ಸಿಪಿಐ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ

ದಾವಣಗೆರೆ.ಏ.೨೦; ದಾವಣಗೆರೆ: ಸಂವಿಧಾನ ಸುಟ್ಟುಹಾಕಿದವರೇ ಈಗ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸುತ್ತಿರುವುದು ವಿಪರ್ಯಾಸವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ.ರಾಮಚಂದ್ರಪ್ಪ ತಿಳಿಸಿದರು.ಇಲ್ಲಿನ ಸಿಪಿಐ ಪಕ್ಷದ ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 130ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಸಂವಿಧಾನ ಸುಟ್ಟು ಹಾಕಿದ ಮನುವಾದಿಗಳು ಹಾಗೂ ಸಂವಿಧಾನ ಬದಲಿಸಲಿಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದೇವೆ ಎಂದವರು ಈಗ ಅಂಬೇಡ್ಕರ್ ಜಯಂತಿ ಆಚರಿಸುತ್ತಿರುವುದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎಂದರು.ಹಿಂದುತ್ವದ ಆಧಾರದಲ್ಲಿ ಸಂವಿಧಾನ ತರುತ್ತೇವೆ ಎಂದವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಭಾಷಣ ಮಾಡುತ್ತಾ ನಾಟಕೀಯವಾದ ಜನ್ಮದಿನ ಆಚರಿಸುತ್ತಿದ್ದಾರೆ ಎಂದ ಅವರು, ಅಂಬೇಡ್ಕರ್ ಬಾಲ್ಯದಲ್ಲಿಯೇ ಹಲವಾರು ಸವಾಲು ಎದುರಿಸಿ ಶಿಕ್ಷಣ ಪಡೆದು, ತಮ್ಮ ಇಡೀ ಬದುಕನ್ನು ದೇಶದ ಜನರಿಗಾಗಿ ಮೀಸಲಿಟ್ಟ ಮಹಾನ್ ನಾಯಕ ಎಂದು ಬಣ್ಣಿಸಿದರು.ಅಂಬೇಡ್ಕರ್ ಅವರುಯ ತಮಗಾದ ಹಿಂಸೆ, ದಬ್ಬಾಳಿಕೆ, ದೌರ್ಜನ್ಯ ಸಹಿಸಿಕೊಂಡು ಅರ್ಥಶಾಸ್ತç, ರಾಜನೀತಿ ಸೇರಿದಂತೆ ಹತ್ತಾರು ವಿಷಯಗಳಲ್ಲಿ ಪದವಿ ಪಡೆದು ಡಾಕ್ಟರೇಟ್ ಮಾಡಿದವರು. ಕಾರ್ಮಿಕಸಚಿವರಾಗಿ, ಕಾನೂನು ಸಚಿವರಾಗಿ ಸಂವಿಧಾನ ರಚಿಸಿದವರು. ಇಂತಹ ಅಂಬೇಡ್ಕರ್‌ಗೆಅಂದಿನ ಸರ್ಕಾರ ಅನಿವಾರ್ಯವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಆದರೆಸಮಾಜವಾದಿ, ಸಮತಾವಾದಿ ಸಮಾಜ ನಿರ್ಮಾಣವಾಗಬೇಕೆಂಬ ಅಂಬೇಡ್ಕರ್ ಕನಸುಈವರೆಗೂ ನನಸಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಆನಂದರಾಜ್, ಪಕ್ಷದ ಮುಖಂಡರಾದ ಆವರಗೆರೆ ಚಂದ್ರು, ರಾಘವೇಂದ್ರ ನಾಯರಿ, ಡಿ.ಎಸ್.ನಾಗರಾಜ್, ಎಂ.ಬಿ.ಶಾರದಮ್ಮ, ರುದ್ರಮ್ಮ, ಸರೋಜಮ್ಮ, ವಿಶಾಲಕ್ಷಮ್ಮ ಮತ್ತಿತರರು ಉಪಸ್ಥಿತರಿದ್ದರು.