ಸಿನಿಮಾ ಪ್ರದರ್ಶನಕ್ಕೆ ನಿರ್ಮಾಪಕರಿಂದ ಮಲ್ಟಿಪ್ಲೆಕ್ಸ್ ಮಾದರಿ ಪರ್ಸಂಟೇಜ್ ಗೆ ಮನವಿ

ಬಳ್ಳಾರಿ ಜ 08 : ಮಲ್ಟಿಪ್ಲೆಕ್ಸ್ ಥೇಟರ್ ಗಳ ಮಾದರಿಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಬಾಡಿಗೆ ನಿಗಧಿ ಕೈ ಬಿಟ್ಟು ವ್ಯವಹಾರದಲ್ಲಿ ಪರ್ಸಂಟೇಜ್ ನೀಡುವಂತೆ ಸಿನಿಮಾ ನಿರ್ಮಾಪಕರೊಂದಿಗೆ ಮಾತುಕತೆ ನಡೆದಿದ್ದು ಇದು ಅಂತಿಮ ನಿರ್ಣಯಕ್ಕೆ ಬರಬೇಕಿದೆ ಎಂದು ಸಿನಿಮಾ ಪ್ರದರ್ಶಕರ ಸಂಘದ ರಾಜ್ಯ ಅಧ್ಯಕ್ಷ ಆರ್.ಆರ್.ಓದುಗೌಡ ಹೇಳಿದ್ದಾರೆ.
ಅವರು ಇಂದು ಶಿವ ಥೇಟರ್ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ. ಈ ಹಿಂದೆ ಬಾಡಿಗೆ ಮತ್ತು ಪರ್ಸಂಟೇಜ್ ಆಧಾರದ‌ ಮೇಲೆ ಸಿನಿಮಾ ಪ್ರದರ್ಶನ‌ ನಡೆಯುತ್ತಿತ್ತು. ಆದರೆ ಈಗ ಪ್ರೇಕ್ಷಕರ ಸಂಖ್ಯೆ ಕುಸಿಯುತ್ತಿರುವುದರಿಂದ ಮಲ್ಟಿಪ್ಲೆಕ್ಸ್ ಥೇಟರ್ ಗಳ ಮಾದರಿಯಲ್ಲಿಯೇ ಪರ್ಸಂಟೇಜ್ ನೀಡಲು ನಿರ್ಮಾಕರ ಜೊತೆ ಮಾತುಕತೆ ಆಗಿದೆ. ಅವರು ಸಹ ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ. ಇದು‌ ಜಾರಿಗೆ ಬಂದರೆ ಥೇಟರ್ ಗಳ ಮಾಲೀಕರ ಸಂಕಷ್ಟ ಒಂದಿಷ್ಟು ಸುಧಾರಿಸಲಿದೆಂದರು.
ಕೋವಿಡ್ ನಿಂದ ಪ್ರೇಕ್ಷಕರು ಸಿನಿಮಾ ಮಂದಿರಗಳ ಕಡೆ ಬರುವುದು‌ ಕಡಿಮೆ ಆಗಿರುವುದರಿಂದ ಸಾಕಷ್ಟು ಸಿನಿಮಾ ಥೇಟರ್ ಮುಚ್ಚುತ್ತಿವೆ ಬಳ್ಳಾರಿ‌ ಜಿಲ್ಲೆಯಲ್ಲಿ ಐದು ಥೇಟರ್ ಮುಚ್ಚಿವೆಂದರು.
ಅರ್ಧ ಪ್ರೇಕ್ಷಕರೊಂದಿಗೆ ಸಿನಿಮಾ ಪ್ರದರ್ಶನ ಕಷ್ಟ. ಈಗ ಬಸ್ , ವಿಮಾನ, ಕಲ್ಯಾಣ ಮಂಟಪ, ಹೊಟೇಲ್ ಗಳಲ್ಲಿ ಇಲ್ಲದ ಸಾಮಾಜಿಕ ಅಂತರ ಥೇಟರ್ ಗಳಿಗೆ ಮಾತ್ರ ಏಕೆ. ಅದನ್ನು ತೆರವುಗೊಳಿಸಲು ಕೇಳಿದೆ. ಅಲ್ಲದೆ ಕರೋನಾ ಕಾಲದಲ್ಲಿ ಸಿನಿಮಾ ಪ್ರದರ್ಶನ‌ ನಡೆಸದೆ ಇರುವ ಕಾರಣ ವಿದ್ಯುತ್ ಮೀಟರ್ ಗಳ‌ ಕನಿಷ್ಟ ಶುಲ್ಕ ಮನ್ನಾ ಮಾಡುವುದು, ಥೇಟರ್ ಗಳ ರಿನಿವಲ್ ಶುಲ್ಕ ಹೆಚ್ಚಳ ಹಿಂದಕ್ಕೆ ಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದೆ ಅದನ್ನು ಸಧ್ಯದಲ್ಲೇ ಈಡೇರಿಸುವ ಭರವಸೆ ದೊರೆತಿದೆಂದರು.
ಸಿನಿಮಾಗಳ ಪ್ರದರ್ಶನಕ್ಕೆ ನಿರ್ಮಾಕರು ಸಹ ಹೆಚ್ಚಿನದಾಗಿ ಮುಂದೆ ಬರುತ್ತಿಲ್ಲ. ಅವರ ಬಳಿ ಸಿನಿಮಾಗಳು ಇಲ್ಲ. ಅವರು ನಮಗೆ ಸಿನಿಮಾಗಳ ಪಟ್ಟಿ‌ ನೀಡಿದರೆ ಸಿನಿಮಾ ಪ್ರದರ್ಶನಕ್ಕೆ ನಾವೂ ಮುಂದಾಗಬಹುದು ಎಂದರು.
ಸುದ್ದಿಗೋಷ್ಟಿಯಲ್ಲಿದ್ದ ಸಿನಿಮಾ ಥೇಟರ್ಗಳ ಮಾಲೀಕರ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಸಂಕ್ರಾಂತಿಗೆ ನಗರದ ಶಿವ ಮತ್ತು ಗಂಗಾ ಥೇಟರ್ ಆರಂಭವಾಗಲಿವೆ ಎಂದರು.
ಸಿನಿಮಾ ಥೇಟರ್ ಗಳ‌ ಮಾಲೀಕರಾದ ಕೊಟ್ರೇಶ್, ಕೃಷ್ಣಮೂರ್ತಿ, ಡಿ.ಮಲ್ಲಿಕಾರ್ಜುನ, ಚಂದ್ರೇಗೌಡ, ಮಧುಸೂಧನ, ಭಾಸ್ಕರ್, ಜಿ.ಲಕ್ಷ್ಮೀಪತಿ ಮತ್ತು ರಾಮರಾವ್, ಕಪ್ಪಗಲ್ಲು ಚಂದ್ರಶೇಖರ ಆಚಾರ್ ಮೊದಲಾದವರು ಇದ್ದರು.