ಸಿಪಿಐ ಕುರಕುಂಟ ಸಿಮೆಂಟ್ ಕಾರ್ಖಾನೆ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಜಾದವ್

ಕಲಬುರಗಿ,ಜು.21:ಇಂದು ಲೋಕಸಭೆಯಲ್ಲಿ 377 ನಿಯಮದಡಿ ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಕುರಕುಂಟಾ ಬಗ್ಗೆ ಡಾ ಉಮೇಶ್ ಜಾಧವ್ ರವರು ಪ್ರಸ್ತಾಪಿಸಿ ಮಾತನಾಡಿದರು.
1998 ರಲ್ಲಿ CCIL Kurkunta ತನ್ನ ಉತ್ಪಾದನೆಯನ್ನು ನಿಲ್ಲಿಸಿತು ಹಾಗೆಯೇ 2006 ರಲ್ಲಿ ಭಾರತ ಸರ್ಕಾರದಿಂದ ಹೂಡಿಕೆ ಹಿಂತೆಗೆದುಕೊಳ್ಳುವಿಕೆಯನ್ನು ಎದುರಿಸಿತು, ಈ ಕಾರ್ಖಾನೆ ಕಾರ್ಯಾಚರಣೆಯನ್ನು ನಿಂತಿರುವ ದಿಂದ ಸುಮಾರು 4-5 ಸಾವಿರಕ್ಕೂ ಹೆಚ್ಚು ಕುಟುಂಬವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು ಏಕೆಂದರೆ ಈ ಸಿಮೆಂಟ್ ಉದ್ಯಮವು ತಮ್ಮ ಆದಾಯದ ಏಕೈಕ ಮೂಲವಾಗಿತ್ತು ಎಂದು ನುಡಿದರು.

2019 ರಿಂದ ನಾನು ಈ ವಿಷಯವನ್ನು ಅನುಸರಿಸಿದ ನಂತರ, ಕೈಗಾರಿಕಾ ಸಚಿವರು 26.11.2019 ರಂದು ಕಾರ್ಯದರ್ಶಿಗಳ ಮಟ್ಟದ ಸಭೆಯನ್ನು ಕರೆದಿದ್ದಾರೆ, ಇದರ ಪರಿಣಾಮವಾಗಿ ಸೆಪ್ಟೆಂಬರ್ 2020 ರಲ್ಲಿ ಮಾಲಿನ್ಯ ಮಂಡಳಿಯು ನಿರಂತರವಾಗಿ 3 ದಿನಗಳ ಕಾಲ ಸಾರ್ವಜನಿಕ ವಿಚಾರಣೆಯನ್ನು ನಡೆಸಿತು. ಈ ಪ್ರದೇಶದಲ್ಲಿ ಸುಣ್ಣದ ಕಲ್ಲಿನ ಗಣಿಗಾರಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಯಾವುದೇ ಆಕ್ಷೇಪಣೆಗಳು ಎದುರಾಗಿಲ್ಲ. ಆದುದರಿಂದ ಈ ಭಾಗದ ಜನರು ತಮ್ಮ ಜೀವನೋಪಾಯಕ್ಕಾಗಿ ಕನಿಷ್ಠ ಏನಾದರೂ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂಬ ಭರವಸೆಯ ಕಿರಣವನ್ನು ಕಂಡುಕೊಂಡಿದ್ದಾರೆ.

ಈ ಪ್ರದೇಶ ಸುಣ್ಣದಕಲ್ಲಿನ ಲಭ್ಯತೆ ಬಗ್ಗೆ ವಿವರಿಸುತ್ತ ಹೇಳಿದ್ದು ಈ ಭಾಗದಲ್ಲಿ 2 ಮಿಲಿಯನ್ ಟನ್ ಸಾಮರ್ಥ್ಯದ ಸಿಮೆಂಟ್ ಕಾರ್ಖಾನೆ ಪ್ರಾರಂಭವಾದರೂ ಕೂಡ ಸುಮಾರು ಇದು 100 ವರ್ಷಗಳಿಗಿಂತ ಹೆಚ್ಚು ಕಾಲ ಇಲ್ಲಿ ಸುಣ್ಣದಕಲ್ಲು ದೊರೆಯುತ್ತದೆ ಎಂದರು ನುಡಿದರು*

ಕೇಂದ್ರ ಸರ್ಕಾರ ಪ್ರಿಂಟರ್ಸ್ ಪ್ರಕ್ರಿಯೆ ಮಂಜೂರಾತಿ ನೀಡಿದಲ್ಲಿ ಈ ಭಾಗದ ಜನರ ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಕಾಣಬಹುದೆಂದು ವಿನಂತಿಸಿದರು. ಕ್ಲಿಂಕರ್ಸ್ ಪ್ರಕ್ರಿಯೆ ಶುರುವಾದುದಲ್ಲಿ ಸುಮಾರು 2000 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಆದ್ದರಿಂದ ಕ್ಲಿಂಕರ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು CCIL ಕುರ್ಕುಂಟಾದ ಹೂಡಿಕೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲು ವಿನಂತಿಸಿದರು.