ಸಿನಿಮಾ ಸಾಧಕರಿಗೆ ಸನ್ಮಾನ

ಕನ್ನಡ ಚಿತ್ರರಂಗದಲ್ಲಿ ತನ್ನ ಪ್ರತಿಭೆ ತೋರಿಸಬೇಕು ಎನ್ನುವವರಿಗೆ ತರಬೇತಿ ಜೊತೆ  ಸೂಕ್ತ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳು ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿವೆ.

ಅವುಗಳಲ್ಲಿ ಫ್ಲೆಮಿಂಗೋ ಸೆಲಬ್ರಟೀಸ್ ಸಂಸ್ಥೆ ಕೂಡ ಒಂದು. ಕಳೆದ ಹತ್ತು ವರ್ಷಗಳಿಂದ ಸ್ಯಾಂಡಲ್‍ವುಡ್ ಗೆ  ನೂರಾರು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿರುವ ಸಿನಿಮಾ ಸಾಧಕರನ್ನು ಗೌರವಿಸಿತು.

ಸಂಸ್ಥೆ ದವನ್ ಸೋಹಾ ನಡೆಸಿಕೊಂಡು ಬರುತ್ತಿದ್ದು ಸದ್ಯ ಹಿರಿಯನಟಿ ಭವ್ಯ ಸಂಸ್ಥೆಯ ಪ್ರಿನ್ಸಿಪಾಲ್ ಆಗಿದ್ದಾರೆ, ದಶಕದ ಸಂಭ್ರಮ ಹಾಗೂ ಚಿತ್ರರಂಗದಲ್ಲಿ ತಮ್ಮದೇ ಆದಸೇವೆ ಸಲ್ಲಿಸುತ್ತ ಬಂದಿರುವ  ಹಲವು ಕಲಾವಿದರನ್ನು ಗೌರವಿಸಲಾಯಿತು.

ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್,ಮಮತಾ ದೇವರಾಜ್ ಮತ್ತಿತರರು ಕಲಾವಿದರಾದ ವಿಜಯಕಾಶಿ,ವೈಜಯಂತಿಕಾಶಿ, ಸಿಹಿಕಹಿ ಚಂದ್ರು,ಗೀತಾ ದಂಪತಿ, ಬಿರಾದಾರ್  , ಕಾಮಿನಿಧರ್, ಶಿವಧ್ವಜ್, ಭವ್ಯಶ್ರೀ ರೈ, ಛಾಯಾಗ್ರಾಹಕರಾದ ಆರ್. ಮನೋಹರ್- ಮನು, ಮೋಕ್ಷೇಂದ್ರ ಅಲ್ಲದೆ ಪತ್ರಕರ್ತರಾದ  ಲಕ್ಷ್ಮಿನಾರಾಯಣ, ಶ್ರೀಧರ್, ಸೇರಿದಂತೆ ಹಲವರನ್ನು ಸನ್ಮಾಸಲಾಯಿತು. ಫ್ಯಾಷನ್ ಶೋ, ಹಾಡು, ನೃತ್ಯ ಕಾರ್ಯಕ್ರಮಗಳು ರಂಜಿಸಿದವು. ಸಿಬ್ಬಂಧಿಗಳಾದ ಹಿರಿಯ ನಟಿ ಪದ್ಮಾ ವಾಸಂತಿ ಸೇರಿದಂತೆ ದೊಡ್ಡ ದಂಡೇ ಉಪಸ್ಥಿತಿತರಿದ್ದರು