ಎಲ್ಲರ ಸಹಕಾರ ,ವಿಶ್ವಾಸ ಮತ್ತು ಸಮನ್ವಯ ಸಾಧಿಸಿಕೊಂಡು ಪಕ್ಷವನ್ನು ಮುನ್ನಡೆಸುತ್ತೇನೆ ಎಂದು ತಿಳಿಸಿದರು.  ಸಭೆಯನ್ನುದ್ದೇಶಿಸಿ ಅಧ್ಯಕ್ಷತೆ ವಹಿಸಿದ್ದ ಕಾಮ್ರೇಡ್ ಆನಂದರಾಜ್ ಜಿಲ್ಲಾ ಮಂಡಳಿ ಸಹಕಾರ್ಯದರ್ಶಿ ಕಾಂ.ಹೆಚ್ ಜಿ ಉಮೇಶ್ ಮತ್ತು ಪಕ್ಷದ ಮುಖಂಡರುಗಳಾದ ಕಾಂ. ಪಿ ಷಣ್ಮುಖ ಸ್ವಾಮಿ ,ಕಾಂ. ಐರಣಿ ಚಂದ್ರು ,ಕಾಂ. ಟಿ ಎಸ್ ನಾಗರಾಜ್ , ಕಾಂ. ಪಿ ಲಕ್ಷ್ಮಣ ,ಕಾಂ.ಎನ್ ಹೆಚ್ ರಾಮಣ್ಣ ಮಾತನಾಡಿದರು.  ಕಾಂ.ಕೆಜಿ ಶಿವಮೂರ್ತಿ ಕಾಂ. ಜಿ ಯಲ್ಲಪ್ಪ ಕಾಂ ಸರೋಜಾ ಕಾಂ.ಎನ್ ಟಿ ಬಸವರಾಜ್ , ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಕೊನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಕಾಂ. ಕೆ ಬಾನಪ್ಪ ವಂದಿಸಿದರು.