ಸಿಪಿಐ(ಎಂ) ಸಭೆಯಲ್ಲಿ ಪ್ರಣಾಳಿಕೆ ಬಿಡುಗಡೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.28 ನಗರದ ಭಾರತ ಕಮುನಿಷ್ಠ ಪಕ್ಷ (ಮಾರ್ಕ್ಸವಾದಿ) ಪಕ್ಷದ ಕಚೇರಿಯಲ್ಲಿ 28 ಏಪ್ರಿಲ್ 2024 ಭಾನುವಾರ ರಾಜಕೀಯ ಸಮಾವೇಶ ನಡೆಯಿತು,
ಸಭೆಯಲ್ಲಿ ಪಕ್ಷದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ಜಿಲ್ಲಾಸಮಿತಿ ಮುಖಂಡ ವಿಎಸ್. ಶಿವಶಂಕರ್ ಮಾತನಾಡಿ, ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು  ಹಾಗೂ ಸಂವಿಧಾನ ರಕ್ಷಿಸಲು ಬಿಜೆಪಿಯನ್ನು ಸೋಲಿಸಬೇಕಿದೆ. ಕೇಂದ್ರ ಸರಕಾರ ಜನರ ಸಮಸ್ಯೆಯನ್ನು ಕಡೆಗೆಣಿಸಿ ಜಾತಿ ಮತ್ತು ಧಾರ್ಮಿಕ ದೊಂಬಿಗಳನ್ನು ನಡೆಸುತ್ತಿದೆ. ದೇಶದ ಸೌಹಾರ್ದ ಪರಂಪರೆಗೆ ದಕ್ಕೆ ತಂದಿದೆ. ಬೆಲೆ ಏರುಸಿ ಬಡತನವನ್ನು ಹೆಚ್ಚಿಸಿದೆಯಲ್ಲದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಹಸಿವಿನ ಸಾವುಗಳು ಹೆಚ್ಚಾಗಿವೆ. ಇಂಥಹ ಜನವಿರೋಧಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಇಂಡಿಯಾ ಒಕ್ಕೂಟವನ್ನು ಬೆಂಬಲಿಸಬೇಕು ಎಂದರು.
ಸಮಾವೇಶದ ಅದ್ಯಕ್ಷತೆ ವಹಿಸಿದ್ದ ಪಕ್ಷದ ತಾಲೂಕ ಕಾರ್ಯದರ್ಶಿ ಜೆ. ಚಂದ್ರಕುಮಾರಿ ಮಾತನಾಡಿ, ಹೋರಾಟದ ಹಕ್ಕಿನಮೇಲೆ ದಾಳುಮಾಡುವ ಬಿಜೆಪಿ ಕೇಂದ್ರ ಸರಕಾರದಡಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದೂ ಕೋಮುವಾಧ ಹಿನ್ನೆಯಲ್ಲಿ ಮಹೆಳೆಯ ಸಾವನ್ನೂ ವಿಜೃಂಬಿಸಿ ಸತ್ತ ಹೆಣದ ಮೇಲೆ ಬಿಜೆಪಿ ರಾಜಕಾರಣ ನಡೆಯಿತ್ತಿದೆ. ಇಂಥಹ ಜನವಿರೋಧಿ, ಮಹಿಳೆ, ರೈತ,ಕಾರ್ಮಿಕ ಒಟ್ಟಾರೆ
 ಎಂದರು. ನಂತರ ತಾಲೂಕು ಸಮಿತಿ ಸದಸ್ಯ ಪಿಆರ್.ವೆಂಕಟೇಶ್ ಮಾತನಾಡಿ, ಕೋಮುವಾದಿ ಹಾಗೂ ಕಾರ್ಪರೇಟ್ ಹಿತಾಸಕ್ತಿಯ ಪ್ರತಿನಿಧಿಯಾಗಿರು  ಬಿಜೆಪಿ ಯನ್ನು ಅಧಿಕಾರದಿಂದ ಕಿತ್ತೊಗೆಯದೆ ಜನರಿಗೆ ಮತ್ತು ದೇಶಕ್ಕೆ ಉಳಿಗಾಲವಿಲ್ಲ. ಎಂದರು.
ಜಿಲ್ಲಾ ಕಾರ್ಯದರ್ಶಿ ಜೆ.ಸತ್ಯಬಾಬು ರಾಜಕೀಯ ಪ್ರಣಾಳಿಕೆಯ ಪ್ರಮುಖ ಅಂಶಗಳನ್ನು ತಿಳಿಸಿದರು.
ಯು. ಯರ್ರಿಸ್ವಾಮಿ ಸ್ವಾಗತಿಸಿದರೆ, ರಾಣಿ ಎಲಿಜಬತ್ ವಂದಿಸಿದರು. ಸಮಾವೇಶದಲ್ಲಿ ಪಕ್ಷದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.