ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿಯಾಗಿ ಕೆ.ನೀಲಾ ಆಯ್ಕೆ

ಕಲಬುರಗಿ,ನ.28-ನಗರದಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ 23ನೇ ಜಿಲ್ಲಾ ಸಮ್ಮೇಳನದಲ್ಲಿ 18 ಜನ ಸದಸ್ಯರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಿತು. ಕೆ. ನೀಲಾ ಅವರನ್ನು ಜಿಲ್ಲಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಸಮಿತಿ ಸದಸ್ಯರನ್ನಾಗಿ ಶರಣಬಸಪ್ಪ ಮಮಶೆಟ್ಟಿ, ಶಾಂತಾ ಘಂಟೆ, ಗೌರಮ್ಮ ಪಾಟಿಲ, ಭೀಮಶೆಟ್ಟಿ ಯಂಪಳ್ಳಿ, ಶ್ರೀಮಂತ ಬಿರಾದಾರ, ಪಾಂಡುರಂಗ ಮಾವಿನಕರ್, ಮೇಘರಾಜ ಕಠಾರೆ, ನಾಗಯ್ಯ ಸ್ವಾಮಿ, ಶಿವಶರಣಪ್ಪ ಧನ್ನೂರೆ, ಎಂ.ಬಿ.ಸಜ್ಜನ, ರೇವಣಸಿದ್ದಪ್ಪ ಕಲಬುರಗಿ, ಸುಭಾಷ ಜೇವರ್ಗಿ, ಸುಧಾಮ ಧನ್ನಿ, ಶೇಖಮ್ಮ ಕುರಿ, ಜಾವೇದ್ ಹುಸೇನ್, ಪ್ರದೀಪ ತಿರ್ಲಾಪುರ, ಶಿವಾನಂದ ಕವಲಗಾ ಅವರನ್ನು ಆಯ್ಕೆ ಮಾಡಲಾಯಿತು.ಅಲ್ಲದೆ ಸಮ್ಮೇಳನದಲ್ಲಿ ಈ ಕೆಳಕಂಡ ನಿರ್ಣಯಗಳನ್ನು ಅಂಗಿಕರಿಸಲಾಯಿತು.
ಹೊಸ ಶಿಕ್ಷಣ ನೀತಿಯನ್ನು ಸರಕಾರವು ಕೈ ಬಿಡಬೇಕು. ಮತ್ತು ಶಿಕ್ಷಣದ ಕೇಸರೀಕರಣದಿಂದ ದೇಶಕ್ಕೆ ಅಪಾಯವಿದ್ದು ಕೂಡಲೇ ಎನ್ ಇ ಪಿ ಜಾರಿ ಕೈಬಿಡಲು ಆಗ್ರಹಿಸಲಾಯಿತು. ಕೋಮುವಾದ ಫಾಸಿವಾದವನ್ನು ತಡೆಗಟ್ಟಲು ಮತ್ತು ಸಂವಿಧಾನ ಸಂರಕ್ಷಿಸಿ ದೇಶದ ಸೌಹಾರ್ದ ಪರಂಪರೆಯನ್ನು ಉಳಿಸಲು ಪಕ್ಷ ಶ್ರಮಿಸುವುದಾಗಿ ತೀರ್ಮಾನಿಸಿತು.ನೀರಿನ ಖಾಸಗೀಕರಣ ತಡೆಗಟ್ಟಿ ಜನತೆಗೆ ಕುಡಿಯುವ ನೀರು ಉಚಿತವಾಗಿ ದೊರೆಯಲು ಸಾಧ್ಯವಾಗಬೇಕೆಂದು ನಿರ್ಣಯಿಸಲಾಯಿತು.ಜಾನುವಾರು ಹತ್ಯಾ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಆಗ್ರಹಿಸಲಾಯಿತು
ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದನ್ನು ರದ್ದುಗೊಳಿಸಬೇಕು, ಎಸ್ಸೆನ್ಸಿಯಲ್ ಕಮಾಡಿಟಿ ಎಕ್ಟ್ ತಿದ್ದುಪಡಿ ರದ್ದುಪಡಿಸಬೇಕು, ದೇವದಾಸಿ ಮಹಿಳೆಯರು ಸಮಗ್ರ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳು ಸರಕಾರಕ್ಕೆ ಆಗ್ರಹಿಸಲಾಯಿತು. ದೇವದಾಸಿ ಮಹಿಳೆಯರಿಗೆ ಉಳುಮೆಯೋಗ್ಯ ಐದು ಎಕರೆ ಭೂಮಿಯನ್ನು ವಿತರಿಸಿ ಉದ್ಯೋಗ ಖಾತ್ರಿ ಕಾಯ್ದೆಯಡಿ ಕಾಮಗಾರಿಯಲ್ಲಿ 365 ದಿನಗಳಲ್ಲಿ ಅವಶ್ಯಕತೆಗನುಸರಿಸಿ ಕೇಳಿದಷ್ಟು ಕೆಲಸ ಒದಗಿಸಲು,ದಲಿತರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು,ಉದ್ಯೋಗ ಖಾತ್ರಿ ಕಾಯ್ದೆಯನ್ನು ನಗರಕ್ಕೂ ವಿಸ್ತರಿಸಿ ಉದ್ಯೋಗ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಜಿಲ್ಲೆಯ ಸಮಗ್ರ ಅಭಿವೃಧ್ಧಿಗಾಗಿ ಜನತೆಯ ಚಳುವಳಿಯನ್ನು ಬಲಪಡಿಲು ಸಮ್ಮೇಳನವು ತೀರ್ಮಾನ ಮಾಡಿತು.
ಪಕ್ಷದ ಕೇಂದ್ರ ಸಮಿತಿಯ ಪಾಲಿಟ್ ಬ್ಯೂರೊ ಸದಸ್ಯರಾದ ಹಾಗೂ ಮಾಜಿ ಸಚಿವರಾದ ಕಾಮ್ರೇಡ್ ಎಂ ಎ ಬೇಬಿಯವರು ಸಮಾರೋಪ ಸಮಾರಂಭದಲ್ಲಿ ಮಾತನಾಡಿ ‘ಪಕ್ಷವು ದುಡಿಯುವ ವರ್ಗದ ಧ್ವನಿಯಾಗಿ ಮತ್ತು ಬಹುಸಾಂಸ್ಕøತಿಕ ಪರಂಪರೆಯನ್ನು ಗಟ್ಟಿಗೊಳಿಸುತ ಮುನ್ನಡೆಯಬೇಕಿದೆ.’ ಎಂದು ಹೇಳಿದರು.