ಸಿಧುಗೆ ೧೪ ದಿನಗಳ ಜೈಲು

ದೆಹಲಿ, ಎ.೨೦- ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ದೆಹಲಿಯಲ್ಲಿ ಹಿಂಸಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನಟ ದೀಪ್ ಸಿಧುಗೆ ದೆಹಲಿ ಹೈಕೋರ್ಟ್ ೧೪ ದಿನಗಳ ಕಾಲ ಜೈಲಿಗೆ ಕಳುಹಿಸಿದೆ. ಇದೇ ವೇಳೆ ನಾಲ್ಕು ದಿನಗಳ ಅವಧಿಗೆ ವಶಕ್ಕೆ ಪಡೆದುಕೊಳ್ಳುವ ಸಲುವಾಗಿ ನಗರ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿದೆ.
ದೆಹಲಿ ಕೆಂಪು ಕೋಟೆಯಲ್ಲಿ ನಡೆದ ಗಲಭೆಯ ವೇಳೆ ಕಟ್ಟಡಕ್ಕೆ ಹಾನಿ ಮಾಡಿದ ಪ್ರಕರಣದಲ್ಲಿ ಪ್ರಾಚ್ಯವಸ್ತುಸಂಶೋಧನಾಇಲಾಖೆ ಹೂಡಿದ್ದ ಕೇಸ್‌ಗೆ ಸಂಬಂಧಿಸಿದಂತೆ ನಗರ ಪೊಲೀಸರು ಸಿಧುವನ್ನು ವಶಕ್ಕೆ ಪಡೆದು ಕಸ್ಟಡಿ ವಿಚಾರಣೆ ನಡೆಸಲು ಯತ್ನಿಸಿದ್ದರು. ಈ ಸಂಬಂಧ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಇದೀಗ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಗಜೇಂದ್ರ ಸಿಂಗ್ ನಗಾರ್ ಅವರು ಈ ಮನವಿಯನ್ನು ತಿರಸ್ಕರಿಸಿ, ೧೪ ದಿನಗಳ ಅವಧಿಗೆ ಜೈಲಿಗೆ ಕಳುಹಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧುಗೆ ಶನಿವಾರ ಜಾಮೀನು ಮಂಜೂರಾಗಿತ್ತು. ಆದರೆ ಮಂಜೂರಾದ ಕೆಲವೇ ಗಂಟೆಯಲ್ಲೇ ಕೆಂಪು ಕೋಟೆಗೆ ಹಾನಿ ಮಾಡಲಾದ ಪ್ರಕರಣದಲ್ಲಿ ಸಿಧುವನ್ನು ಮತ್ತೆ ಬಂಧಿಸಲಾಗಿತ್ತು.