ಸಿಪಿಎಂ ಪಕ್ಷದಿಂದ ರಾಜಕೀಯ ಪ್ರಚಾರಾಂದೋಲನ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ,22 ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳನ್ನು ವಿರೋಧಿಸಿ.ಹಾಗೂ ಹಕ್ಕುಗಳಿಗಾಗಿ ರಾಜ್ಯ ಸಿಪಿಎಂ ಪಕ್ಷದ ರಾಜ್ಯ ಕರೆಯ ಮೇರೆಗೆ ತಾಲೂಕು ಸಮಿತಿಯಿಂದ ರಾಜಕೀಯ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಯಿತು.
 ಪಟ್ಟಣದ ಕೃಷಿಕ ಸಮಾಜದ ಭವನದಲ್ಲಿ ಬುಧವಾರ  ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡವರ ವಿರೋಧಿ ಸರ್ಕಾರಗಳಾಗಿದ್ದು. ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಇದೇ ತಿಂಗಳು 30 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರ ಯಶಸ್ವಿಗೆ ಡಿ.21 ರಿಂದ 29ರ ವರೆಗೆ ರಾಜಕೀಯ ಪ್ರಚಾರಾಂದೋಲನ ರಾಜಕೀಯ ಸಭೆ ಕರೆಯಲಾಗಿದೆ ಎಂದರು  
 ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ .ಬಿ.ಮಾಳಮ್ಮ. ಅದ್ಯಕ್ಷತೆ ವಹಿಸಿದ್ದರು.ಎಸ್. ಜಗನ್ನಾಥ. ಕೆ.ಗಾಳೆಪ್ಪ ಎಂ.ಆನಂದ್.ಕೆ.ಅಂಜೀನಮ್ಮ.ಇದ್ದರು. ಬಿ.ಜ್ಯೋತಿ.ಸ್ವಾಗತ ಮಾಡಿದರು ಎಂ.ಆನಂದ್. ವಂದನಾರ್ಪಣೆ ಮಾಡಿದರು. ಶಾಖೆಗಳ ಸದಸ್ಯರು ಹಾಗೂ ಸಂಘಟನೆಗಳ ಮುಖಂಡರು ಭಾಗವಾಹಿದ್ದರು .

Attachments area