ಸಿದ್ಧೇಶ್ವರ ಶ್ರೀ ನುಡಿ ನಮನ ಕಾರ್ಯಕ್ರಮ 23ಕ್ಕೆ

ಬೀದರ್:ಜ.19: ಸಿದ್ಧೇಶ್ವರ ಸ್ವಾಮೀಜಿ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯು ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜ. 23 ರಂದು ಸಂಜೆ 6ಕ್ಕೆ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ.

ನಗರದಲ್ಲಿ ನಡೆದ ಸಮಿತಿಯ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಜಿಲ್ಲೆಯ ಸರ್ವ ಪೂಜ್ಯರನ್ನು ಆಹ್ವಾನಿಸಲು ನಿರ್ಣಯಿಸಲಾಯಿತು.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸಿದ್ಧೇಶ್ವರ ಸ್ವಾಮೀಜಿ ಅವರ ಅನುಯಾಯಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಯಿತು.

ಸಮಿತಿಯ ಪ್ರಮುಖರಾದ ಬಿ.ಜಿ. ಶೆಟಕಾರ್, ಬಸವರಾಜ ಧನ್ನೂರ, ಶಿವಶರಣಪ್ಪ ವಾಲಿ, ಬಿ.ಎಸ್. ಕುದರೆ, ಡಾ. ಕೌಜಲಗಿ, ಡಾ. ಸುಭಾಷ್ ಬಶೆಟ್ಟಿ, ಸೋಮಶೇಖರ ಪಾಟೀಲ ಗಾದಗಿ, ಸಿದ್ದಯ್ಯ ಕಾವಡಿಮಠ, ವಿಶ್ವನಾಥ ಕಾಜಿ, ವಿರೂಪಾಕ್ಷ ಗಾದಗಿ, ರಮೇಶ ಚಿಲ್ಲರ್ಗಿ, ಜಯಶಂಕರ ಘಾಳೆ, ವೀರಶೆಟ್ಟಿ ಮಣಗೆ, ಚಂದ್ರಕಾಂತ ಶೆಟಕಾರ್, ವೀರಭದ್ರಪ್ಪ ಬುಯ್ಯಾ, ಶರಣಪ್ಪ ಮಿಠಾರೆ, ರಾಜೇಂದ್ರ ಜೊನ್ನಿಕೇರಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.