ಸಿಪಿಆರ್ ನಿಂದ ಹೃದಯಾಘಾತ ತಡೆಯುವ ಪ್ರಾತ್ಯಕ್ಷಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.01: ವೈದ್ಯ  ದಿನಾಚರಣೆ  ಅಂಗವಾಗಿ ಕಾರ್ಡಿಯೋ ಪಲ್ಮಾನರಿ ರೆಸೂಸೈಟೇಷನ್  ನಿಂದ ಹೃದಯಘಾತ ಆದವರನ್ನು  ಹೇಗೆ  ಬದುಕಿಸಬಹುದು ಎಂಬ ಪ್ರಾತ್ಯಕ್ಷಿತೆಯನ್ನು ನಗರದ ವೈದ್ಯ ಡಾ. ಬಿ. ಕೆ. ಸುಂದರ್ ಇಂದು ನಗರದ ಸಾಂಸ್ಕೃತಿಕ‌ ಸಮುಚ್ಚಯದಲ್ಲಿ ನಡೆಸಿಕೊಟ್ಟರು.
ಸಮುಚ್ಚಯದ ವಾಯು  ವಿಹಾರಿಗಳ ತಂಡ ಇದನ್ನು  ಆಯೋಜಿಸಿದ್ದರು.
ಚಿಕಿತ್ಸಾ ವಿಧಾನ ತೋರಿಸಿ   ಮಾತನಾಡಿದ ಡಾ.  ಸುಂದರ್ ಅವರು ಹೃಧಯಘಾತ ಹಾಗೂ  ಹೃದಯ ಸಂಬಂಧಿ ಕಾಯಿಲೆಗಳು  ಇತ್ತೀಚಿನ ದಿನಗಳಲ್ಲಿ ಹೆಚ್ಚಳ ವಾಗುತ್ತಿದ್ದು‌ ಅದಕ್ಕೆ ನಿರ್ಲಕ್ಷ, ಆಹಾರ ಪದ್ದತಿ, ದೈಹಿಕ ಚಟುವಟಿಕೆಗಳು ಇಲ್ಲದಿರುವುದು   ಪ್ರಮುಖ ಕಾರಣಗಳಾಗಿವೆ.
“ಸರ್ವೇಸಾಮಾನ್ಯವಾಗಿ  ಬಹುತೇಕರು  ಎದೆಯಲ್ಲಿ ನೋವ್ವು ಕಾಣಿಸಿಕೊಂಡಾಗ ವೈದ್ಯರ ಸಲಹೆ ಪಡೆಯದೆ  ನಿರ್ಲಕ್ಷಿಸುತ್ತಾರೆ. ಅದೇ  ರೀತಿ ದೇಹ ಕೊಟ್ಟ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದೇ ಹೃಧಯಘಾತ ದಿಂದ ಸಾವಾಗಲೂ ಪ್ರಮುಖ  ಕಾರಣಗಳಾಗಿವೆ” ಎಂದು  ತಿಳಿಸಿದರು.
“ಒಂದು ವರದಿಯ ಪ್ರಕಾರ ಶೇಕಡಾ 60 ರಿಂದ 70  ಹೃದಯಘಾತ ಆದವರು  ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ   ಸಾವನ್ನಪ್ಪುತ್ತಾರೆ. ಸಾಮಾನ್ಯ  ಜನರು ಸಿ ಪಿ ಆರ್ ಪದ್ದತಿ ತಿಳಿದುಕೊಂಡರೆ ಸಾಕಷ್ಟು ಜೀವಗಳನ್ನು  ಉಳಿಸಬಹುದು  ಎಂದು  ತಿಳಿಸಿದರು.
ಮತ್ತೊಬ್ಬ ಹಿರಿಯ ವೈದ್ಯ ಹಾಗೂ ಉದ್ಯಮಿ ಡಾ. ರಮೇಶಗೋಪಾಲ್ ಅವರು  ಸರಿಯಾದ ಆಹಾರ ಪದ್ದತಿ ವ್ಯಾಯಾಮವನ್ನು  ಮಾಡುತ್ತಿದ್ದರೆ  ಹೃಧಯಘಾತ ತಡೆಯಬಹುದೆಂದರು.
ಹಿರಿಯ  ವೈದ್ಯ ಡಾ. ಎಸ್. ವಿ ಜೈನ, ಡಾ ವಿದ್ಯಾಧರ್ ಕಿನ್ನಾಳ್ ಅವರಲ್ಲದೆ  ಸುಬ್ಬರಾವ್, ವೆಂಕಟ ರೆಡ್ಡಿ,  ವೇಣು, ಶಿವಾಜಿರಾವ್  ಮೊದಲಾದವರು ಉಪಸ್ಥಿತರಿದ್ದರು.