ಸಿಪಿಐಎಂ ಅಭ್ಯರ್ಥಿ ಮೇಲೆ ಕೊಲೆ ಯತ್ನ ಖಂಡಿಸಿ ಪ್ರತಿಭಟನೆ

ರಾಯಚೂರು, ಮೇ.೯- ಸೋಲಿನ ಭೀತಿಯಿಂದ ಬಾಗೆಪಲ್ಲಿ ಕ್ಷೇತ್ರದ ಸಿ.ಪಿ.ಐ.ಎಂ. ಅಭ್ಯರ್ಥಿಯಾದ ಡಾ.ಅನೀಲ್ ಕುಮಾರ ಇವರನ್ನು ಅಪಹರಣ ಮತ್ತು ಕೊಲೆ ಮಾಡಲು ಯತ್ನಿಸಿದ ಬಿಜೆಪಿಯ ಗೂಂಡ ನೀತಿಯನ್ನು ಖಂಡಿಸಿ ಸಿ.ಪಿ.ಐ.ಎಂ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬಾಗೆಪಲ್ಲಿ ವಿಧಾನಸಭಾ ಕ್ಷೇತ್ರದ ಸಿ.ಪಿ.ಐ.ಎಂ. ಅಭ್ಯರ್ಥಿ ಡಾ.ಅನೀಲ್ ಕುಮಾರ ಇವರ ಮನೆಯ ಮೇಲೆ ಬಿಜೆಪಿಯ ಗೂಂಡಾಗಳು ಸಿ.ಪಿ.ಐ.ಎಂ. ಅಭ್ಯರ್ಥಿಯ ಬಾಡಿಗೆ ಮನೆಯ ಮೇಲೆ ೩೦ ಜನ ಬಿಜೆಪಿಯ ಗೂಂಡಾಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಲು ಮುಂದಾಗಿದ್ದು ಖಂಡನೀಯ.
ಕೂಡಲೇ ರೂವಾರಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸೋಲುವ ಭೀತಿಯಿಂದ ಹತಾಶೆಗೊಂಡು ಬಿಜೆಪಿಯು ಇಂತಹ ದೃಷ್ಟ ಸಂಚಿಗೆ ಕ್ರಮ ವಹಿಸುತ್ತಿರುವುದು ಖಂಡನೀಯವಾಗಿದೆ.
ಚುನಾವಣೆ ಆಯೋಗ, ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಗೂಂಡದಾಳಿಯ ಸಂಚನ್ನು ಬೇದಿಸಲು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸಿ.ಪಿ.ಐ.ಎಂ. ಅಭ್ಯರ್ಥಿ ಹಾಗೂ ಅವರ ಕುಟುಂಬದ ಸದಸ್ಯರಿಗೆ, ರಕ್ಷಣೆಗೆ ಅಗತ್ಯ ಕ್ರಮ ವಹಿಸಬೇಕು.
ರಾಜ್ಯ ಚುನಾವಣೆ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯುವಂತೆ ಅಗತ್ಯ ಬಿಗಿ ಬಂದೋಬಸ್‌ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ. ಜಿ.ವೀರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.