ಸಿದ್ಧೇಶ್ವರ ಸ್ವಾಮೀಜಿಗಳ ಭೇಟಿಯಾದ ಸಚಿವ ಶ್ರೀರಾಮುಲು

ವಿಜಯಪುರ,ಡಿ 30: ನಗರಕ್ಕೆ ಆಗಮಿಸಿದ ಸಚಿವ ಬಿ. ಶ್ರೀರಾಮುಲು, ಮುಖಂಡರ ಜೊತೆಗೂಡಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ದರ್ಶನಕ್ಕೆ ಜ್ಞಾನಯೋಗಾಶ್ರಮಕ್ಕೆ ತೆರಳಿದರು.ಶ್ರೀಗಳಿಗೆ ಅನಾರೋಗ್ಯ ವದಂತಿ ಹಿನ್ನೆಲೆಯಲ್ಲಿ ಭೇಟಿಗೆ ಆಗಮಿಸಿದ ಸಚಿವರು, ಕೆಲವೇ ಆಪ್ತರ ಜೊತೆ ಸ್ವಾಮೀಜಿಗಳಿದ್ದ ಕೋಣೆಗೆ ಹೋಗಿ ಸಿದ್ದೇಶ್ವರ ಶ್ರೀಗಳನ್ನು ಭೇಟಿ ಮಾಡಿ ಹೊರಗೆ ಬಂದರು
ಸಿದ್ದೇಶ್ವರ ಶ್ರೀಗಳ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವ ಶ್ರೀರಾಮುಲು, ಪೂಜ್ಯರ ಆರೋಗ್ಯ ವಿಚಾರಿಸಲು ಆಗಮಿಸಿ, ಶ್ರೀಗಳ ದರ್ಶನ ಪಡೆದಿದ್ದೇನೆ.ಶ್ರೀಗಳಿಗೆ ಚಿಕಿತ್ಸೆ ನೀಡುವ ವೈದ್ಯರ ಜೊತೆಗೆ ಮಾತನಾಡಿದ್ದೇನೆ. ಸ್ವಾಮೀಜಿಗಳ ಆರೋಗ್ಯದ ಕುರಿತು ಸಿಎಂ ಅವರನ್ನು ಕಿರಿಯ ಶ್ರೀಗಳ ಜೊತೆಗೆ ಮಾತನಾಡಿಸಿದ್ದೇನೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮೀತ ಶಾ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದು ಬಳಿಕ ಸ್ವಾಮೀಜಿ ಅವರ ಭೇಟಿಗೆ ಬರುವುದಾಗಿ ಸಿಎಂ ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.
ನಾನು ಕಳೆದ 20 ವರ್ಷಗಳಿಂದ ಮಠದ ಶಿಷ್ಯನಾಗಿ ಭಕ್ತನಾಗಿ ಶ್ರೀಗಳ ಸಂಪರ್ಕದಲ್ಲಿದ್ದೇನೆ. ಸ್ವಾಮೀಜಿ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆಯಾಗುತ್ತಿದೆ ಎಂದರು.ಪಂಚಮಸಾಲಿ, ಇತರೆ ಲಿಂಗಾಯತ ಸಮಾಜಕ್ಕೆ 2ಡಿ ಮೀಸಲಾತಿ ಘೋಷಣೆ ವಿಚಾರಈ ಮಧ್ಯೆ, ಪಂಚಮಸಾಲಿ ಹಾಗೂ ಇತರೆ ಲಿಂಗಾಯಿತ ಸಮುದಾಯಗಳಿಗೆ 2ಡಿ ನಡಿ ಮೀಸಲಾತಿ ಘೋಷಣೆ ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಸಚಿವ ಬಿ. ಶ್ರೀರಾಮುಲುಈ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ತಿಳಿಸಿದರು.