ಸಿಪಿಐ ಜಗದೇವಪ್ಪ ಪಾಳಾಗೆ ಬೀಳ್ಕೂಡುಗೆ ಮತ್ತು ಸಿಪಿಐ ಸುರೇಶ ಬಡಸಾಗರವರಿಗೆ ಸ್ವಾಗತ

ಅಫಜಲಪುರ:ಜು.24: ಅಫಜಲಪುರ ಪೆÇಲೀಸ್ ಠಾಣೆಯಲ್ಲಿ ಸುಮಾರು 18 ತಿಂಗಳವರಿಗೆ ಸಿ.ಪಿ.ಐ.ಯಾಗಿ ದಕ್ಷ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ತಾಲೂಕಿನ ಜನರ ಮನಸ್ಸು ಗೆದ್ದಿರುವ ಸಿ.ಪಿ.ಐ.ಜಗದೇವಪ್ಪ ಪಾಳಾ ಅವರಾಗಿದ್ದಾರೆ ಎಂದು ಡಿ.ವೈ.ಎಸ್ಪಿ. ರವೀಂದ್ರ ಶಿರೂರ ಹೇಳಿದರು.

ಪಟ್ಟಣದ ಪೆÇಲೀಸ್ ಠಾಣೆಯ ಸಿ.ಪಿ.ಐ.ಜಗದೇವಪ್ಪ ಪಾಳಾ ಅವರು ವರ್ಗಾವಣೆಗೊಂಡ ಹಿನ್ನಲೆ ಠಾಣೆ ವತಿಯಿಂದ ಸಿಬ್ಬಂದಿಗಳು ಆವರಣದಲ್ಲಿ ಹಮ್ಮಿಕೊಂಡ ಬೀಳ್ಕೂಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಗದೇವಪ್ಪ ಪಾಳಾ ಅವರು ಇಲಾಖೆ ಸಿಬ್ಬಂದಿಗಳೊಂದಿಗೆ ಜನ ಸಾಮಾನ್ಯರೊಂದಿಗೆ ಅವರ ನಡೆ ನುಡಿ ಸರಳತೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಅವರಿಬ್ಬರೂ ಸರ್ವಜನಾಂಗದ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ತಾಲೂಕಿನ ವ್ಯಾಪ್ತಿಯಲ್ಲಿ 2022 ರಲ್ಲಿ ಹತ್ತು ಕೊಲೆಗಳಾಗಿದ್ದು ಆದರೆ ಅವುಗಳಲ್ಲಿ ಕೆಲವೊಂದು ಈ ತಾಲೂಕಿನಿದು ಅಲ್ಲ ಆದರೂ ಈ ತಾಲೂಕಿನ ವ್ಯಾಪ್ತಿಯಲ್ಲಿ ಘಟನೆಯಾಗಿದರಿಂದ ಈ ತಾಲೂಕಿಗೆ ಕೆಟ್ಟ ಹೆಸರು ಬಂದಿದೆ ಎಂದ ಅವರು ಈ ತಾಲೂಕಿನ ಜನರು ತುಂಬಾ ಒಳ್ಳೆಯವರು ಆದರೆ ತಾಲೂಕಿನಲ್ಲಿ ಕೆಲವೊಂದು ಗ್ರಾಮಗಳಲ್ಲಿ ತಮ್ಮ ವೈಯಕ್ತಿಕ ಕೆಲವು ಕಾರಣಗಳಿಂದ ಕಲಹಗಳು ಉಂಟಾಗಿ ಕೊಲೆಗಳಾಗಿವೆ ಹೀಗಾಗಿ ತಾಲೂಕಿಗೆ ಭೀಮಾತೀರ ಎಂಬ ಕೆಟ್ಟ ಹಣೆ ಪಟ್ಟಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆದರೆ ಇತ್ತೀಚೆ ಅಪರಾಧ ಚಟುವಟಿಕೆಗಳನ್ನು ಕಡಿವಾಣವನ್ನು ನಮ್ಮ ಪೆÇಲೀಸ್ ಇಲಾಖೆ ಹಾಕಿದೆ ಯಾವುದೇ ಅಪರಾಧ ಚಟುವಟಿಕೆಗಳು ಹೇಳಿ ಕೇಳಿ ಆಗುವುದಿಲ್ಲ ಅವರಲ್ಲಿ ಹೊಂಬತನ ತಿಳವಳಿಕೆ ಕೊರತೆಯಿಂದ ಇಂತಹ ಚಟುವಟಿಕೆಗಳು ನಡೆಯುತ್ತವೆ ಇವೆಲ್ಲವನ್ನು ಕಡಿವಾಣ ಹಾಕಲು ನಮ್ಮ ಇಲಾಖೆ ಸಾದಾ ಸಿದ್ದವಿದೆ ತಾಲೂಕಿನ ಜನತೆ ಇಲಾಖೆಗೆ ಸಹಕಾರ ನೀಡಬೇಕು ಎಂದರು.

ಸಿ.ಪಿ.ಐ ಜಗದೇವಪ್ಪ ಪಾಳಾ ಅವರು ಇಲಾಖೆ ಅಧಿಕಾರಿಗಳಿಂದ ಹಾಗೂ ಸಿಬ್ಬಂದಿಗಳಿಂದ ಬೀಳ್ಕೂಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಈ ಠಾಣೆಯಲ್ಲಿ ನನ್ನ ಹದಿನೆಂಟು ತಿಂಗಳ ಅಧಿಕಾರ ಅವದಿಯಲ್ಲಿ ತಾಲೂಕಿನ ಜನತೆ ಹಾಗೂ ಸಂಘ ಸಂಸ್ಥೆಗಳು, ಪಟ್ಟಣದ ಮುಖಂಡರು ಇಲಾಖೆ ಸಿಬ್ಬಂದಿಗಳು ಪತ್ರಕರ್ತರು ನನಗೆ ಎಲ್ಲಾ ರೀತಿಯಿಂದ ಸಹಕಾರ ನೀಡದ್ದರಿಂದ ನಾನೂ ಪ್ರಾಮಾಣಿಕವಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದು ನನಗೆ ತೃಪ್ತಿ ತಂದಿದೆ ತಾಲೂಕಿನ ಜನರ ಪ್ರೀತಿ ಯಾವುತ್ತು ಮರೆಯಲು ಸಾಧ್ಯವಿಲ್ಲ ಎಂದು ಮನದಾಳದ ಮಾತು ಬಿಚ್ಚಿಟ್ಟಿರು.

ತಾಲೂಕಿನಲ್ಲಿ ಅಕ್ರಮ ಮರಳು ಹಾಗೂ ಮಧ್ಯ ಮಾರಾಟ ,ಇಸ್ಪೇಟ್ ಜೂಜು ಬಹಳಷ್ಟಿದೆ ಇದನ್ನು ಕಡಿವಾಣ ಹಾಕಲು ಸಾಕಷ್ಟು ಪ್ರಯತ್ನಿಸಿದ್ದೇನೆ ಒಂದಿಷ್ಟು ಕಡಿವಾಣ ಹಾಕಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದವರನ್ನು ಬದಲಾವಣೆ ಮಾಡಿದ್ದೇನೆ ನನಗೆ ಸಂತಸ ತಂದಿದೆ

ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಅಕ್ರಮ ಮರಳು ಧಂದೆ ಇದೆ, ಅಕ್ರಮ ಮರಳು ಸಾಗಾಟದಿಂದ ಬದುಕು ಉದ್ದಾರಾಗುವುದಿಲ್ಲ ನಮ್ಮ ಜೀವನ ಹಾಳಾಗುತ್ತದೆ ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಹಾಗೂ ನಿಮ್ಮ ವ್ಯಕ್ತಿತ್ವ ಹಾಳಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿ ಇಂತಹ ಅಕ್ರಮ ಕೆಲಸಗಳನ್ನು ಬಿಟ್ಟು ಉತ್ತಮವಾದ ಕೆಲಸಗಳುವೆ ಕೈ ತುಂಬ ಸಂಬಳ ಬರುತ್ತೆ ಅಂತಹ ಕಾಯಕ ಮಾಡುವದರೊಂದಿಗೆ ಸಮಾಜಕ್ಕೆ ಮಾದರಿಯಾಗಿ ಎಂದು ಕಿವಿ ಮಾತು ಹೇಳಿದರು.

ಮುಖಂಡರಾದ ಲಚ್ಚಪ್ಪ ಜಮಾದಾರ, ಹಾಗೂ ರಾಜು ಆರೇಕಾರ ಸೇರಿದಂತೆ ಅನೇಕರು ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಅಫಜಲಪುರ ಪೆÇಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಸಿಪಿಐ ಸುರೇಶ ಬಡದಾಸರ ಅವರಿಗೆ ಠಾಣೆಯ ವತಿಯಿಂದ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಅಫಜಲಪುರ ಪೆÇಲೀಸ್ ಠಾಣೆ ಪಿ.ಎಸ್.ಐ.ಸುರೇಶ ಚವ್ಹಾಣ, ಗಾಣಗಾಪುರ ಪಿ.ಎಸ್.ಐ.ರಾಜಶೇಖರ ರಾಠೋಡ, ರೇವೂರ ಪೆÇಲೀಸ್ ಠಾಣೆ ಪಿ.ಎಸ್.ಐ.ಗಂಗಮ್ಮಾ ಸೇರಿದಂತೆ ಇಲಾಖೆ ಸಿಬ್ಬಂದಿಗಳು ಹಾಗೂ ಪಟ್ಟಣದ ಜನತೆ ಮತ್ತು ವಿವಿಧ ಸಂಘಟನೆಯ ಮುಖಂಡರು ಇದ್ದರು.