ಸಿನಿಮಾ ಚಿತ್ರೀಕರಣ: ತರಗತಿ ನಡೆಸಲು ಕಿರಿಕಿರಿ

ಮೈಸೂರು, ನ.12:- ಕಳೆದೊಂದು ವಾರದಿಂದ ಮೈಸೂರು ಮಹಾರಾಜ ಕಾಲೇಜು ಆವರಣದಲ್ಲಿ ಮಲೆಯಾಳಂ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದರಿಂದಾಗಿ ಕಳೆದ 7 ದಿನಗಳಿಂದ ಕಾಲೇಜಿನಲ್ಲಿ ತರಗತಿ ನಡೆಸಲು ಕಿರಿಕಿರಿ ಉಂಟಾಗುತ್ತಿದೆ ಎಂದು ಉಪನ್ಯಾಸಕರು ಅಸಮಾಧಾನವನ್ನು ಹೊರಹಾಕಿದ್ದಾರೆ.
ಮಲಯಾಳಂನ ಜನಗಣಮನ' ಸಿನಿಮಾದ ಚಿತ್ರೀಕರಣ ಮಹಾರಾಜ ಕಾಲೇಜಿನ ಆವರಣದಲ್ಲಿ ನಡೆಯುತ್ತಿದೆ. ನಟ ಸುಕುಮಾರನ್ ಅಭಿನಯದಜನಗಣಮನ’ ಸಿನಿಮಾದ ನ್ಯಾಯಾಲಯ ದೃಶ್ಯದ ಚಿತ್ರೀಕರಣ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಉಪನ್ಯಾಸಕರು ಅಸಮಾಧಾನ ಹೊರಹಾಕಿದ್ದಾರೆ.
ಸಿನಿಮಾ ಚಿತ್ರೀಕರಣ ಕಾಲೇಜಿನ ಆವರಣದಲ್ಲಿಯೇ ನಡೆಯುತ್ತಿರುವ ಹಿನ್ನಲೆಯಲ್ಲಿ ತರಗತಿಗಳಿಗೆ ಬಾರದೆ ವಿದ್ಯಾರ್ಥಿಗಳು ಚಕ್ಕರ್ ಹಾಕುತ್ತಿದ್ದಾರೆ. ಪೆÇಲೀಸ್ ಜೀಪ್, ವ್ಯಾನ್ ಓಡಾಟದ ದೃಶ್ಯ ಚಿತ್ರೀಕರಣ ಆಗಿರುವುದರಿಂದ ಉಪನ್ಯಾಸಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಅಲ್ಲದೇ ಧ್ವನಿ ವರ್ಧಕಗಳ ಬಳಕೆಯಿಂದ ತೊಂದರೆಯಾಗುತ್ತಿದೆ. ತರಗತಿಗಳಿಗೆ ಚಕ್ಕರ್ ಹಾಕಿದ ವಿದ್ಯಾರ್ಥಿಗಳು ಶೂಟಿಂಗ್ ವೀಕ್ಷಣೆಯಲ್ಲಿ ನಿರತರಾಗಿದ್ದಾರೆ.