ಸಿನಿಮಾ ಶೈಲಿಯಲ್ಲಿ ಜೀಪ್ ನುಗ್ಗಿಸಿ ವೈದ್ಯನ ಬಂಧನ

ರಿಷಿಕೇಶ.ಮೇ ೨೪- ಆಸ್ಪತ್ರೆಗೆ ಜೀಪ್ ನುಗ್ಗಿಸಿ ಆರೋಪಿ ಹಿರಿಯ ವೈದ್ಯನನ್ನು ಸಿನಿಮಾ ಶೈಲಿಯಲ್ಲಿ ಬಂಧಿಸಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ರಿಷಿಕೇಶದ ಏಮ್ಸ್‌ನ ಹಿರಿಯ ವೈದ್ಯಕೀಯ ಸಿಬ್ಬಂದಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಿರಿಯ ವೈದ್ಯ
ಪೊಲೀಸರಿಗೆ ದೂರು ನೀಡಿದ್ದರು. ಎಫ್‌ಐಆರ್ ಕೂಡ ದಾಖಲಾಗಿತ್ತು.
ಲೈಂಗಿಕ ಕಿರುಕುಳ ಘಟನೆ ನಂತರ ಆರೋಪಿ ವೈದ್ಯ ಅನಾರೋಗ್ಯದ ನೆಪ ಹೇಳಿ ಇದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ.
ಆರೋಪಿಯನ್ನು ಬಂಧಿಸಲು ಬಂದ ಪೊಲೀಸರಿಗೆ ಆಸ್ಪತ್ರೆ ಸಮೀಪ ಬಿಗುವಿನ ವಾತಾವರಣವಿರುವ ಬಗ್ಗೆ ತಿಳಿಯಿತು.
ಆಸ್ಪತ್ರೆಯ ವಾರ್ಡ್‌ನಿಂದ ಬಂಧಿಸಿ ಕರೆತರುವಾಗ ಹಲ್ಲೆಗಳು ನಡೆಯುವ ಸಾಧ್ಯತೆ ಹೆಚ್ಚಿತ್ತು.
ಹೀಗಾಗಿ ಪೊಲೀಸರು ನೆಲ ಮಹಡಿಯಲ್ಲಿರುವ ತುರ್ತು ಚಿಕಿತ್ಸಾ ಘಟಕದ ಮೂಲಕ ಜೀಪ್ ನುಗ್ಗಿಸಿದ್ದಾರೆ. ಅಲ್ಲಿನ ದಾರಿ ಮೂಲಕ
ನೇರವಾಗಿ ೪ನೇ ಮಹಡಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ವೈದ್ಯ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಹಿರಿಯ ವೈದ್ಯಕೀಯ ಸಿಬ್ಬಂದಿ, ಕಿರಿಯ ಮಹಿಳಾ ವೈದ್ಯರ ಲೈಂಗಿಕ ಕಿರುಕುಳ ನೀಡಿದ್ದ ಎಂದು ತಿಳಿದು ಬಂದಿದೆ.