ಸಿನಿಮಾ-ಧಾರವಾಹಿಗಳಲ್ಲ್ಲಿ ಮಕ್ಕಳುನಟಿಸಲು ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ

ಕಲಬುರಗಿ.ಏ.07:ಸಿನಿಮಾ ಇಲ್ಲವೇ ಧಾರವಾಹಿಗಳಲ್ಲಿ ಮಕ್ಕಳು ನಟಿಸಬೇಕಾದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಬಾಲ ನಟರು, ಇಲ್ಲವೇ ನಟಿಯರ ಪಾತ್ರಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳಲು ಇಚ್ಛಿಸುವ ಸಿನಿಮಾ ನಿರ್ದೇಶಕರು, ಇಲ್ಲವೇ ನಿರ್ಮಾಪಕರು, ಆಯೋಜಕರು ಮೊದಲು ಜಿಲ್ಲಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪತ್ರ ಪಡೆಯಬೇಕೆಂದು ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಅಧ್ಯಕ್ಷರು ಆದ ಕಲಬುರಗಿ ಜಿಲ್ಲಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ರಾಜ್ಯ ಕಾರ್ಮಿಕ ಇಲಾಖೆಯು ಈ ಆದೇಶ ಹೊರಡಿಸಿದೆ. ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಬೇಕಾದರೆ ಮೊದಲು ಅವರು ಜಿಲ್ಲಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಧಾರವಾಹಿ ಇಲ್ಲವೇ ಸಿನಿಮಾಗಳಲ್ಲಿ ಮಕ್ಕಳಿಗೆ ಮಾತ್ರ ನೀಡುವ ಸಿನಿಮಾ-ಸೀರಿಯಲ್ ತಂಡಗಳು ಅವರನ್ನು ದಿನದಲ್ಲಿ ಐದು ಗಂಟೆ ಮಾತ್ರವೇ ನಟನೆಗೆ ಬಳಸಿಕೊಳ್ಳಬೇಕು. ಈ ರೀತಿ ಅವರನ್ನು ತಿಂಗಳಲ್ಲಿ 27 ದಿನ ಮಾತ್ರ ಬಳಸಿಕೊಳ್ಳಬೇಕು ಎಂದು ಸರ್ಕಾರ ಷರತ್ತು ವಿಧಿಸಿ, ಈ ನಿಯಮ ಉಲ್ಲಂಘಿಸಿದಂತೆ ಎಚ್ಚರಿಕೆ ಸಹ ನೀಡಿದೆ.

ಇನ್ನು ಮುಂದಿನ ದಿನಗಳಲ್ಲಿ ಮಕ್ಕಳನ್ನು ಚಿತ್ರಕತೆಗೆ ಅನುಗುಣವಾಗಿ ಜಿಲ್ಲಾಧಿಕಾರಿ ಅನುಮತಿ ಇಲ್ಲದೇ ಮಕ್ಕಳನ್ನು ಬಳಸಿಕೊಳ್ಳವುದು ಇದು ಕಾನೂನು ಉಲ್ಲಂಘನೆಯಾಗಲಿದ್ದು, ಕಾನೂನು ಉಲ್ಲಂಘಿಸುವ ಸಿನಿಮಾ ಹಾಗೂ ಧಾರವಾಹಿ ಜವಾಬ್ದಾರಿ ಹೊತ್ತ ಆಯೋಜಕರು, ನಿರ್ಮಾಪಕರ ವಿರುದ್ಧ ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಸರ್ಕಾರ ಎಚ್ಚರಿಕೆ ನೀಡಿದೆ ಅವರು ತಿಳಿಸಿದ್ದಾರೆ.